Advertisement

Udupi: ಇಂದ್ರಾಳಿಯಲ್ಲಿ ಬೊವ್‌ಸಿಂಗ್‌ ಆರ್ಚ್‌ ಟ್ರಸ್‌ ಬ್ರಿಡ್ಜ್

11:34 AM Mar 02, 2024 | Team Udayavani |

ಉಡುಪಿ: ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿ ಇನ್ನೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಬೊವ್‌ಸ್ಟ್ರಿಂಗ್‌ ಆರ್ಚ್‌ ಟ್ರಸ್‌ ಬ್ರಿಡ್ಜ್ ನಿರ್ಮಾಣಗೊಳ್ಳಲಿದೆ ಎಂದು ರಾ. ಹೆ. ಪ್ರಾಧಿಕಾರದ ಮೂಲ ತಿಳಿಸಿವೆ.

Advertisement

ಸೇತುವೆಯ ಮೇಲ್ಭಾಗದಲ್ಲಿ ಕಮಾನು ವಿನ್ಯಾಸ ಬರಲಿದೆ. ಕಬ್ಬಿಣದ ಗರ್ಡರ್‌ಗಳನ್ನು ಬಳಸಿ ಇದನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಎರಡು ಬದಿಯಲ್ಲಿ ಆಧಾರಕ್ಕಾಗಿ ನಿರ್ಮಿಸಿರುವ ಬೃಹತ್‌ ಪಿಲ್ಲರ್‌ನ ಅಡಿಪಾಯದ ಕೆಲಸಗಳು ಪೂರ್ಣಗೊಂಡಿರುವುದರಿಂದ ಇನ್ನೂ ಗರ್ಡರ್‌ ಜೋಡಣೆ ಕೆಲಸ ಮಾತ್ರ ಬಾಕಿ ಇದೆ.

ಇಂದ್ರಾಳಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಅಗತ್ಯವಿದ್ದ ಗರ್ಡರ್‌ ಪರಿಕರ ಹುಬ್ಬಳ್ಳಿಯಿಂದ ಹಂತಹಂತವಾಗಿ ಆಗಮಿಸುತ್ತಿದೆ. ಹುಬ್ಬಳ್ಳಿಯ ವರ್ಕ್‌ಶಾಪ್‌ನಲ್ಲಿ ಹಲವಾರು ತಿಂಗಳಿನಿಂದ 420 ಟನ್‌ ತೂಕದ ಗರ್ಡರ್‌ ಕೆಲಸ ನಡೆದಿತ್ತು.

ಅನಂತರ ಭಾರತೀಯ ರೈಲ್ವೇ ಸಂಶೋಧನ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ತಜ್ಞರ (ಆರ್‌ಡಿಎಸ್‌ಒ) ತಂಡದಿಂದ ಗರ್ಡರ್‌
ಪರಿಶೀಲನೆ ನಡೆದು ಅನುಮೋದನೆ ನೀಡಿದ ಅನಂತರವೇ ಗರ್ಡರ್‌ನ್ನು ಉಡುಪಿಗೆ ಕಳುಹಿಸಿಕೊಡಲಾಗಿದೆ. ಮುಂದಿನ 10 ದಿನಗಳಲ್ಲಿ ಗರ್ಡರ್‌ ಜೋಡಣೆ ಕಾರ್ಯಕ್ಕೆ ತಯಾರಿ ನಡೆಯಲಿದೆ. ಪ್ರಸ್ತುತ 100 ಟನ್‌ ಗರ್ಡರ್‌ ಇಂದ್ರಾಳಿಗೆ ಆಗಮಿಸಿದೆ. ವಾರದ ಒಳಗೆ ಎಲ್ಲ ಗರ್ಡರ್‌ಗಳು ಇಂದ್ರಾಳಿಗೆ ಸೇರಲಿವೆ.

ಹೆದ್ದಾರಿ ಪ್ರಾಧಿಕಾರವು ರೈಲ್ವೇ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌, ರೈಲ್ವೇ ಕಂಟ್ರೋಲ್‌ ರೂಂ ಜತೆಗೆ ಸಂವಹನ ನಡೆಸಿ ಟ್ರ್ಯಾಕ್‌
ಕ್ಲಿಯರೆನ್ಸ್‌ ನೀಡಿದ ಅನಂತರ ಕಾಮಗಾರಿ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next