Advertisement

ಉಡುಪಿ: ನೀರಿನ ಶುಲ್ಕ ಪಾವತಿಯಲ್ಲಿ ಕುಸಿತ

11:11 PM Jul 24, 2019 | sudhir |

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಶುಲ್ಕ ಪಾವತಿಸುವಲ್ಲಿ ಭಾರೀ ಕುಸಿತ ಕಂಡುಬಂದಿದೆ.

Advertisement

ನಗರಸಭೆ ವ್ಯಾಪ್ತಿಯಲ್ಲಿ 18,322 ನಳ್ಳಿನೀರಿನ ಸಂಪರ್ಕ ಇದೆ. ಇದರಲ್ಲಿ 1,437 ವಾಣಿಜ್ಯ ಬಳಕೆಗೆ ಮತ್ತು 16,831 ಮನೆಗಳಿಗೆ ಸಂಪರ್ಕ, 28 ಕಾರ್ಖಾನೆಗಳಿಗೆ, ಇತರ 26 ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ ಒಟ್ಟು 220 ನಳ್ಳಿ ನೀರಿನ ಸಂಪರ್ಕ ಅಳವಡಿಸಲಾಗಿದೆ. 2018ರ ಎಪ್ರಿಲ್ನಿಂದ 2019ರ ಮಾರ್ಚ್‌ವರೆಗೆ 9,34,68,000 ರೂ. ನೀರಿನ ತೆರಿಗೆ ಸಂಗ್ರಹವಾಗಿದೆ.

ತೆರಿಗೆ ಸಂಗ್ರಹ ಇಳಿಕೆ

2018ರ ಎಪ್ರಿಲ್ನಿಂದ ಜುಲೈ ತಿಂಗಳವರೆಗೆ 3,31,90,343 ರೂ. ತೆರಿಗೆ ಸಂಗ್ರಹವಾಗಿತ್ತು. ಆದರೆ 2019ರಲ್ಲಿ ಇದೇ ಅವಧಿಯಲ್ಲಿ ಜುಲೈ 23ರ ವರೆಗೆ 2,42,67,542 ರೂ.ತೆರಿಗೆ ಸಂಗ್ರಹಿಸಲಾಗಿದೆ. ಅಂದರೆ ಕಳೆದ ಬಾರಿಗಿಂತ 89,22,801 ರೂ.ಕಡಿಮೆ. ತೆರಿಗೆ ಸಂಗ್ರಹ ಕಟ್ಟನಿಟ್ಟು ಮಾಡುವುದರಿಂದ 2020ರ ಮಾರ್ಚ್‌ ಒಳಗೆ ಗರಿಷ್ಠ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ.

ಸಂಪರ್ಕ ಕಡಿತ ಎಚ್ಚರಿಕೆ

Advertisement

ಪ್ರತೀ ತಿಂಗಳು ನೀರಿನ ಬಿಲ್ ಪಾವತಿಸಿದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಈ ಬಾರಿ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಹಲವಾರು ಮಂದಿ ನೀರಿನ ಬಿಲ್ ಬಾಕಿ ಇರಿಸಿಕೊಳ್ಳುವವರ ಹೆಸರನ್ನು ತಯಾರು ಮಾಡಿದ್ದು, ವಾರದೊಳಗೆ ನೀರಿನ ಶುಲ್ಕ ಪಾವತಿಸದಿದ್ದರೆ ಅಂತಹವರ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೀರು ಸಮರ್ಪಕವಾಗಿ ಪೂರೈಕೆ ಮಾಡಲು ಗರಿಷ್ಠ ವೆಚ್ಚ ತಗಲುವ ಕಾರಣ ನಗರಸಭೆಯು ತೆರಿಗೆ ಸಂಗ್ರಹಕ್ಕೆ ಪ್ರಾಮುಖ್ಯತೆ ನೀಡಿದೆ. ಒಂದು ವೇಳೆ ಗಡುವಿನೊಳಗೆ ತೆರಿಗೆ ಪಾವತಿಸದಿದ್ದಲ್ಲಿ ನಳ್ಳಿ ನೀರಿನ ಜೋಡಣೆಯು ರದ್ದುಗೊಳ್ಳುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next