Advertisement

ಉಡುಪಿಗೆ ಆಗಮಿಸಿವೆ “ನ್ಯೂ ಫೌಂಡ್‌ ಲ್ಯಾಂಡ್‌’ಶ್ವಾನಗಳು

06:15 AM Aug 01, 2017 | Team Udayavani |

ಉಡುಪಿ: ಮೂಲತಃ ಕೆನಡಾ ಮೂಲದ “ನ್ಯೂ ಫೌಂಡ್‌ ಲ್ಯಾಂಡ್‌’ ಶ್ವಾನ ತಳಿಯ ಎರಡು ನಾಯಿ ಮರಿಗಳು ಮೊತ್ತ ಮೊದಲ ಬಾರಿಗೆ ಕರಾವಳಿಯ ಉಡುಪಿಗೆ ಆಗಮಿಸಿವೆ. 

Advertisement

ಕಲ್ಯಾಣಪುರ ಸಂತೆಕಟ್ಟೆ ಬಾರ್ನೆಸ್‌ ಕೆನೆಲ್‌ನ ಆಲ್ವಿನ್‌ ಬಾರ್ನೆಸ್‌ ಅವರು 2 ನ್ಯೂ ಫೌಂಡ್‌ ಲ್ಯಾಂಡ್‌ ಶ್ವಾನ ಮರಿಗಳನ್ನು ಬೆಂಗಳೂರಿನಿಂದ ಇಲ್ಲಿಗೆ ತರಿಸಿದ್ದು, ಈ ಶ್ವಾನಗಳ ಕುರಿತು ಇದೀಗ ಶ್ವಾನಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.  

ಸಾಮಾನ್ಯವಾಗಿ ನೋಡುವುದಕ್ಕೆ ಕರಡಿಯನ್ನು ಹೋಲುವ ಈ ನಾಯಿಗೆ ನೀರೆಂದರೆ ಬಲು ಇಷ್ಟವಂತೆ. ಯಾರಾದರೂ ನೀರಿನಲ್ಲಿ ಬಿದ್ದರೆ ಎಷ್ಟೇ ಆಳವಿದ್ದರೂ ರಕ್ಷಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಸುಮಾರು 125 ಕೆಜಿ ತೂಕದ ವರೆಗೂ ಬೆಳೆಯಲಿದ್ದು, ಮನುಷ್ಯರೊಂದಿಗೆ ಅತ್ಯಂತ ಪ್ರೀತಿಯಿಂದ ವ್ಯವಹರಿಸುತ್ತದೆ. ಇದಕ್ಕೆ ತರಬೇತಿ ನೀಡಿದರೆ ಸಾಹಸ ಕ್ರೀಡೆ, ಪತ್ತೆದಾರಿ ಕಾರ್ಯಗಳಿಗೂ ಬಳಸಿಕೊಳ್ಳಲು ಯೋಗ್ಯವಾಗಿವೆ. ಈ ನಾಯಿ ಮರಿಯೊಂದಕ್ಕೆ ಸುಮಾರು 1 ಲ.ರೂ. ವರೆಗೂ ಬೆಲೆಯಿದೆ ಎಂದು ಆಲ್ವಿನ್‌ ಬಾರ್ನೆಸ್‌ ಅವರು ಹೇಳುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next