Advertisement

Udupi: ಕಾರು ಢಿಕ್ಕಿಯಾಗಿ ಬೈಕ್‌ ಸವಾರ ವಿದ್ಯಾರ್ಥಿ ಮೃತ್ಯು

08:19 PM Oct 08, 2024 | Team Udayavani |

ಉಡುಪಿ: ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಅ.7ರ ಸೋಮವಾರ ರಾತ್ರಿ ಎಂಜಿಎಂ ಕಾಲೇಜು ಎದುರು ನಡೆದಿದೆ.

Advertisement

ಮೃತರನ್ನು ಹಿರಿಯಡ್ಕ ನಿವಾಸಿ, ತೆಂಕನಿಡಿಯೂರು ಕಾಲೇಜಿನ ಪದವಿ ವಿದ್ಯಾರ್ಥಿ ವೀರಜ್ ನಾಯ್ಕ(19) ಎಂದು ಗುರುತಿಸಲಾಗಿದೆ.

ಉಡುಪಿ ಕಡೆಯಿಂದ ತಿರುವು ಪಡೆದು ಮಣಿಪಾಲ ಕಡೆಗೆ ಹೋಗುತ್ತಿದ್ದ ಬೈಕಿಗೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇದರಿಂದ ವೀರಜ್ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಾಮಗಾರಿ ಅವಾಂತರಕ್ಕೆ ವಿದ್ಯಾರ್ಥಿ ಬಲಿ!
ಇಂದ್ರಾಳಿಯಲ್ಲಿ ಗರ್ಡರ್‌ ನಿರ್ಮಾಣದ ಹಿನ್ನೆಲೆಯಲ್ಲಿ ಎಂಜಿಎಂನಿಂದ ಮಣಿಪಾಲಕ್ಕೆ ಹೋಗುವ ರಸ್ತೆಯನ್ನು ಏಕಮುಖ ಸಂಚಾರ ಮಾಡಿ ಹಲವು ವರ್ಷಗಳೇ ಕಳೆದಿವೆ. ದಿನಂಪ್ರತಿ ಇಲ್ಲಿ ಟ್ರಾಫಿಕ್‌ ದಟ್ಟನೆ ಕಂಡುಬರುತ್ತಿದೆ. ಅಲ್ಲದೆ ಈಗಾಗಲೇ ಹಲವಾರು ಅಪಘಾತಗಳು ನಡೆದಿವೆ. ಏಕಮುಖ ರಸ್ತೆಯ ನಡುವೆ ಇರಿಸಿದ್ದ ಕೋನ್‌ಗಳೂ ಈಗ ಮಾಯವಾಗಿದ್ದು, ವಾಹನಗಳು ಎರ್ರಾಬಿರ್ರಿಯಾಗಿ ಸಂಚರಿಸುತ್ತಿವೆ. ಈ ಹಿಂದೆಯೂ ರಸ್ತೆಯ ನಡುವೆ ಕೋನ್‌ಗಳ ಬದಲಿಗೆ ಕಲ್ಲುಗಳನ್ನು ಇರಿಸಲಾಗಿತ್ತು. ಈ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿದ್ದ ಅನಂತರ ಕೋನ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಈಗ ಮತ್ತೆ ಸ್ಥಿತಿ ಅದೇ ರೀತಿಯಾಗಿದೆ. ಸೋಮವಾರ ರಾತ್ರಿಯೂ ಅದೇ ರೀತಿಯಾಗಿದೆ. ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಚಾಲಕ ಲೇಝರ್‌ ಎಸ್‌. ವಾಲ್ಟ$Õನ್‌ ಅವರು ಅತೀ ವೇಗದಿಂದ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಬಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next