Advertisement

ಸಿಆರ್‌ಪಿಎಫ್ ಮಹಿಳಾ ವಿಂಗ್‌ ಸುಪರ್ದಿಗೆ ಸ್ಟ್ರಾಂಗ್‌ ರೂಂ

03:41 AM Apr 20, 2019 | Team Udayavani |

ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಮತಯಂತ್ರ ಗಳನ್ನು ಉಡುಪಿ ಅಜ್ಜರಕಾಡಿನ ಸೈಂಟ್‌ ಸಿಸಿಲಿ ಶಾಲೆಯ ಸ್ಟ್ರಾಂಗ್‌ ರೂಂನಲ್ಲಿ ಪೇರಿಸಿಡಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

ಭದ್ರತೆಯ ಪೂರ್ಣ ಜವಾಬ್ದಾರಿ ಯನ್ನು ಕೇಂದ್ರ ಮೀಸಲು ಪೊಲೀಸ್‌ ಪಡೆಯ 35 ಮಂದಿ ಮಹಿಳಾ ಸಶಸ್ತ್ರ ಧಾರಿಗಳಿಗೆ ವಹಿಸಲಾಗಿದೆ. ಇವರ ಜತೆ ಸಿಆರ್‌ಪಿಎಫ್ನ ನಾಲ್ವರು ಪುರುಷ ಭದ್ರತಾ ಸಿಬಂದಿಯೂ ಇದ್ದಾರೆ.

ಹೊರಗಿನ ಭದ್ರತೆಗೆ ತಲಾ 10 ಮಂದಿಯ 2 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡಗಳಿವೆ. ಎರಡು ವಿಧ್ವಂಸಕ ಕೃತ್ಯ ನಿರೋಧಕ ವಾಹನಗಳು ಸನ್ನದ್ಧವಾಗಿವೆ. ಎಲ್ಲ ಕೊಠಡಿಗಳ ಎಲ್ಲ ಬಾಗಿಲುಗಳಿಗೂ ಲೋಹ ಶೋಧಕ ಅಳವಡಿಸಲಾಗಿದ್ದು, 105ರಷ್ಟು ಸಿಸಿ ಕೆಮರಾಗಳ ಕಣ್ಗಾವಲಿದೆ. 69 ಮಂದಿ ಹೆಡ್‌ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಮತ್ತು ಕಾನ್‌ಸ್ಟೆಬಲ್‌ಗ‌ಳು ಕರ್ತವ್ಯ ನಿರ್ವಹಿಸಲಿದ್ದಾರೆ. ಹೊರಗಿನ ಭದ್ರತೆಯ ಮೇಲೆ ಓರ್ವ ಡಿವೈಎಸ್‌ಪಿ,ಓರ್ವ ಸರ್ಕಲ್‌ ಇನ್ಸ್‌ಪೆಕ್ಟರ್‌ ಮತ್ತು ಇಬ್ಬರು ಪಿಎಸ್‌ಐಗಳು ನಿಗಾ ವಹಿಸಲಿದ್ದಾರೆ. ಅಧಿಕಾರಿ, ಸಿಬಂದಿ ಸೇರಿ ಸುಮಾರು 150ಕ್ಕೂ ಅಧಿಕ ಮಂದಿ ಭದ್ರತಾ ಕರ್ತವ್ಯದಲ್ಲಿದ್ದಾರೆ.

ನಾಲ್ಕು ಕೇಂದ್ರಗಳು,
18 ಸ್ಟಾಂಗ್‌ ರೂಮ್‌ಗಳು
ಸೈಂಟ್‌ ಸಿಸಿಲಿ ಶಾಲೆಯಲ್ಲಿ ಅಗತ್ಯವಿರುವಷ್ಟು ಕೊಠಡಿಗಳು ಲಭ್ಯ ಇರುವುದರಿಂದ ಈ ಬಾರಿಯ ಸ್ಟ್ರಾಂಗ್‌ ರೂಮ್‌ ಆಗಿ ಈ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡವೂ ಸೇರಿದಂತೆ ಚತುಷೊRàನ ಆಕಾರದಂತಿರುವ ಇಡೀ ಕಟ್ಟಡವನ್ನು ನಾಲ್ಕು ಕೇಂದ್ರಗಳಾಗಿ ವಿಭಜಿಸಲಾಗಿದ್ದು ಒಟ್ಟು 18 ಸ್ಟ್ರಾಂಗ್‌ ರೂಮ್‌ಗಳನ್ನು ಸಿದ್ಧಪಡಿಸಲಾಗಿದೆ. ಚಿಕ್ಕಮಗಳೂರು ಮತ್ತು ಶೃಂಗೇರಿ ವಿ.ಸಭಾ ಕ್ಷೇತ್ರಗಳಿಗೆ ತಲಾ 3 ಹಾಗೂ ಉಳಿದ ಎಲ್ಲ ವಿ.ಸಭಾ ಕ್ಷೇತ್ರಗಳಿಗೆ ತಲಾ 2 ಸ್ಟ್ರಾಂಗ್‌ ರೂಮ್‌ಗಳಿವೆ.

ಕೇಂದ್ರ 1ರ ನೆಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ1, 2) ಕಾಪು, ಮೊದಲ ಅಂತಸ್ತಿನಲ್ಲಿ (ಕೊ. ಸಂಖ್ಯೆ 3, 4) ಕಾರ್ಕಳ, ಇದೇ ಅಂತಸ್ತಿನ ಕೊ. ಸಂಖ್ಯೆ 5 ಮತ್ತು 6ರಲ್ಲಿ ಕುಂದಾಪುರ ಕ್ಷೇತ್ರಗಳ ಸ್ಟ್ರಾಂಗ್‌ ರೂಂ ಇದೆ.
ಕೇಂದ್ರ ಸಂಖ್ಯೆ 2ರ ನೆಲ ಅಂತಸ್ತಿನಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ (ಕೊಠಡಿ ಸಂಖ್ಯೆ 10, 11, 12) ಸ್ಟ್ರಾಂಗ್‌ ರೂಂ ಇದೆ. ಇದೇ ಕೇಂದ್ರದ ಮೊದಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ 13,14, 15) ಶೃಂಗೇರಿ ಕ್ಷೇತ್ರದ ಮತಯಂತ್ರಗಳಿರುವ ಸ್ಟ್ರಾಂಗ್‌ ರೂಂಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸಂಖ್ಯೆ 3ರ ನೆಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ 16, 17) ತರಿಕೆರೆ ಕ್ಷೇತ್ರದ ಮತಯಂತ್ರಗಳಿಗೆ ಸ್ಟ್ರಾಂಗ್‌ ರೂಂ, ಮೊದಲ ಅಂತಸ್ತಿನಲ್ಲಿ (ಕೊಠಡಿ ಸಂಖ್ಯೆ 19, 20) ಮೂಡಿಗೆರೆ ಕ್ಷೇತ್ರದ ಸ್ಟ್ರಾಂಗ್‌ ರೂಂ ಇದೆ. 4ನೇ ಕೇಂದ್ರದ ಮೊದಲ ಅಂತಸ್ತಿನಲ್ಲಿ(ಕೊಠಡಿ ಸಂಖ್ಯೆ 21, 22) ಉಡುಪಿ ಕ್ಷೇತ್ರದ ಮತಯಂತ್ರಗಳ ಸ್ಟ್ರಾಂಗ್‌ ರೂಮ್‌ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next