ರಾಗಬೇಕು. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಮತ್ತು ತುರ್ತು ಕರೆ ಸ್ವೀಕರಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
Advertisement
ಅವರು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಶನಿವಾರ ಮುಂಗಾರು ಮಳೆ ಸಂದರ್ಭ ಅಗತ್ಯ ಮುಂಜಾಗ್ರತಾ ಕ್ರಮ ಹಾಗೂ ರಕ್ಷಣಾ ಕ್ರಮ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
ಅರಣ್ಯ ಇಲಾಖೆಯವರು ಸತ್ತ ಹಾಗೂ ಅಪಾಯಕಾರಿ ಮರಗಳನ್ನು ಸಬೂಬು ನೀಡದೆ ತತ್‌ಕ್ಷಣವೇ ತೆರವುಗೊಳಿಸಬೇಕು. ನಿಮ್ಮಲ್ಲಿ ಈ ಸಂಬಂಧ ಇರುವ ಸೌಕರ್ಯಗಳ ಪಟ್ಟಿ ನೀಡಿ, ಸೂಕ್ತ ಸಲಕರಣೆಗಳಿಲ್ಲದಿದ್ದಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿಧಿಯನ್ನು ಬಳಸಿ ಸೌಕರ್ಯಗಳನ್ನು ಒದಗಿಸಿ ಕೊಡಲಾಗುವುದು. ಪೊಲೀಸ್ ಮತ್ತು ಅರಣ್ಯ ಇಲಾಖೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು. ಎಸಿಎಫ್ ಅಚ್ಚಪ್ಪಅವರಿಗೆ ಇಲಾಖೆಯಲ್ಲಿರುವ ವ್ಯವಸ್ಥೆಗಳ ಬಗ್ಗೆ, ಅಗತ್ಯ ಸಲಕರಣೆಗಳ ಬೇಡಿಕೆ ಪಟ್ಟಿಯನ್ನು ತತ್‌ಕ್ಷಣವೇ ಸಲ್ಲಿಸಿ ಎಂದರು.
Advertisement
“ಇಲ್ಲ’ಗಳ ಪಟ್ಟಿ ಬೇಡಅರಣ್ಯ ಇಲಾಖೆಯಂತೆ ಅಗ್ನಿ ಶಾಮಕ ದಳದವರಿಗೂ ಸೂಚನೆ ನೀಡಿದ ಜಿಲ್ಲಾಧಿಕಾರಿ ಯವರು, ಮುಳುಗು ತಜ್ಞರಿಲ್ಲದಿದ್ದಲ್ಲಿ, ಖಾಸಗಿಯವರೊಂದಿಗೆ ಸಂಪರ್ಕ ಸಾಧಿಸಿ ಅಗತ್ಯವಿರುವವರ ನೆರವು ಪಡೆಯಿರಿ. ವಿಕೋಪ ಸಂದರ್ಭ ದಲ್ಲಿ “ಇಲ್ಲ’ಗಳ ಪಟ್ಟಿ ಹೇಳದೆ ಅಗತ್ಯಗಳನ್ನು ತತ್‌ಕ್ಷಣವೇ ಗಮನಕ್ಕೆ ತನ್ನಿ ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಎಲ್ಲ ಇಲಾಖೆಗಳು ಹಶೀಲ್ದಾರ್ ಮತ್ತು ಇಒ ಕಚೇರಿಗಳನ್ನೊಳಗೊಂಡಂತೆ ರಿಸರ್ವ್ ಮ್ಯಾಪಿಂಗ್ ಸಿದ್ಧಪಡಿಸಿ ಎಂದು ಪ್ರಿಯಾಂಕಾ ಹೇಳಿದರು. ಈಗಾಗಲೇ ಬಿಸಿಲಿನ ನಡುವೆ ಮಳೆ ಆರಂಭವಾಗಿದ್ದು, ಆರೋಗ್ಯ ಇಲಾಖೆಯವರು ಸಾಂಕ್ರಾಮಿಕ ರೋಗ ಹರಡದಂತೆ ವ್ಯಾಪಕ ಕ್ರಮಕೈಗೊಳ್ಳಿ ಎಂದರು. ಶಾಲಾ ವಾಹನ: ಎಚ್ಚರಿಕೆ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಮಕ್ಕಳ ರಕ್ಷಣೆ ಸಮಿತಿ ಜತೆ ಆರ್‌ಟಿಒ ಮತ್ತು ಡಿಡಿಪಿಐ ಸಭೆ ನಡೆಸಿ ಮಳೆಗಾಲದಲ್ಲಿ ಯಾವುದೇ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದರು. ಮೆಸ್ಕಾಂನವರು ಮಳೆಗಾಲಕ್ಕೆ ಸಜ್ಜಾದ ಬಗ್ಗೆ ಅನುಸರಣೆ ವರದಿ ನೀಡಬೇಕು. ಪಶುಸಂಗೋಪನೆ ಇಲಾಖೆಯವರು ಪ್ರಾಣಿಗಳ ಸತ್ತರೆ ಮರಣೋತ್ತರ ವರದಿ ತತ್‌ಕ್ಷಣವೇ ನೀಡಬೇಕು. ತಗ್ಗು ಪ್ರದೇಶಗಳಲ್ಲಿ, ಸೇತುವೆ ಬದಿಗಳಲ್ಲಿ, ನದಿ ದಂಡೆಗಳಲ್ಲಿ, ಕಿಂಡಿ ಅಣೆಕಟ್ಟುಗಳಿರುವಲ್ಲಿ, ಸಮುದ್ರ ತೀರದಲ್ಲಿ ಈಗಾಗಲೇ ಸಮಸ್ಯೆಗಳು, ಸವಾಲುಗಳನ್ನು ಎದುರಿಸುವುದನ್ನು ಗಮನದ
ಲ್ಲಿರಿಸಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕು. ಗಣಿಗಾರಿಕೆ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕ, ಈಜಾಟ ನಿಷೇಧ ಫಲಕಗಳಿರಬೇಕು. ಈಗಾಗಲೇ ಕೆಐಎಆರ್‌ಡಿಎಲ್ ಸಂಸ್ಥೆಗೆ ಬೇಲಿ ಹಾಕಲು ಸೂಚಿಸಲಾಗಿದ್ದು, ಬೇಲೂರು ಸುತ್ತ ಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಎಂದು ಗಣಿ ಇಲಾಖೆ ಮತ್ತು ಇಒ ಅವರು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಲ್ಲೆಯಲ್ಲಿ ದುರಂತಗಳು ಸಂಭವಿಸಿದರೆ ತಹಶೀಲ್ದಾರ್‌ಗಳು ತತ್‌ಕ್ಷಣವೆ ನಮ್ಮ ಗಮನಕ್ಕೆ ತನ್ನಿ. ಪ್ರವಾಸೋದ್ಯಮ ಕಾಮಗಾರಿಗಳು ಸಮುದ್ರ ಕೊರೆತದಲ್ಲಿ ವಿಲೀನವಾಗದಂತೆ ಮುನ್ನೆಚ್ಚರಿಕೆ ವಹಿಸಿ ಯೋಜನೆಯನ್ನು ಜಾರಿಗೆ ತನ್ನಿ ಎಂದರು. ಮೇ 18ರಿಂದ 31ರ ವರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಜಿಲ್ಲೆಯಲ್ಲಿ ಅಣಕು ಕಾರ್ಯಾಚರಣೆ ನಡೆಸಲಿದ್ದು, ಅಧಿಕಾರಿಗಳು ಸಜಾjಗಿ ಎಂದು ಇದೇ ವೇಳೆ ಹೇಳಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ ಉಪಸ್ಥಿತರಿದ್ದರು.