ಉಡುಪಿ: ಆಸ್ಪತ್ರೆಗಳು ಪ್ರಸ್ತುತ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಹೊಸ ತಂತ್ರಜ್ಞಾನಗಳನ್ನು ಬಳಸಿ ಕಾಯಿಲೆಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಈ ನೆಲೆಯಲ್ಲಿ ಆದರ್ಶ ಆಸ್ಪತ್ರೆಯು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಆದರ್ಶ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸೂಕ್ಷ್ಮ ಜೀವವಿಜ್ಞಾನ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳು ಆಸ್ಪತ್ರೆಗಳಿಗೆ ಬರಲಿ ಎಂದು ಹಾರೈಸುವ ಬದಲು ಬಂದಿರುವ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಲು ಅಗತ್ಯವಿರುವ ಚಿಕಿತ್ಸೆ ನೀಡುವ ಬಗ್ಗೆ ಗಮನ ಹರಿಸಬೇಕು. ಆದರ್ಶ ಆಸ್ಪತ್ರೆ ಜನಮಾನಸದಲ್ಲಿ ಬೆರತು ಹೋಗಿದೆ. ಇಲ್ಲಿನ ವೈದ್ಯರು ಹಾಗೂ ಸಿಬಂದಿಗಳು ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ ಎಂದರು.
ಸೂಕ್ಷ್ಮ ಜೀವ ವಿಜ್ಞಾನ ವಿಭಾಗ
ಇಲ್ಲಿ ರಕ್ತ, ಮೂತ್ರ, ಮಲ, ಕಫಹಾಗೂ ಇತರ ದ್ರವಗಳಲ್ಲಿ ಇರುವ ಸೂಕ್ಷ್ಮ ಜೀವಾಣುಗಳನ್ನು ಆಧುನಿಕ ಉಪಕರಣ ಬಳಸಿ ಪತ್ತೆ ಹಚ್ಚಲಾಗುತ್ತದೆ.
ಆದರ್ಶ ಆಸ್ಪತ್ರೆಯ ಸಿಇಓ ವಿಮಲಾ ಚಂದ್ರಶೇಖರ್, ನರರೋಗ ವಿಭಾಗದ ಪ್ರೊ| ಎ. ರಾಜ, ಮೂಳೆ ವಿಭಾಗದ ಡಾ| ಮೋಹನದಾಸ್ ಶೆಟ್ಟಿ, ಇಎನ್‌ಟಿ ಸರ್ಜನ್ ಡಾ| ಭಾಸ್ಕರ್ ಎಂ.ಎನ್., ಹೃದ್ರೋಗ ತಜ್ಞ ಡಾ| ಶ್ರೀಕಾಂತ್‌ಕೃಷ್ಣ, ಸಂಧಿವಾತ ತಜ್ಞೆ ಡಾ|ಅಶ್ವಿನಿ ಕಾಮತ್, ಡಾ| ಪ್ರಭಾಕರ್ ಮಲ್ಯ, ಡಾ| ಜಸಿøತ್‌ಸಿಂಗ್ ದಿಲ್, ಡಾ| ಸುಮಿತ್, ಡಾ| ಎಂ.ಎಸ್. ಉರಾಳ ಉಪಸ್ಥಿತರಿದ್ದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿದರು.