ಉಡುಪಿ: ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಸರ್ವ ಧರ್ಮ ಕ್ರಿಸ್ಮಸ್ ಆಚರಣೆ ಪೂರಕವಾಗಿದೆ. ಇಂತಹ ಆಚರಣೆ ಗಳು ಎಲ್ಲ ಧರ್ಮದವರು ಹಮ್ಮಿಕೊಳ್ಳು ವಂತಾಗಬೇಕು ಎಂದು ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ತಿಳಿಸಿದರು.
ಉಡುಪಿ ಶೋಕಮಾತಾ ಇಗರ್ಜಿಯ ಆಶ್ರಯದಲ್ಲಿ ಸೌಹಾರ್ದ ಸಮಿತಿ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಮತ್ತು ಘಟಕದ ವತಿಯಿಂದ ಇಗರ್ಜಿಯ ವಠಾರದಲ್ಲಿ ಗುರುವಾರ ಆಯೋಜಿಸಲಾದ ಸರ್ವಧರ್ಮ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೋ ಅಧ್ಯಕ್ಷತೆ ವಹಿಸಿದರು. ಮಲ್ಪೆ ಸಿಎಸ್‌ಐ ಎಬಿನೆಜರ್ ಚರ್ಚ್ ಮಲ್ಪೆಯ ಪಾಸ್ಟರ್ ರೆ| ಗಾಬ್ರಿಯಲ್ ಆರ್. ಸ್ಯಾಮುವೆಲ್, ಮೂಳೂರು ಜುಮಾ ಮಸೀದಿ ಧರ್ಮಗುರು ಮೌಲಾನಾ ಹೈದರ್ ಆಲಿ ಅಹÕನಿ, ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.
ಶೋಕಮಾತಾ ಚರ್ಚ್ ಪ್ರ. ಧರ್ಮ ಗುರು ರೆ|ಫಾ| ವಲೇರಿಯನ್ ಮೆಂಡೊನ್ಸಾ ಸ್ವಾಗತಿಸಿ, ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್ ಡಿ’ಸೋಜಾ ವಂದಿಸಿದರು. ಆಯೋಗ ಗಳ ಸಂಯೋಜಕ ಅಲೊ#ನ್ಸ್ ಡಿ’ ಕೋಸ್ಟಾ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳು, ಚರ್ಚ್ ಗಾಯನ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿಶೇಷ ಆಕರ್ಷಣೆಯಾಗಿ ಕ್ರಿಸ್ಮಸ್ ಟ್ರೀ, ಗೋದಲಿ ಪ್ರದರ್ಶನ, ನಕ್ಷತ್ರಗಳ ಬೆಳಗುವಿಕೆ, ಕ್ರಿಸ್ಮಸ್ ಕೇಕ್ ವಿತರಿಸಲಾಯಿತು.