Advertisement

ಉಡುಪಿ: ಪಂಕ್ತಿ ಭೋಜನದ ಹೆಸರಲ್ಲಿ ಜಾತಿ ನಿಂದನೆ ಪ್ರಕರಣ ರದ್ದು

11:23 PM Aug 26, 2020 | mahesh |

ಬೆಂಗಳೂರು: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಭೋಜನದ ಹೆಸರಿನಲ್ಲಿ ಜಾತಿ ನಿಂದನೆ ಹಾಗೂ ಮಾನಹಾನಿ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಭೋಜನ ಶಾಲೆಯ ಸಿಬಂದಿ ಶಂಕರ ಭಟ್‌ ವಿರುದ್ಧ 2014ರಲ್ಲಿ ಸಲ್ಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ಬುಧವಾರ ರದ್ದುಗೊಳಿಸಿದೆ.

Advertisement

ವನಿತಾ ಎನ್‌. ಶೆಟ್ಟಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲು ಕೋರಿ ಶಂಕರ ಭಟ್‌ ಸಲ್ಲಿಸಿದ್ದ ಅರ್ಜಿಯ ಕುರಿತ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ನ್ಯಾ| ಬಿ.ಎ. ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಮೂಲ ದೂರುದಾರರು ಆರೋಪಿಸಿರುವಂತೆ ಯಾವುದೇ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಮಠದಲ್ಲಿ ಕೆಲವೊಂದು ಸಂಪ್ರದಾಯ ಹಾಗೂ ನಿಯಮಗಳನ್ನು ಪಾಲಿಸಿಕೊಂಡು ಬರಲಾಗುತ್ತಿದ್ದು, ಅದರಂತೆ ದೂರು ದಾರರಿಗೆ ಸಾಮಾನ್ಯ ಭೋಜನ ಶಾಲೆಯಲ್ಲಿ ಊಟ ಮಾಡುವಂತೆ ತಿಳಿಸಲಾಗಿತ್ತು. ಇದು ಕಾನೂನಿನ ದುರ್ಬಳಕೆಯಾಗಿದೆ ಮತ್ತು ಆ ದೂರಿನ ಕುರಿತು ವಿಚಾರಣೆ ಅಗತ್ಯವಿಲ್ಲ ಎಂದು ರದ್ದುಗೊಳಿಸಿದೆ.

ಮಠದ ಪರ ವಾದ ಮಂಡಿಸಿದ ಎ. ಕೇಶವಭಟ್‌ ಮತ್ತು ಎಸ್‌.ಕೆ. ಆಚಾರ್ಯ ಅವರು, ದೂರುದಾರರು ಸ್ಥಳೀಯ ಮಹಿಳೆಯಾಗಿದ್ದು, ಅವರಿಗೆ ಮಠದ ನೀತಿ ನಿಯಮಗಳು ತಿಳಿದಿವೆ. ಬ್ರಾಹ್ಮಣರಿಗೆ ಮೀಸಲಾಗಿದ್ದ ಜಾಗದಲ್ಲಿ ಅವರು ಭೋಜನಕ್ಕೆ ಕುಳಿತಿ ದ್ದರು, ಆಗ ಅವರ ಮನವೊಲಿಸಿ ಸಾಮಾನ್ಯ ಭೋಜನ ಶಾಲೆಗೆ ಕಳುಹಿಸಲಾಯಿತು. ಇದರಲ್ಲಿ ಅವರ ಯಾವುದೇ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಮಠದಲ್ಲಿ ಕೆಲವು ಸಂಪ್ರದಾಯಗಳಿದ್ದು, ಅದ ರಂತೆ ನಡೆದುಕೊಳ್ಳಲಾಗುತ್ತಿದೆ. ದೇವರ ದರ್ಶನಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ದೂರುದಾರರಿಗೆ ಯಾವುದೇ ಮಾನಹಾನಿ ಆಗಿಲ್ಲ, ಅವರ ಜಾತಿ ನಿಂದನೆಯೂ ಮಾಡಿಲ್ಲ ಎಂದು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next