ಇಲಾಖೆಯಲ್ಲಿ ಸುಮಾರು 33 ವರ್ಷ 6 ತಿಂಗಳು ಕರ್ತವ್ಯ ನಿರ್ವಹಿಸಿ ಇದೇ ದಿನ ನಿವೃತ್ತರಾದ ಶೋಭಾ ಎನ್. ಅವರನ್ನು
ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಸಮ್ಮಾನಿಸಿದರು.
Advertisement
ಸಿ.ಎಸ್.ಪಿ. ಕಂಟ್ರೋಲ್ ರೂಂ, ಸಿ.ಎಸ್.ಪಿ. ವಾಹನ ವಿಭಾಗ, ಸಿ.ಎಸ್.ಪಿ. ಕಚೇರಿ ಮಲ್ಪೆ, ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ, ಮಂಗಳೂರು ನಗರ ಹಾಗೂ ಜಿಲ್ಲಾ ಕಂಟ್ರೋಲ್ ರೂಂ, ಉಡುಪಿ ಹಾಗೂ ದ.ಕ. ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ, ಕಾರ್ಕಳ ಮತ್ತು ಉಡುಪಿ ರಾಮಕ್ಷತ್ರಿಯ ಸಂಘದ ವತಿಯಿಂದಲೂ ಸಮ್ಮಾನಿಸಲಾಯಿತು. ಸಿ.ಎಸ್.ಪಿ. ಕೇಂದ್ರ ಸ್ಥಾನ ಪೊಲೀಸ್ ಉಪಾಧೀಕ್ಷಕ ಟಿ.ಎಸ್. ಸುಲ್ಪಿ, ಕಂಟ್ರೋಲ್ ಇನ್ ಸ್ಪೆಕ್ಟರ್ ಕರುಣಾಸಾಗರ್, ಆರ್.ಪಿ.ಐ. ಸೋಮಪ್ಪ ನಾಯ್ಕ್, ಜಿ.ಎಚ್.ಎ. ಮಂಜುಳಾ ಗೌಡ, ಕಾರವಾರ ಸಿ.ಎಸ್. ಪಿ. ಠಾಣೆಯ ನಿವೃತ್ತ ಪಿ.ಎಸ್.ಐ. ಅಶೋಕ್, ನಿವೃತ್ತ ದಂಪತಿಯ ಪುತ್ರಿಡಾ| ಸುಮಾ ಉಪಸ್ಥಿತರಿದ್ದರು.