Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ನೇಜಾರು, ಹಾಲಾಡಿ ಮತ್ತು ಕುಂದಾಪುರದಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್ ತೆರೆಯಲಾಗಿದೆ. 1,270 ಮತಗಟ್ಟೆಗಳಿಗೆ ಸಿಎಪಿಎಫ್, 459 ಮತಗಟ್ಟೆಗಳಲ್ಲಿ ಮೈಕ್ರೋ ಅಬ್‌ಜರ್ವರ್, 18 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ರೂಪಿಸಲಾಗಿದೆ ಎಂದರು.
Related Articles
ಈವರೆಗೂ 94.67 ಲಕ್ಷ ಮೌಲ್ಯದ ಮದ್ಯ, 1.10 ಲಕ್ಷ ಮೌಲ್ಯದ ಡ್ರಗ್ಸ್, ಟಿ-ಶರ್ಟ್, ಪ್ಯಾಂಟ್, ಸಾðéಪ್ ಟೂಲ್ ಸೇರಿ 3.68 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 14.92 ಲಕ್ಷ ರೂ. ಮೌಲ್ಯದ ನಗದನ್ನು ಹೆಜಮಾಡಿ ಹಾಗೂ ಶೀರೂರು ಚೆಕ್‌ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
Advertisement
ಬಸ್ ಯಾನ ದರಇಳಿಸಲು ಮನವಿ
ಚುನಾವಣೆ ದಿನದಂದು ಅನೇಕರು ಊರಿಗೆ ಬರುವವರು ಇರುವುದರಿಂದ ಏಕಾಏಕಿ ಬಸ್ ದರ ಹೆಚ್ಚಿರುವುದರಿಂದ ಅನೇಕರು ಬಾರದೇ ಇರಬಹುದು. ಇದರಿಂದ ಮತದಾನ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮತದಾನಕ್ಕೆ ಬರುವವರ ಅನುಕೂಲಕ್ಕಾಗಿ ಬಸ್ ದರ ಹೆಚ್ಚಳ ಮಾಡದಂತೆ ಕರಾವಳಿಯ ಲಾಂಗ್ ರೂಟ್ (ವಿಶೇಷವಾಗಿ ಬೆಂಗಳೂರು-ಉಡುಪಿ) ಬಸ್ ಮಾಲಕರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು. ಉಡುಪಿಯಲ್ಲಿ ಶಾಲೆ ಬಸ್ ಬಳಕೆ
ಚುನಾವಣೆಯಂದು ಜಿಲ್ಲೆಯಲ್ಲಿ ಸರಕಾರಿ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಎಲ್ಲ ರೂಟ್ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಈ ಬಾರಿ ಚುನಾವಣ ಕಾರ್ಯಕ್ಕೆ ಬಹುತೇಕ ಶಾಲಾ ಬಸ್‌ಗಳನ್ನೇ ಬಳಕೆ ಮಾಡಿಕೊಂಡಿರುವುದರಿಂದ ಸರಕಾರಿ ಬಸ್ ಸೇವೆ ಜನಸಾಮಾನ್ಯರಿಗೆ ಯಥಾಪ್ರಕಾರ ಸಿಗಲಿದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.