Advertisement

ಸಂಸತ್‌ ಗ್ರಂಥಾಲಯಕ್ಕೆ ಉಡುಪಿಯ ಗ್ರಂಥ

01:21 AM Nov 11, 2020 | mahesh |

ಉಡುಪಿ: ಸುಮಾರು 100 ವರ್ಷಗಳ ಬಳಿಕ ದೇಶದಲ್ಲಿ ಪ್ರಕಟವಾದ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ (ಸಂಸ್ಕೃತದ 24 ಸಂಪುಟ) ಪ್ರತಿಯನ್ನು ಭಾರತದ ಶಕ್ತಿ ಕೇಂದ್ರವಾದ ಸಂಸತ್ತಿನ ಗ್ರಂಥಾಲಯಕ್ಕೆ ಸಲ್ಲಿಸಲಾಗಿದೆ. ಉಡುಪಿ ಪಲಿಮಾರು ಮಠದ ತಣ್ತೀ ಸಂಶೋಧನ ಸಂಸತ್‌ ವತಿಯಿಂದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಪುಟ ಪ್ರಕಟಗೊಂಡಿತ್ತು. ಇದು ಪೇಜಾವರ ಶ್ರೀ ವಿಶ್ವೇಶತೀರ್ಥರೂ ಸಹಿತ ಅನೇಕ ಪೀಠಾಧೀಶರು ಸಮ್ಮುಖದಲ್ಲಿ ಕೃಷ್ಣಮಠದಲ್ಲಿ ಲೋಕಾರ್ಪಣೆ ಗೊಂಡಿತ್ತು.

Advertisement

ಮಂಗಳವಾರ ದಿಲ್ಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರ ನಿವಾಸದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗ್ರಂಥ ಪ್ರತಿಯನ್ನು ಹಸ್ತಾಂತರಿಸಿದರು.

ತುಳು ಲಿಪಿ ಪ್ರವೇಶ
ಮಹಾಭಾರತ ಗ್ರಂಥಕ್ಕೆ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತುಳು ಹಸ್ತಾಕ್ಷರವನ್ನು ಹಾಕಿರುವುದರಿಂದ ಸಂಸತ್‌ ಗ್ರಂಥಾಲಯಕ್ಕೆ ತುಳು ಲಿಪಿ ಪ್ರವೇಶ ಪಡೆದಂತಾಯಿತು. ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ, ಅನಂತ, ಕೃಷ್ಣ ಭಟ್‌, ವಾಸುದೇವ ಭಟ್‌ ಪೆರಂಪಳ್ಳಿ, ಪೇಜಾವರ ಮಠದ ದಿಲ್ಲಿ ಶಾಖೆ ವ್ಯವಸ್ಥಾಪಕ
ದೇವಿಪ್ರಸಾದ ಭಟ್‌ ಉಪಸ್ಥಿತರಿದ್ದರು.

ವಿತ್ತ ಸಚಿವೆಗೆ ಉಡುಪಿ ಸೀರೆ
ಉಡುಪಿಯ ನೇಕಾರರು ತಯಾರಿಸಿದ ಕೈಮಗ್ಗದ ಎರಡು ಸೀರೆಗಳನ್ನು ದೀಪಾವಳಿ ಹಬ್ಬದ ಉಡುಗೊರೆಯಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರಿಗೆ ಮಂಗಳವಾರ ಪೇಜಾವರ ಶ್ರೀಪಾದರು ಹಸ್ತಾಂತ ರಿಸಿದರು. ರಜತ ಬಟ್ಟಲಲ್ಲಿ ಶುಭಲಕ್ಷಣವಾದ ಕುಂಕುಮವನ್ನು ಇರಿಸಿ ಕೃಷ್ಣದೇವರ ಪ್ರಸಾದ, ಮಂತ್ರಾಕ್ಷತೆಯನ್ನು ನೀಡಿ ರಾಷ್ಟ್ರದ ಒಳಿಗಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಶಕ್ತಿ ದೊರೆಯಲೆಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next