Advertisement
ಯಾರಿಗೆ ಚಿಕಿತ್ಸೆ?ಜಿಲ್ಲೆಯಲ್ಲಿ ಕೊರೊನಾ ಲಕ್ಷಣವಿಲ್ಲದ ಪ್ರಕರಣಗಳು ಹೆಚ್ಚಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯಲಾಗಿದೆ. ಸುಮಾರು 10ಕ್ಕೂ ಅಧಿಕ ಸ್ಥಳಗಳನ್ನು ಕೊರೊನಾ ಸೋಂಕಿತರ ಕ್ವಾರಂಟೈನ್‌ಗೆ ಗುರುತಿಸಲಾಗಿದೆ. ಮನೆ ಐಸೋಲೇಶನ್‌ಗೆ ಒಪ್ಪದ ಕೋವಿಡ್ ಸೋಂಕಿತರನ್ನು ಈ ಕೇರ್ ಸೆಂಟರ್‌ನಲ್ಲಿ ಇಡಲಾಗುತ್ತಿದೆ. ಪ್ರತಿ ಸೆಂಟರ್‌ನ ಉಸ್ತುವಾರಿಯನ್ನು ಓರ್ವ ದಾದಿ ಹಾಗೂ ಓರ್ವ ವೈದ್ಯ ನೋಡಿಕೊಳ್ಳಲಿದ್ದಾರೆ. ವೈದ್ಯರು ದಿನಕ್ಕೆ ಎರಡು ಬಾರಿ ರೋಗಿಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಲಕ್ಷಣ ಇರುವವರಿಗೆ (ಅಧಿಕ ಆನಾರೋಗ್ಯ) ಚಿಕಿತ್ಸೆಗೆ ಡಾ| ಟಿಎಂಎ ಪೈ ಆಸ್ಪತ್ರೆ ಬಳಸಲಾಗುತ್ತಿದೆ. ಕಡಿಮೆ ಲಕ್ಷಣವಿರುವ ರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆ, ಆದರ್ಶ ಆಸ್ಪತ್ರೆ, ಕಾರ್ಕಳ ತಾಲೂಕು ಆಸ್ಪತ್ರೆ ಹಾಗೂ ಭುವನೇಂದ್ರ ಕಾಲೇಜು ವಸತಿ ನಿಲಯ, ಕುಂದಾಪುರ ತಾಲೂಕು ಆಸ್ಪತ್ರೆ ಮತ್ತು ಹಳೆಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 800 ಹಾಸಿಗೆ ಮೀಸಲು
ಜಿಲ್ಲೆಯಲ್ಲಿ ಸದ್ಯ ಒಟ್ಟು 16ರಷ್ಟು ವೆಂಟಿಲೇಟರ್ ಹಾಗೂ 1,200 ಬೆಡ್ ಚಿಕಿತ್ಸೆಗೆ ಸಿದ್ಧವಿದೆ. ಪ್ರಸ್ತುತ 584 ಮಂದಿ ರೋಗಿಗಳಿದ್ದು, ಲಕ್ಷಣವಿರುವವರು ಆಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ತುರ್ತಾಗಿ ಅಗತ್ಯಕ್ಕಾಗಿ ವಿವಿಧ ಡೇ ಕೇರ್ ಸೆಂಟರ್‌ನಲ್ಲಿ 800 ಹಾಸಿಗೆ ಕಾದಿರಿಸಲಾಗಿದೆ.
Related Articles
ಉಡುಪಿ ತಾಲೂಕಿನ ಡೇ ಕೇರ್ ಸೆಂಟರ್‌ನಲ್ಲಿ ರೋಗಿಗಳಿಗೆ ಸರಿಯಾದ ಆಹಾರ ನೀಡುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. “ದೂರುಗಳ ಬಗ್ಗೆ ಗಮನಕ್ಕೆ ಬಂದಿವೆ. ಇದನ್ನು ಪರಿಹರಿಸುತ್ತೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
Advertisement
ಜಿಲ್ಲೆಯಲ್ಲಿ ಕೋವಿಡ್ ಸೋಂಕು ರಹಿತ ಕೋವಿಡ್ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಕೆಲವು ಮನೆಗಳಲ್ಲಿ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಅಂತಹ ವ್ಯಕ್ತಿಗಳನ್ನು ಡೇ ಕೇರ್ ಸೆಂಟರ್‌ನಲ್ಲಿ ಇಡಲಾಗುತ್ತಿದೆ.– ಡಾ| ಸುಧೀರ್ ಚಂದ್ರ ಸೂಡ, ಡಿಎಚ್‌ಒ, ಉಡುಪಿ