Advertisement

ತಾಳೆ ಮರದಲ್ಲಿ ಎರಡು ಗಂಟೆಗಳ ಕಾಲ ಮೂರ್ಛೆ ತಪ್ಪಿದರೂ ಬದುಕುಳಿದ ಶೇಂದಿ ವ್ಯಾಪಾರಿ !

03:41 PM Jul 15, 2020 | sudhir |

ಬೆಳ್ಮಣ್: ಸುಮಾರು 20 ವರ್ಷಗಳಿಂದ ಶೇಂದಿ ವ್ಯಾಪಾರ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ಮರದ ದಂಡುಗಳ ನಡುವೆ ಸಿಲುಕಿ ಕೊನೆಗೂ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಮಂಗಳವಾರ ಕಡಂದಲೆಯಲ್ಲಿ ನಡೆದಿದೆ.

Advertisement

ಕಡಂದಲೆ ಕಲ್ಲೋಳಿಯ ಸಂತೋಷ್‌ ಎಂಬಾತ ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರವೇರಿದವರು ಯಾವುದೋ ಕಾರಣದಿಂದ ಮೂರ್ಛೆ ತಪ್ಪಿದ್ದಾರೆ ಪರಿಣಾಮ 8.30ರವರೆಗೆ ತಾಳೆ ಮರದ ದಂಡುಗಳ ನಡುವೆ ಸಿಲುಕಿದ್ದರು. ಮರದ ಪಕ್ಕದಲ್ಲೇ ದಾರಿಯಲ್ಲಿ ಹೋಗುವವರು ಇವರನ್ನು ಕಂಡರೂ ಆ ವ್ಯಕ್ತಿಯನ್ನು ರಕ್ಷಿಸುವ ಗೋಜಿಗೆ ಹೋಗಿರಲಿಲ್ಲ,

ಆ ಸಂದರ್ಭ ಸಂಕಲಕರಿಯ ಪೊರ್ಲು ಲಂಚ್ ಹೋಮ್ ಮಾಲಕರಾದ ಸುಧಾಕರ್ ಸಾಲ್ಯಾನ್ ಅವರು ಶೇಂದಿ ತರಲು ಎಂದಿನಂತೆ ತಮ್ಮ ಕಾರಿನಲ್ಲಿ ಬಂದಿದ್ದಾರೆ ಆಗ ಜನ ಸೇರಿದ್ದನ್ನು ಕಂಡ ಅವರು ವಿಷಯ ತಿಳಿದು ಕೂಡಲೇ ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.

ಅಷ್ಟೋತ್ತಿಗಾಗಲೇ ಸುಧಾಕರ್ ಅವರು ತಾಳೆ ಮರವೇರುವ ಅದೇ ಊರಿನ ಯುವಕರಾದ ನಾರಾಯಣ, ದಿನೇಶ್ ಹಾಗೂ ಅಶೋಕ್ ಅವರನ್ನು ಕರೆಸಿ ಮರಕ್ಕೆ ಹತ್ತಿಸಿ ವ್ಯಕ್ತಿಯನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟರಲ್ಲೇ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ವ್ಯಕ್ತಿಯನ್ನು ಮರದಿಂದ ಹಗ್ಗದ ಮೂಲಕ ಕೆಳಗಿಳಿಸಿದ್ದಾರೆ.

Advertisement

ಆಸ್ಪತ್ರೆಗೆ ಸೇರಿಸುವ ಮುನ್ನವೇ ಎಚ್ಚೆತ್ತ ಸಂತೋಷ
ಇನ್ನೇನು ತಾಳೆ ಮರದಿಂದ ಕೆಳೆಗಿಳಿಸಿದ ಸಂತೋಷ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸುಧಾಕರ್ ಅವರ ಕಾರಿನಲ್ಲಿ ಕೂರಿಸಿ ಹೊರಡುವ ಹೊತ್ತಿಗೆ ಮೂರ್ಛೆ ತಪ್ಪಿದ ಸಂತೋಷ್ ಎಚ್ಚರಗೊಂಡಿದ್ದಾನೆ.

ಸಂತೋಷನ ಜೀವವುಳಿಸಿದ ಸುಧಾಕರ ಸಾಲ್ಯಾನ್‌, ಅಶೋಕ, ದಿನೇಶ, ನಾರಾಯಣ ಹಾಗೂ ಅಗ್ನಿಶಾಮಕದಳದವರ ಸಾಹಸ ಪ್ರಸಂಸೆಗೆ ಪಾತ್ರವಾಗಿದೆ.

ಕಳೆದೆರಡು ವರ್ಷಗಳ ಹಿಂದೆ ಶೇಂದಿ ವ್ಯಾಪಾರ ನಡೆಸುತ್ತಿದ್ದ ಸಂತೋಷನ ಅಣ್ಣ ಅಣ್ಣಿ ಪೂಜಾರಿ ಎಂಬಾತನೂ ತಾಳೆ ಮರದಲ್ಲೇ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next