Advertisement

Udupi ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ: ವಿಧಾನಸೌಧ ಎದುರು ಪುತ್ಥಳಿ ಸ್ಥಾಪನೆಯಾಗಲಿ

11:53 PM Aug 20, 2024 | Team Udayavani |

ಮಲ್ಪೆ: ಸಮಾಜದಲ್ಲಿ ಜಾತಿ ಭೇದವನ್ನು ವಿರೋಧಿಸಿ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ ನಾರಾಯಣ ಗುರುಗಳ ಚಿಂತನೆ ಎಲ್ಲರಿಗೂ ಸಾರ್ವಕಾಲಿಕ ಆದರ್ಶ ವಾಗಿದೆ. ಇಂತಹವರ ಪುತ್ಥಳಿಯನ್ನು ವಿಧಾನ ಸೌಧದ ಎದುರು ಸ್ಥಾಪನೆ ಮಾಡಲು ಸರಕಾರಕ್ಕೆ ಮನವಿ ಯನ್ನು ಮಾಡಲಾಗಿದೆ. ಇದರಿಂದ ಅವರಿಗೆ ಇನ್ನಷ್ಟು ಗೌರವ ದೊರೆಯು ವಂತಾಗುತ್ತದೆ ಎಂದು ಶಾಸಕ ಯಶ್‌ಪಾಲ್‌ ಎ. ಸುವರ್ಣ ಹೇಳಿದ್ದಾರೆ.

Advertisement

ಜಿಲ್ಲಾಡಳಿತ, ಜಿ. ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಸಹಕಾರದಿಂದ ಮಲ್ಪೆ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾ ಭವನದಲ್ಲಿ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದಾ§ಟಿಸಿ, ಮಾತನಾಡಿ, ರಕ್ತಕ್ರಾಂತಿ ಇಲ್ಲದೆ ಮಾತುಗಳ, ಧ್ವನಿಗಳ, ವಿಚಾರಧಾರೆ, ಬದ್ಧತೆ ಗಳ ಮೂಲಕ ದಾರ್ಶನಿಕವಾಗಿ ಒಂದು ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಿದೆ ಎಂದು
ತೋರಿಸಿ ಕೊಟ್ಟ ವರು ನಾರಾಯಣಗುರುಗಳು. ಇದು ಕೇವಲ ಭಾಷಣಕ್ಕೆ ಸೀಮಿತವಾಗ ಬಾರದು ನಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಂಗಳೂರು ವಿ.ವಿ.ಯ ಸಂಶೋಧನ ವಿದ್ಯಾರ್ಥಿ ಶ್ರೇಯಸ್‌ ಜಿ. ಕೋಟ್ಯಾನ್‌ ಉಪನ್ಯಾಸ ನೀಡಿದರು.
ಉಡುಪಿ ತಹಶೀಲ್ದಾರ್‌ ಗುರು ಪ್ರಸಾದ್‌, ಕ್ಷೇತ್ರ ಶಿಕ್ಷಣಾಧಿಕಾರಿ ಡಾ|ಯಲ್ಲಮ್ಮ, ಮಲ್ಪೆ ಸೆಂಟ್ರಲ್‌ ವಾರ್ಡ್‌ನ ನಗರಸಭಾ ಸದಸ್ಯೆ ಎಡ್ಲಿನ್‌ ಕರ್ಕಡ, ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಶತಮಾನೋತ್ಸವ ಸಮಿತಿ ಅಧ್ಯಕ್ಷ ದಿನೇಶ್‌ ಜಿ. ಸುವರ್ಣ, ನಾರಾಯಣಗುರು ಆಂಗ್ಲ ಮಾದ್ಯಮ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ, ಫಿಶರೀಸ್‌ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್‌ ಜೆ. ಬಂಗೇರ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ವರ್ಗೀಸ್‌ ಪಿ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next