Advertisement
ಈಗಲೂ ಕೂಡ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಕಟ್ಟಿಗೆಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಪದ್ಧತಿಯಂತೆ ಅಂತ್ಯಸಂಸ್ಕಾರಗಳನ್ನು ನಡೆಸಲಾಗುತ್ತಿದೆ.
ಕಟ್ಟಿಗೆಯಿಂದ ಶವ ದಹಿಸಲು ಸುಮಾರು 2ರಿಂದ 3 ಗಂಟೆಗಳು ಬೇಕಾಗುತ್ತದೆ. ಆದರೆ ಅನಿಲ ಚಿತಾಗಾರದಲ್ಲಿ ಬಹಳ ಕಡಿಮೆ ಸಮಯದಲ್ಲಿ ಕಳೇಬರವನ್ನು ಭಸ್ಮಗೊಳಿಸಬಹುದು. ಅನಿಲ ಚಿತಾಗಾರದಲ್ಲಿ ಶವವನ್ನು ದಹಿಸುವಾಗ ಉತ್ಪತ್ತಿಯಾಗುವ ಧೂಮವು ನೇರವಾಗಿ ಪ್ರಸ್ತುತ ಶವ ಸಂಸ್ಕಾರಕ್ಕೆ ತಗಲುವ ವೆಚ್ಚ 2,000 ರೂ. ಅನಿಲ ಚಿತಾಗಾರದಲ್ಲಿ ಶವಸಂಸ್ಕಾರ ವೆಚ್ಚ 5ರಿಂದ 6 ಸಾವಿರ ರೂ. ಚೇಂಬರ್‌ಗಳ ಸಂಖ್ಯೆ 6 ದಿನನಿತ್ಯ ಸುಡುವ ಸರಾಸರಿ ಹೆಣಗಳು 6ರಿಂದ 10 ವರ್ಷ ಕಳೆದರೂ ದೊರಕದ ಉದ್ಘಾ ಟನೆ ಭಾಗ್ಯ ಸುದಿನ ಜನಹಿತ ಪರಿಸರದಲ್ಲಿ ಪಸರಿಸುವುದಿಲ್ಲ. ಈ ಚಿತಾಗಾರವು ಧೂಮದಲ್ಲಿನ ರಾಸಾಯನಿಕ ಹಾಗೂ ಧೂಮವನ್ನು ನಿಯಂತ್ರಿಸಿಕೊಂಡು, ಶುದ್ಧೀಕರಿಸಿದ ಧೂಮವನ್ನು ಚಿಮಣಿಯ ಮೂಲಕ ಹೊರಹಾಕಿಸುವ ನವೀನ ವ್ಯವಸ್ಥೆ ಹೊಂದಿದೆ. ಪರಿಸರ ಸ್ನೇಹಿಯಾಗಿ ಅನಿಲ ಚಿತಾಗಾರವು ಕೆಲಸ ನಿರ್ವಹಿಸುತ್ತದೆ.
Related Articles
ಸರಕಾರದ ಜಾಗವಾದ ಇದು ಪ್ರಸ್ತುತ ಹಿಂದೂ ಶವ ಸಂಸ್ಕಾರ ಸೇವಾ ಸಮಿತಿಯ ಸ್ವಾಧೀನದಲ್ಲಿದೆ. ಸುಮಾರು 50 ವರ್ಷಗಳಿಂದಲೂ ಇದು ಕಾರ್ಯಾಚರಿಸುತ್ತಿದ್ದು, ನಗರಸಭೆ ಅಥವಾ ಜಿಲ್ಲಾಡಳಿತ ಇದಕ್ಕೆ ಕಿಂಚಿತ್ ನೆರವು ನೀಡಿಲ್ಲ. 1 ವರ್ಷಕ್ಕೆ ಬೇಕಿರುವಷ್ಟು ಕಟ್ಟಿಗೆಗಳನ್ನು ದಾಸ್ತಾನು ಇರಿಸಲಾಗಿದೆ. ಬಿದ್ದ ಮರಗಳನ್ನು ಮಾತ್ರ ಇದಕ್ಕೆ ಬಳಕೆ ಮಾಡಲಾಗುತ್ತಿದೆ. ಇದಕ್ಕೆಂದು ಮರಗಳನ್ನು ಕಡಿಯುವ ಕ್ರಮ ಇಲ್ಲ ಎನ್ನುತ್ತಾರೆ ಇಲ್ಲಿನ ಸಿಬಂದಿ.
Advertisement
ಸೂಕ್ತ ಕ್ರಮಕೈಗೊಳ್ಳಲಾಗುವುದುಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿರುವ ಅನಿಲ ಚಿತಾಗಾರದ ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಂಡು ಇದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು.
-ಪ್ರಭಾಕರ ಪೂಜಾರಿ ಗುಂಡಿಬೈಲು, ಅಧ್ಯಕ್ಷರು, ನಗರಸಭೆ ದುಬಾರಿ ವೆಚ್ಚ
ಸಾಮಾನ್ಯ ಅಂತ್ಯಸಂಸ್ಕಾರಕ್ಕೆ ತಗಲುವ ವೆಚ್ಚಕ್ಕಿಂತ ಅನಿಲ ಚಿತಾಗಾರಕ್ಕೆ ತಗಲುವ ವೆಚ್ಚ ದುಬಾರಿಯಾಗಿದೆ. ಕೋಟ್ಯಂತರ ರೂ.ವೆಚ್ಚದ ಈ ಚಿತಾಗಾರದ ಗ್ಯಾಸ್ ಚೇಂಬರ್‌ಗೆ 26 ಲ.ರೂ. ವಿನಿಯೋಗ ಮಾಡಲಾಗಿದ್ದು, ಪ್ರಸ್ತುತ ಅದು ಕೂಡ ಸೋರುತ್ತಿದೆ. ಒಂದು ಕಳೇಬರ ಸುಡಲು 2.5ರಷ್ಟು ಗ್ಯಾಸ್ ಸಿಲಿಂಡರ್ ಆವಶ್ಯಕತೆಯೂ ಇದಕ್ಕಿದೆ. ಈಗಾಗಲೇ ಇದಕ್ಕೆ 3 ಫೇಸ್ ವಿದ್ಯುತ್ ಕೂಡ ಬೇಕು ಎನ್ನಲಾಗುತ್ತಿದ್ದು, ಒಟ್ಟಾರೆಯಾಗಿ ಇದು ಬಲು ದುಬಾರಿಯಾಗಿ ಪರಿಣಮಿಸಿದೆ. ಜತೆಗೆ ಇದರ ನಿರ್ವಹಣೆಯ ವೆಚ್ಚವೂ ಪ್ರತ್ಯೇಕವಾಗಿರುವ ಕಾರಣ ಈ ಯಂತ್ರವೂ ಈಗ ಹೆಣದಂತೆಯೇ ಮಲಗಿಕೊಂಡಿದೆ.