Advertisement
ಸಿದ್ದಾರ್ಥ್ ಹಾಗೂ ಇತರ ಇಬ್ಬರು ಕರಂಬಳ್ಳಿಯ ಕೆರೆಗೆ ಈಜಲು ತೆರಳಿದ್ದು, ಈ ಪೈಕಿ ಇಬ್ಬರು ನೀರಿಗಿಳಿದಿರಲಿಲ್ಲ ಎಂದು ಹೇಳಲಾಗಿದೆ.
ಮತ್ತೊಂದು ಘಟನೆಯಲ್ಲಿ ಅಲೆವೂರಿನ ನೈಲಪಾದೆಯ ನದಿಯಲ್ಲಿ ನಾಲ್ವರು ಈಜಾಡಲು ತೆರಳಿದ್ದು, ಇಬ್ಬರು ನದಿಗೆ ಇಳಿದಿದ್ದರು. ಇವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ನೀರುಪಾಲಾಗಿದ್ದು, ಸ್ಥಳೀಯರು ಕೂಡಲೇ ಅವರನ್ನು ಮೇಲೆತ್ತಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ರವಿವಾರ ರಜಾದಿನವಾದ್ದರಿಂದ ವಿದ್ಯಾರ್ಥಿಗಳು ಮೋಜಿಗಾಗಿ ನೀರಿನಾಟದಲ್ಲಿ ತೊಡಗಿದ್ದರು.