Advertisement

ಉಡುಪಿ –ಚಿಕ್ಕಮಗಳೂರು ಕ್ಷೇತ್ರ ಅಮೃತ್‌ ಶೆಣೈ ಬಂಡಾಯ ಬಾವುಟ

01:19 AM Mar 27, 2019 | Team Udayavani |

ಉಡುಪಿ: ಎಐಸಿಸಿ ಸದಸ್ಯ, ಕಾಂಗ್ರೆಸ್‌ನಿಂದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಉಡುಪಿಯ ಅಮೃತ್‌ ಶೆಣೈ ಅವರು ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟ ಸಂದರ್ಭದಲ್ಲಿಯೇ ನೊಂದಿದ್ದೆ.

Advertisement

ಅನಂತರ ಎರಡು ಜಿಲ್ಲೆಗಳ ಮುಖಂಡರು ಸಾಕಷ್ಟು ಪ್ರಯತ್ನ ನಡೆಸಿದರು. ಆಗ ಆಶಾಭಾವನೆ ಇತ್ತು. ಆದರೆ ಮೈತ್ರಿ ಅಭ್ಯರ್ಥಿಯನ್ನಾಗಿ ಪ್ರಮೋದ್‌ ಮಧ್ವರಾಜ್‌ ಅವರನ್ನು ಕಣಕ್ಕಿಳಿಸಲಾಯಿತು. ಬಲಿಷ್ಠವಾಗಿರುವ ಪಕ್ಷಕ್ಕೆ ಸೀಟು ನೀಡುವುದು ಚುನಾವಣಪೂರ್ವ ಮೈತ್ರಿಯ ಅಘೋಷಿತ ನಿಯಮ. ಆದರೆ ನಿಯಮ ಪಾಲಿಸಿಲ್ಲ. ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ನರೇಂದ್ರ ಮೋದಿ ಮತ್ತು ಶೋಭಾ ವಿರುದ್ಧ ವಾತಾವರಣ ನಿರ್ಮಾಣ ವಾಗುವಂತೆಯೂ ಮಾಡಿದ್ದೆವು. ಇಲ್ಲಿ ಕಾಂಗ್ರೆಸ್‌ ಗೆಲ್ಲುವ ಅವಕಾಶವಿತ್ತು. ನನಗೆ ತುಂಬಾ ಬೇಸರವಾಗಿದೆ. ನನ್ನ ಅಭಿಮಾನಿಗಳು, ಗೆಳೆಯರ ಒತ್ತಡವೂ ಇದೆ. ಹಾಗಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ನಾಮಪತ್ರ ವಾಪಸ್‌ ಪಡೆಯುವುದಿಲ್ಲ.

ಪ್ರಮೋದ್‌ ಕೂಡ ನನ್ನ ಜತೆ ಮಾತನಾಡಿದ್ದಾರೆ. ನಿರ್ಧಾರ ಬದಲಿಸುವುದಿಲ್ಲ ಎಂದು ಹೇಳಿದ್ದೇನೆ. ಕಾಂಗ್ರೆಸ್‌ ಸದಸ್ಯತ್ವಕ್ಕೆ, ಎಐಸಿಸಿ ಸದಸ್ಯಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಸಿದ್ಧನಿದ್ದೇನೆ ಎಂದು ಅಮೃತ್‌ ಶೆಣೈ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೆ ಅಮೃತ್‌ ಶೆಣೈ ಅವರು ಅಧ್ಯಕ್ಷರಾಗಿರುವ ಸಹಬಾಳ್ವೆ ಸಂಘಟನೆಯ ನೇತೃತ್ವದಲ್ಲಿ ಉಡುಪಿ ಯಲ್ಲಿ ಸರ್ವಜನೋತ್ಸವ ಕಾರ್ಯಕ್ರಮ ನಡೆದಿತ್ತು. ಅನಂತರ ಚುನಾವಣ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ಕೂಡ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next