Advertisement

Udupi: ಇಂದು ಶ್ರೀ ಕೃಷ್ಣ ಮಠದಲ್ಲಿ 100 ನೃತ್ಯಗಾರರಿಂದ 14 ಗಂಟೆ ನೃತ್ಯ ಪ್ರದರ್ಶನ

02:26 AM Oct 17, 2024 | Team Udayavani |

ಉಡುಪಿ: ಅಭಿಜ್ಞಾ ನೃತ್ಯ ಶಾಲೆ ವತಿಯಿಂದ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಅ.17ರಂದು ಶ್ರೀಕೃಷ್ಣಮಠ ಮಧ್ವಾಂಗಣ, ರಾಜಾಂಗಣದಲ್ಲಿ ದಾಖಲೆಗಾಗಿ 100 ಮಂದಿ 14 ಗಂಟೆಗಳ ನಿರಂತರ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ ಎಂದು ಅಭಿಜ್ಞಾ ನೃತ್ಯ ಶಾಲೆ ಮುಖ್ಯಸ್ಥೆ, ಕಾರ್ಯಕ್ರಮ ಸಂಚಾಲಕಿ ಚಂದ್ರಬಾನು ಚತುರ್ವೇದಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ನ.17ರಂದು ಬೆಳಗ್ಗೆ 9ಕ್ಕೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅಶ್ವತ್ಥ ನಾರಾಯಣ ಸ್ವಾಮಿ, ಕಂಠಶಾಲ ಪವನ್‌ಕುಮಾರ್‌ ಸಹಿತ ದಕ್ಷಿಣ ಭಾರತದ ಖ್ಯಾತ, ಹಿರಿಯ ನೃತ್ಯ ಗುರುಗಳು ಭಾಗವಹಿಸಲಿದ್ದಾರೆ. 5ರಿಂದ 60 ವರ್ಷಗಳ ವರೆಗಿನ ಮಹಿಳೆಯರು ಹೈದರಾಬಾದ್‌, ಚೆನ್ನೈ, ವಿಜಯವಾಡ, ಬೆಂಗಳೂರು ಸಹಿತ ನಾನಾ ಭಾಗಗಳಿಂದ ನೃತ್ಯಗಾರರು ಭಾಗವಹಿಸಲಿದ್ದಾರೆ.

ಬೆಳಗ್ಗೆ 8ರಿಂದ ನಿರಂತರ 14 ಗಂಟೆಗಳ ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್ ರೆಕಾರ್ಡ್‌ಗೆ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗಿನಿಂದ ಸಂಜೆವರೆಗೆ ಮಧ್ವಾಂಗಣ, ಸಂಜೆ ಬಳಿಕ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಸ್ತ್ರೀಯ ಸಂಗೀತ ಒಳಗೊಂಡ ಭರತನಾಟ್ಯ ನೃತ್ಯಕಾರ್ಯಕ್ರಮ ಇದಾಗಿದೆ ಎಂದರು.

ಅಭಿಜ್ಞಾ ನೃತ್ಯ ಶಾಲೆ ಸಂಸ್ಥೆಯು ಆಂಧ್ರಪ್ರದೇಶದ ಹಿಂದೂಪುರದಲ್ಲಿದೆ. ಕಳೆದ 20 ವರ್ಷಗಳಿಂದ ದೇಸಿ ನೃತ್ಯ, ಭರತನಾಟ್ಯ ಕಲೆಗಳ ತರಬೇತಿಯನ್ನು ನಡೆಸಿಕೊಂಡು ಬರುತ್ತಿದೆ. ಕರ್ನಾಟಕ, ಆಂಧ್ರ ಸಹಿತ ದಕ್ಷಿಣ ಭಾರತದಲ್ಲಿ ಗಿನ್ನೆಸ್‌ ಬುಕ್‌, ಲಿಮ್ಕಾ ರೆಕಾರ್ಡ್‌ನಂಥ ದಾಖಲೆ ಕೂಟಗಳನ್ನು ಆಯೋಜಿಸಿ ಪ್ರಮಾಣಪತ್ರ ಪಡೆದಿದೆ ಎಂದರು. ಪುತ್ತಿಗೆ ಮಠದ ಸಾಂಸ್ಕೃತಿ ಕಾರ್ಯದರ್ಶಿ ರವೀಂದ್ರ ಆಚಾರ್ಯ ಮತ್ತು ಚಂದ್ರಮೋಹನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next