Advertisement
3 ಲ.ರೂ.ಬಿಲ್ ಬಾಕಿಒಂದು ವರ್ಷದಿಂದ ಸುಮಾರು 3 ಲ.ರೂ.ಗೂ ಅಧಿಕ ಮೊತ್ತವನ್ನು ಮೆಸ್ಕಾಂ ಬಾಕಿ ಉಳಿಸಿಕೊಂಡಿತ್ತು. ರಾಜಕಾರಣಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳುವುದಿದೆ. ಉಸ್ತುವಾರಿ ಸಚಿವರು ಬಂದಾಗಲೂ ಹಲವು ಬಾರಿ ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಪತ್ರಿಕಾಗೋಷ್ಠಿ ಸಹಿತ ವಿವಿಧ ರೀತಿಯ ಸಭೆಗಳನ್ನೂ ಇಲ್ಲಿ ನಡೆಸಲಾಗುತ್ತಿದೆ.
ಉಡುಪಿ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಪಡುಬಿದ್ರಿ ಗ್ರಾ. ಪಂ.ಕಚೇರಿ, ತೆಂಕನಿಡಿಯೂರು ಸರಕಾರಿ ಶಾಲೆಯ ವಿದ್ಯುತ್ ಕಡಿತಗೊಳಿಸಲು ಕೂಡ ಮೆಸ್ಕಾಂ ಮುಂದಾಗಿದೆ. ಸರಕಾರಿ ಕಚೇರಿಯ ವಿದ್ಯುತ್ ಬಿಲ್ ಕಟ್ಟಲೂ ಸರಕಾರದಲ್ಲಿ ಹಣವಿಲ್ಲ. ರಾಜ್ಯ ಸರಕಾರದ ಆರ್ಥಿಕ ದಿವಾಳಿತನಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕಿಲ್ಲ ಎಂದು ಶಾಸಕ ಯಶ್‌ಪಾಲ್ ಸುವರ್ಣ ಮುಖ್ಯಮಂತ್ರಿಗಳಿಗೆ ಎಕ್ಸ್ ಮೂಲಕ ತಿಳಿಸಿದ್ದಾರೆ. “ಸರಕಾರದ ಹಣ ಬಿಡುಗಡೆಯಾಗುವಾಗ ವಿಳಂಬವಾದ ಕಾರಣ ಬಿಲ್ ಬಾಕಿಯಾಗಿರಬಹುದು. ಸಂಪರ್ಕ ಕಡಿತಗೊಳಿಸಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸರಕಾರ ಹಣ ಮಂಜೂರುಗೊಳಿಸಿದ ಕೂಡಲೇ ಪಾವತಿಗೆ ಕ್ರಮ ತೆಗೆದುಕೊಳ್ಳಲಾಗುವುದು.”
– ಡಾ|ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ