Advertisement

Udupi-Chikkamagaluru ಲೋಕಸಭಾ ಕ್ಷೇತ್ರ: ಮಹಿಳಾ ಮತದಾರರದ್ದೇ ಪ್ರಾಬಲ್ಯ

01:24 AM Apr 21, 2024 | Team Udayavani |

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಯಾವುದೇ ಅಭ್ಯರ್ಥಿ ಗೆಲ್ಲಬೇಕಾದರೆ ಮಹಿಳಾ ಮತದಾರರ ಮನವೊಲಿಸುವುದು ಮುಖ್ಯ. ಕಾರಣ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರದಲ್ಲೂ ಮಹಿಳೆಯರದ್ದೇ ಪ್ರಾಬಲ್ಯ.

Advertisement

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15,72,958 ಮತದಾರರಿದ್ದಾರೆ. ಇದರಲ್ಲಿ 38 ತೃತೀಯ ಲಿಂಗಿಯರು ಸೇರಿದ್ದಾರೆ. 8,10,362 ಮಹಿಳೆ ಹಾಗೂ 7,62,558 ಪುರುಷ ಮತದಾರರಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರಲ್ಲಿ ಪುರುಷರಿಗಿಂತ 7,985 ಮಹಿಳಾ ಮತದಾರರು, ಉಡುಪಿಯಲ್ಲಿ 7,718, ಕಾಪುವಿನಲ್ಲಿ 7,890, ಕಾರ್ಕಳದಲ್ಲಿ 7,679, ಶೃಂಗೇರಿಯಲ್ಲಿ 4,335, ಮೂಡಿಗೆರೆಯಲ್ಲಿ 4,949, ಚಿಕ್ಕಮಗಳೂರಿನಲ್ಲಿ 4,408 ಹಾಗೂ ತರೀಕೆರೆಯಲ್ಲಿ 2,840 ಮಹಿಳಾ ಮತದಾರರು ಪುರುಷ ಮತದಾರರಿಗಿಂತ ಹೆಚ್ಚಿದ್ದಾರೆ. ಒಟ್ಟಾರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 47,804 ಮಹಿಳಾ ಮತದಾರರು ಹೆಚ್ಚಿದ್ದಾರೆ. ಇದರಲ್ಲಿ ಉಡುಪಿಯ ನಾಲ್ಕು ವಿಧಾನಸಭಾ ಕ್ಷೇತ್ರದ 8,12,148 ಮತದಾರರಲ್ಲಿ 31,272 ಮಹಿಳಾ ಮತದಾರರು ಪುರುಷ ಮತರಾರರಗಿಂತ ಅಧಿಕವಿದ್ದಾರೆ. ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರದ 7,60,810 ಮತದಾರರಲ್ಲಿ 16,532 ಮಹಿಳಾ ಮತದಾರರು ಹೆಚ್ಚಿದ್ದಾರೆ.

ಮಹಿಳಾ ಅಭ್ಯರ್ಥಿಯಿಲ್ಲ
ಕ್ಷೇತ್ರದಲ್ಲಿ 13 ಮಂದಿ ನಾಮಪತ್ರ ಸಲ್ಲಿಸಿದವರಲ್ಲಿ ಓರ್ವರು ಮಹಿಳಾ ಅಭ್ಯರ್ಥಿ ಇದ್ದರು. ಆದರೆ, ನಾಮಪತ್ರ ಪರಿಶೀಲನೆ ವೇಳೆ ಮೂವರದ್ದು ಕ್ರಮಬದ್ಧವಾಗಿಲ್ಲದೇ ಇರುವುದರಿಂದ ತಿರಸ್ಕೃತವಾಗಿತ್ತು. ಅದರಲ್ಲಿ ಮಹಿಳಾ ಅಭ್ಯರ್ಥಿಯ ನಾಮಪತ್ರವು ಸೇರಿತ್ತು. ಸದ್ಯ ರಾಷ್ಟ್ರಿಯ ಪಕ್ಷ ಹಾಗೂ ಎಲ್ಲ ಪಕ್ಷೇತರ ಅಭ್ಯರ್ಥಿಗಳು ಪುರುಷರೇ ಆಗಿದ್ದಾರೆ.

ಮಹಿಳಾ ಮತ ಸೆಳೆಯಲು ಯತ್ನ
ಎರಡೂ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ತಮ್ಮ ಸರಕಾರಗಳ ಸಾಧನೆ ಮತ್ತು ಜನರಿಗೆ ನೀಡಿರುವ ವಿವಿಧ ಸೌಲಭ್ಯದ ಆಧಾರದಲ್ಲಿ ಮಹಿಳೆಯರಿಗೆ ನೀಡಿರುವ ವಿಶೇಷ ಸವಲತ್ತುಗಳನ್ನು ಕೇಂದ್ರೀಕರಿಸಿ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಆರಂಭಿಸಿದ್ದಾರೆ. ಮಹಿಳೆಯರಿನ್ನು ಸೇರಿಸಿ ವಿಶೇಷ ಪ್ರಚಾರ ಸಭೆ, ಬೂತ್‌ ಮಟ್ಟದ ಸಭೆ ಇತ್ಯಾದಿಗಳನ್ನು ಮಾಡಲಾಗುತ್ತಿದೆ. ಜತೆಗೆ ಮಹಿಳಾ ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯಲು ಬೇಕಾದ ವಿವಿಧ ತಂತ್ರಗಾರಿಕೆಯನ್ನೂ ಪ್ರದರ್ಶಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next