ಉಡುಪಿ: ಬೆಡ್ ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿ ವೃದ್ದೆಯೊಬ್ಬರ ಮನೆಗೆ ನುಗ್ಗಿರುವ ಘಟನೆ ಉಡುಪಿ ಅಂಬಲಪಾಡಿ ಸಮೀಪದ ಶ್ಯಾಮ್ ಸದನದಲ್ಲಿ ನಡೆದಿರುವುದಾಗಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರವೀಣ್ ಎಂಬವರು ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ತಾಯಿ ವಿನೋದಿನಿ (82ವರ್ಷ) ಉಡುಪಿಯ ಅಂಬಲಪಾಡಿಯ ಶ್ಯಾಮ್ ಸದನದಲ್ಲಿ ಒಬ್ಬರೇ ವಾಸವಾಗಿದ್ದರು. 14ರಂದು ಸಂಜೆ ಯಾರೋ ಅಪರಿಚಿತ ವ್ಯಕ್ತಿ ಬೆಡ್ ಶೀಟ್ ಮಾರುವ ನೆಪದಲ್ಲಿ ವಿನೋದಿನಿ ಅವರ ರೂಂ ಪ್ರವೇಶಿಸಿ ಬೆಡ್ ಶೀಟ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ.
ಇದನ್ನೂ ಓದಿ:B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
ಇದನ್ನು ಗಮನಿಸಿದ ಮನೆಯ ಕೇರ್ ಟೇಕರ್ ತುಳಜಾ ಅವರು ಪ್ಲಂಬಿಂಗ್ ಕೆಲಸಕ್ಕೆ ಬಂದಿದ್ದ ಪ್ರಶಾಂತ್ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮನೆಯಿಂದ ಹೊರಬಂದು ಕಾರಿನಲ್ಲಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಬಗ್ಗೆ ಪ್ರವೀಣ್ ಸ್ನೇಹಿತ ಕಿರಣ್ ಕುಮಾರ್ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.