Advertisement

ಜಿಲ್ಲಾ ಪೊಲೀಸ್‌ ಶ್ವಾನದಳಕ್ಕೆ ಉಡುಪಿಯ ಬ್ರೌನಿ ಸೇರ್ಪಡೆ

01:00 AM Mar 13, 2019 | Team Udayavani |

ಉಡುಪಿ: ಜಿಲ್ಲಾ ಪೊಲೀಸ್‌ ಶ್ವಾನದಳ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಪರಾಧ ಪ್ರಕರಣಗಳನ್ನು ಭೇದಿಸುವ ಮೂಲಕ ಇತಿಹಾಸ ಸೃಷ್ಟಿಸಿದ ಶ್ವಾನ ಅರ್ಜುನನ ಸ್ಥಾನಕ್ಕೆ ಉಡುಪಿ ಮೂಲದ ಶ್ವಾನ ಬ್ರೌನಿ ಭರ್ತಿಯಾಗಿದ್ದಾನೆ.
ಬ್ರೌನಿ ಮೂರು ತಿಂಗಳ ಮರಿಯಾಗಿದ್ದಾಗ ಎಸ್ಪಿ ಲಕ್ಷ್ಮಣ ಬ. ನಿಂಬರಗಿ ಅವರು ಜಿಲ್ಲಾ ಶ್ವಾನದಳ ವಿಭಾಗಕ್ಕೆ ಆಯ್ಕೆ ಮಾಡಿದ್ದರು. ಅಲ್ಲಿಂದ ನೇರವಾಗಿ ಬೆಂಗಳೂರಿನ ಆಡುಗೋಡಿಯ ಪೊಲೀಸ್‌ ಶ್ವಾನ ತರಬೇತಿ ಕೇಂದ್ರದಲ್ಲಿ ಆರು ತಿಂಗಳ ಕಾಲ ವಿಶೇಷ ತರಬೇತಿ ನೀಡಲಾಗಿತ್ತು. ಅಲ್ಲಿ ನಡೆಸುವ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ “ಬಿ’ ರ್‍ಯಾಂಕ್‌ ಪಡೆದುಕೊಂಡಿದೆ.

Advertisement

ಚುರುಕಿನ “ಬ್ರೌನಿ’
ಅಪರಾಧ ಸೇರಿದಂತೆ ವಿವಿಧ ವಿಭಾಗದ ನುರಿತ ತಜ್ಞರಿಂದ ತರಬೇತುಗೊಂಡ ಬ್ರೌನಿ ಉತ್ತಮ ಜಾಣ್ಮೆ ತೋರಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತರಬೇತಿ ಅವಧಿಯÇÉೇ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪರೇಡ್‌ನ‌ಲ್ಲಿ ಭಾಗವಹಿಸಿದ ಕೀರ್ತಿ ಬ್ರೌನಿಗೆ ಸಲ್ಲುತ್ತದೆ. ಶ್ವಾನ ಆಯ್ಕೆ ವಿಷಯದಲ್ಲಿ ಇಲಾಖೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಡಾಬರ್‌ ಮೆನ್‌ ತಳಿ, ಚುರುಕುತನ, ಗ್ರಹಿಕೆ ಮೊದಲಾದ ವಿಷಯಗಳನ್ನು ಪರಾಮರ್ಶಿಸಲಾಗುತ್ತದೆ.

ಅರ್ಜುನನಿಗೆ ನೋವಿನ ವಿದಾಯ
9 ವರ್ಷದ ಅವಧಿಯಲ್ಲಿ 500 ಪ್ರಕರಣಗಳಲ್ಲಿ 120 ಅಪರಾಧ ಪ್ರಕರಣಗಳ ಅಪರಾಧಿಗಳ ಜಾಡು ಹಾಗೂ 5 ಪ್ರಮುಖ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಅರ್ಜುನ ಸೇವೆಯಿಂದ ನಿವೃತ್ತಿಯಾಗಿದೆ. 

ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಇದು ಪ್ರಮುಖ ಪತ್ತೆದಾರಿ ಶ್ವಾನವಾಗಿತ್ತು. ಬೆಂಗಳೂರಿನ ಆಡುಗೋಡಿನಲ್ಲಿರುವ ಪೊಲೀಸ್‌ ಶ್ವಾನ ತರಬೇತಿ ಕೇಂದ್ರದಲ್ಲಿ ತರಬೇತುಗೊಂಡು 2011ರ ಫೆ. 7ರಂದು ಉಡುಪಿ ಅಪರಾಧ ಪತ್ತೆ ದಳದಲ್ಲಿ ಸೇಪೆìಡೆಯಾಗಿತ್ತು.

ಮಹತ್ವದ ಸುಳಿವು ನೀಡಿತ್ತು
2015ರ ಜೂನ್‌ನಲ್ಲಿ ನಡೆದಿದ್ದ ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಮಹತ್ವದ ಸುಳಿವು ನೀಡಿ ಆರೋಪಿಗಳನ್ನು ಬಂಧಿಸುವಲ್ಲಿ ಬ್ರೌನಿ ನೆರವಾಗಿತ್ತು. ಸೇವೆಯಿಂದ ವಿಮುಖವಾಗುವ ಶ್ವಾನಗಳನ್ನು ನಿಯಮದಂತೆ ಷರತ್ತುಬದ್ಧವಾಗಿ ಸಶಸ್ತ್ರ ಮೀಸಲು ಪಡೆಯ ಡಾಗ್‌ ಹ್ಯಾಂಡ್ಲರ್‌ ತಮ್ಮ ಬಳಿ ಇಟ್ಟು ಕೊಳ್ಳಬಹುದಾಗಿದೆ.

Advertisement

ಪೊಲೀಸ್‌ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶ್ವಾನಗಳಿಗೆ ನಿವೃತ್ತಿ ಘೋಷಿಸುವುದು ಸಾಮಾನ್ಯ. ಆದರೆ ಅರ್ಜುನನಿಗೆ ಇತ್ತೀಚೆಗೆ ಮೂಲವ್ಯಾಧಿ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿರುವ ಹಿನ್ನಲೆಯಲ್ಲಿ ನಿವೃತ್ತಿಗೆ ಇನ್ನೂ ಒಂದು ವರ್ಷ ಇರುವಾಗಲೇ ಇಲಾಖೆಯು ಅರ್ಜುನ್‌ಗೆ ನಿವೃತ್ತಿ ಘೋಷಿಸಿದೆ. ತನ್ನ ಅತೀ ಸೂಕ್ಷ್ಮ ಬುದ್ಧಿಯಿಂದ ಅಪರಾಧ ಪ್ರಕರಣಗಳ ಪ್ರಮುಖ ಆರೋಪಿಗಳನ್ನು ಹಿಡಿಯುವಲ್ಲಿ ಮಹತ್ವದ ಸುಳಿವು ನೀಡಿತ್ತು.
-ಪೆಂಚಲ್‌ ರಾವ್‌,   ಅರ್ಜುನ್‌ ಶ್ವಾನ ನಿರ್ವಾಹಕ,ಪೊಲೀಸ್‌ ಶ್ವಾನದಳ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next