Advertisement
ಅಭಿನಂದನಾ ಭಾಷಣ ಮಾಡಿದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ದುಗ್ಗಪ್ಪ ಕಜೆಕಾರು, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಆದರೆ ಪರಿಣಾಮಕಾರಿಯಾದ ಒಗ್ಗಟ್ಟಿನ ಚಳುವಳಿ ಆಗಿಲ್ಲ. ಚಳುವಳಿಗೆ ಅಗತ್ಯವಿರುವ ಪುಸ್ತಕ ಹಾಗೂ ಬೇಕಾದ ಜನರ ಬಳಕೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತುಳು ಭಾಷೆಯ ನಿರ್ಲಕ್ಷ್ಯ ಮಾಡಿದರೆ, ಮುಂದಿನ ಪೀಳಿಗೆಗೆ ಇಂಟರ್‌ನೆಟ್ ಮೂಲಕ ತುಳು ಭಾಷೆ, ಶಬ್ದಗಳನ್ನು ತೋರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ತುಳು ಭಾಷಿಗರು ಒಂದಾಗಿ ರಾಜಕೀಯ ಪ್ರಭಾವ ಬಳಸಿ ಚಳುವಳಿ ಮಾಡಿದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯ ಎಂದರು. ಪ್ರಶಸ್ತಿಗೆ ಪ್ರಯತ್ನ
ತುಳು ಅಕಾಡೆಮಿ ಅಧ್ಯಕ್ಷ ಸ್ಥಾನ, ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಯಾವುದಾದರೂ ಒಂದನ್ನು ಬನ್ನಂಜೆ ಬಾಬು ಅಮೀನ್ ಅವರಿಗೆ ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.
Related Articles
ಇಂದು ಮಾನದಂಡ ಇಲ್ಲದೆ ಕೊಡುವ ಹಲವು ಪ್ರಶಸ್ತಿಗಳಿವೆ. ಆದರೆ ಬನ್ನಂಜೆ ಬಾಬು ಅಮಿನ್ ಜಾನಪದ ಪ್ರಶಸ್ತಿ ಭಿನ್ನವಾಗಿದೆ. ಸಾಧನೆ ಮಾಡಿದ ಕಲಾವಿದರಿಗೆ, ವಿದ್ವಾಂಸರಿಗೆ ಈ ಪ್ರಶಸ್ತಿ ಲಭಿಸುತ್ತಿದೆ. ಇದು ರಾಜ್ಯಮಟ್ಟದ ಮನ್ನಣೆಯನ್ನು ಪಡೆದುಕೊಂಡಿದೆ. ಇವತ್ತು ಪ್ರಭಾವ, ಶಿಫಾರಸಿಗೆ ಪ್ರಶಸ್ತಿ ಪಡೆಯಲು ಸಾಧ್ಯವಿದೆ. ಜಾನಪದ ಎಂಬ ಬ್ಯಾಚ್ ಹಾಕಿಕೊಂಡು ತಿರುಗುವವರು ತುಂಬಾ ಮಂದಿ ಇದ್ದಾರೆ. ಆದರೆ ಅದರ ಸ್ಪಷ್ಟ ಜ್ಞಾನ, ನಿರೂಪಣೆ ಮಾಡುವವರು ಬೆರಳೆಣಿಗೆ ಮಂದಿ ಮಾತ್ರಯಿದ್ದು, ಅದರಲ್ಲಿ ಬಾಬು ಅಮೀನ್ ಪ್ರಮುಖರಾಗಿದ್ದಾರೆ ಎಂದರು.
Advertisement
ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರಶಸ್ತಿ ಪ್ರದಾನ ಮಾಡಿದರು. ಉಡುಪಿ ಯುವವಾಹಿನಿ ಘಟಕದ ಅಧ್ಯಕ್ಷ ನಾರಾಯಣ ಬಿ.ಎಸ್. ಅಧ್ಯಕ್ಷತೆ ವಹಿಸಿದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ, ಕಾರ್ಯದರ್ಶಿ ಮಹಾಬಲ ಅಮೀನ್, ಕೋಶಾಧಿಕಾರಿ ಭಾರತಿ ಭಾಸ್ಕರ್ ಸುವರ್ಣ, ಮಹಿಳಾ ಸಂಚಾಲಕಿ ಶಕುಂತಳಾ ಸುಕೇಶ್, ಉದಯ ಅಮೀನ್, ಪದಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ದಯಾನಂದ ಅವರು ನಿರೂಪಿಸಿದರು.
ರಾಜಕೀಯ ಪ್ರಭಾವ ಬಳಸಿತುಳು ಭಾಷೆಯ ನಿರ್ಲಕ್ಷ್ಯ ಮಾಡಿದರೆ, ಮುಂದಿನ ಪೀಳಿಗೆಗೆ ಇಂಟರ್‌ನೆಟ್ ಮೂಲಕ ತುಳು ಭಾಷೆ, ಶಬ್ದಗಳನ್ನು ತೋರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ತುಳು ಭಾಷಿಗರು ಒಂದಾಗಿ ರಾಜಕೀಯ ಪ್ರಭಾವ ಬಳಸಿ ಚಳುವಳಿ ಮಾಡಿದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯ ಎಂದರು.