Advertisement

ಪ್ರಮೋದ್‌ ಸಾಂದರ್ಭಿಕ ಶಿಶು

02:38 PM Apr 04, 2019 | Naveen |

ಕಡೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಸಾಂದರ್ಭಿಕ ಶಿಶು ಮಾತ್ರ ಎಂದು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು. ತಾಲೂಕಿನ ಸಖರಾಯಪಟ್ಟಣದಲ್ಲಿ ಬುಧವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಮತಯಾಚಿಸಿ ಮಾತನಾಡಿದರು.

Advertisement

ಪ್ರಮೋದ್‌ ಮಧ್ವರಾಜ್‌ ಯಾವ ಪಕ್ಷದ ಅಭ್ಯರ್ಥಿ ಎಂಬುದು ಅವರಿಗೇ ಗೊತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವಂತೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ಹೇಗೆ ಸಾಂದರ್ಭಿಕ ಶಿಶುವೋ ಹಾಗೇ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದಿಂದ ಮಧ್ವರಾಜ್‌ ಸಹ ಒಬ್ಬರು. ಯಾರೂ ಇಲ್ಲದ ಕಾರಣ ಪ್ರಮೋದ್‌ ಅವರನ್ನು ಕರೆತಂದಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಾಲಮನ್ನಾ ಮಾಡುತ್ತೇವೆ ಎಂದು ಬರಿ ತುಪ್ಪ ಹಚ್ಚುವ ಕೆಲಸವಾಗುತ್ತಿದೆ. ಬರಗಾಲದ ಕಾಮಗಾರಿಯೂ ನಡೆದಿಲ್ಲ ಎಂದು ಆರೋಪಿಸಿದರು.

ಪ್ರಮೋದ್‌ ಉಡುಪಿ ಬಿಟ್ಟರೆ ಎಲ್ಲಿಗೆ ಬಂದಿದ್ದಾರೆ. ಪಕ್ಕದ ಕುಂದಾಪುರ, ಕಾರ್ಕಳಕ್ಕಾಗಲಿ ಹೋಗಿಲ್ಲ. ಸಚಿವರಾಗಿದ್ದಾಗ ಚಿಕ್ಕಮಗಳೂರಿಗೆ ಎಷ್ಟು ಬಾರಿ ಬಂದಿದ್ದಾರೆ ಎಂದು ಅವರನ್ನೇ ಕೇಳಬೇಕು. ಅವರಿಗೆ ತಾನು ಜೆಡಿಎಸ್‌ ಅಭ್ಯರ್ಥಿಯೋ ಅಥವಾ ಕಾಂಗ್ರೆಸ್‌ ಅಭ್ಯರ್ಥಿಯೋ ಎಂಬ ಗೊಂದಲವಿದೆ. ಎರಡೂ ಚಿಹ್ನೆಗಳನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ. ಇಂತಹ ಗೊಂದಲದ ಅಭ್ಯರ್ಥಿ ನಮಗೆ ಬೇಕೆ ? ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡೆ ಎಚ್‌.ಸಿ. ಕಲ್ಮರುಡಪ್ಪ ಮಾತನಾಡಿ, ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಇಂದು ನಿಂತಿದ್ದರೆ ಅದು ಮೋದಿಯವರ ಸರ್ಕಾರದ ಕೊಡುಗೆ. ದೇಶ ಮೊದಲು ನಂತರ ಎಲ್ಲವೂ ಎನ್ನುವ ಮೋದಿಯಂತಹ ನಾಯಕ ನಮಗೆ ಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ 22 ರಿಂದ 23 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಭರವಸೆ ಇದೆ ಎಂದರು.

Advertisement

ಜಿಪಂ ಸದಸ್ಯ ವಿಜಯಕುಮಾರ್‌, ಸೋಮಶೇಖರ್‌, ಬೆಳವಾಡಿ ರವೀಂದ್ರ, ಜಸಿಂತ ಅನಿಲ್‌ ಕುಮಾರ್‌ ಮಾತನಾಡಿದರು. ಬಿಜೆಪಿ ಮುಖಂಡರಾದ ಶ್ರೀನಿವಾಸ ಗೌಡ, ಚಂದ್ರಶೇಖರಪ್ಪ, ಉಮೇಶ್‌, ಪಾದಮನೆ ದಿನೇಶ್‌, ರಾಜು, ಪ್ರದೀಪನಾಯ್ಕ, ರವಿನಾಯ್ಕ, ಸೌಭಾಗ್ಯ, ಶಶಿಧರ್‌, ಚಿದಾನಂದ ಹಾಗೂ ನೂರಾರು ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳಲ್ಲಿ ಮತಯಾಚಿಸಿದರು.

ನರೇಂದ್ರ ಮೋದಿಯವರ ಚಿಂತನೆಯಂತೆ ನಮ್ಮ ರಾಷ್ಟ್ರವು ಆರ್ಥಿಕವಾಗಿ ಆರನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಮೋದಿಯವರು ಬಡವರಿಗಾಗಿ, ರೈತರಿಗಾಗಿ ಹಲವಾರು ಯೋಜನೆಗಳು, ರಾಷ್ಟ್ರ ರಕ್ಷಣೆಗಾಗಿ ಕೈಗೊಂಡ ದಿಟ್ಟ ಕ್ರಮ ಎಲ್ಲರ ಮನಮುಟ್ಟಿದೆ. ಯುವಕರ, ವಿದ್ಯಾವಂತರ ಮತ್ತು ಬುದ್ಧಿವಂತರ ದೇಶ ಭಾರತವಾಗಿದೆ. ಇಲ್ಲಿರುವ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳುವಂತಹ ವ್ಯಕ್ತಿ ಬೇಕಾಗಿದ್ದಾರೆ. ನಮ್ಮ ರಾಷ್ಟ್ರವನ್ನು ಆರ್ಥಿಕವಾಗಿ ಮತ್ತು ರಕ್ಷಣೆಯಲ್ಲಿ ಒಂದು ಅಥವಾ ಎರಡು ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಮೋದಿಯಂತಹ ದಿಟ್ಟ ನಾಯಕ ನಮ್ಮ ಜನಕ್ಕೆ ಬೇಕು. ಅದಕ್ಕಾಗಿ ಬಿಜೆಪಿ ಬೆಂಬಲಿಸಿ ಶೋಭಾ ಕರಂದ್ಲಾಜೆ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next