Advertisement

ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಉಡುಪಿ ಬಿಷಪ್

09:41 AM Dec 24, 2019 | Team Udayavani |

ಉಡುಪಿ: ಮಣಿಪಾಲ ಕೆ.ಎಂ.ಸಿ. ಆಸ್ಪತ್ರಗೆ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಪಾದರನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ಇಂದು ಭೇಟಿಯಾಗಿ ಶ್ರೀಗಳ ಆರೋಗ್ಯ ವಿಚಾರ ಸಂಬಂಧಿ ಮಾಹಿತಿಯನ್ನು ಪಡೆದುಕೊಂಡರು

Advertisement

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಷಪ್ ಅವರು, ಸ್ವಾಮೀಜಿಯವರು ಶೀಘ್ರ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ. ಅವರು ಮತ್ತೆ ಕೃಷ್ಣನ ಪೂಜೆ ಮಾಡುವಂತಾಗಬೇಕು ಹಾಗೂ ಅವರು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಮರಳುವಂತಾಗಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ತಮ್ಮ ಮತ್ತು ಪೇಜಾವರ ಶ್ರೀಗಳ ಏಳು ವರ್ಷಗಳ ಒಡನಾಟದಲ್ಲಿ ರೂಪುಗೊಂಡಿರುವ ಉತ್ತಮ ಬಾಂಧವ್ಯವನ್ನು ಬಿಷಪ್ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next