Advertisement

Udupi ‘ಬೇಕರ್ಸ್ ಮೀಟ್’; ಸೆ.10 ರಂದು ಅಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮ

10:59 PM Sep 07, 2023 | Team Udayavani |

ಉಡುಪಿ :ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ ಮತ್ತು ಇಂಡಿಯನ್ ಬೇಕರಿ ಫೆಡರೇಶನ್, ಇದರ ಸಹಭಾಗಿತ್ವದಲ್ಲಿ ಬೇಕರ್ಸ್ ಮೀಟ್, ಎಂಬ ಅಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮವು ಸೆ 10 ರಂದು, ಆದಿತ್ಯವಾರ ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಲಿದೆ.

Advertisement

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮದ ಮುಖ್ಯ ಉದ್ದೇಶ, ತಯಾರಿಕ ಘಟಕಗಳು ಮತ್ತು ಮಾರಾಟ ಮಳಿಗೆಗಳನ್ನು, ಯಾವ ರೀತಿಯಲ್ಲಿ ಸ್ವಚ್ಛವಾಗಿ ಇಡಬಹುದು, ಸರಕಾರದ ನಿಯಮಾವಳಿಗಳು ಅನುಸಾರ ಉದ್ಯಮವನ್ನು ನಡೆಸುವುದರ ಬಗ್ಗೆ ಮಾಹಿತಿ, ಮತ್ತು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳ ಬಹುದು. ಉದ್ಯಮಿಗಳಿಗೆ ಸಂಘಟನಾತ್ಮಕ ವಿಚಾರಗಳಲ್ಲಿ ಅತ್ಯಂತ ಪ್ರಯೋಜನಕಾರಿ ಮಾಹಿತಿ ನೀಡಲಾಗುತ್ತದೆ.

ಈ ಕಾರ್ಯಕ್ರಮವನ್ನು ಉಡುಪಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತಾಧಿಕಾರಿ ಡಾ ಪ್ರೇಮಾನಂದ ಕೆ.ಉದ್ಘಾಟಿಸಲಿದ್ದಾರೆ. ರಾಷ್ಟ್ರಮಟ್ಟದ ಬೇಕರಿ ಸಂಘಟನೆಯ ಪದಾಧಿಕಾರಿಗಳಾದ ಪಿ.ಎನ್.  ಶಂಕರನ್,ಕೆ.ಆರ್ ಬಾಲನ್, ಬಾಲರಾಜ್ ಕೆ.ಆರ್. , ಸುಹಾಸ್ ಉಪಾಧ್ಯಾಯ ( ಕರ್ನಾಟಕ ಬೇಕರಿ ಸಂಘ ), ಕಿರಣ್ (ಕೇರಳ ಬೇಕರಿ ಅಸೋಸಿಯೇಷನ್) ಕೇಕ್ ತಯಾರಿಕೆಯಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ ರಂಜಿತ್, ಚಿಕ್ಕಮಗಳೂರು ಟೇಸ್ಟಿ ವರ್ಲ್ಡ್ ಫುಡ್ ಫ್ಯಾಕ್ಟರಿ ಎಂಡಿ ಎಂ.ಎನ್ ಅರವಿಂದ್ ಸೇರಿ ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಂತ ಇರುವ ಎಲ್ಲಾ ಬೇಕರಿಗಳು ಆಹಾರ ಉತ್ಪಾದಕರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಘದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next