Advertisement

ಉಡುಪಿ ಬಂಟರ ನಿಯೋಗದಿಂದ ಸಿಎಂ ಭೇಟಿ

11:40 AM Dec 06, 2017 | |

ಉಡುಪಿ: ಸಚಿವರಾದ ಪ್ರಮೋದ್‌ ಮಧ್ವರಾಜ್‌, ರಮಾನಾಥ ರೈ, ಶಾಸಕರಾದ ಐವನ್‌ ಡಿ”ಸೋಜಾ, ವಿನಯ ಕುಮಾರ್‌ ಸೊರಕೆ,ಪ್ರತಾಪ ಚಂದ್ರ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಉಡುಪಿ ಗ್ರಾಮೀಣ ಬಂಟರ ಸಂಘದ ನಿಯೋಗದ ನೇತೃತ್ವ ವಹಿಸಿದ್ದ ನವೀನ ಚಂದ್ರ ಶೆಟ್ಟಿ ಅವರು ಬೆಳಗಾವಿಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಉಡುಪಿ ಗ್ರಾಮೀಣ ಬಂಟರ ಸಭಾಭವನ ನಿರ್ಮಾಣ ಕುರಿತು ಮನವಿ ಸಲ್ಲಿಸಿದರು.  

Advertisement

ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು 1 ಕೋ.ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸಿದರು. 

 ನಿಯೋಗದಲ್ಲಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಸಖಾರಾಮ ಶೆಟ್ಟಿ, ಕಟ್ಟಡ ಸಮಿತಿ ಅಧ್ಯಕ್ಷ ಅಶೋಕ ಕುಮಾರ್‌ ಶೆಟ್ಟಿ, ಕಾರ್ಯದರ್ಶಿ ಕಾರ್ತಿಕ್‌ ಶೆಟ್ಟಿ, ಖಜಾಂಚಿ ಜಯರಾಮ ಶೆಟ್ಟಿ, ಸಹಚೇರ್‌ಮನ್‌ಗಳಾದ ಹರೀಶ್‌ ಶೆಟ್ಟಿ ಬೆಳ್ಳೆ, ಗೋಪಾಲ್‌ ಶೆಟ್ಟಿ, ವಿಜೀತ್‌ ಶೆಟ್ಟಿ, ದಯಾನಂದ ಶೆಟ್ಟಿ ಮತ್ತು ಬಂಟ ಸಮಾಜದ ಹುಬ್ಬಳ್ಳಿ, ಬೆಳಗಾವಿ ಮುಂದಾಳುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next