Advertisement

ಉಡುಪಿ: ಮತ್ತೆ 25 ಮಂದಿ ಆಸ್ಪತ್ರೆಗೆ ದಾಖಲು

09:58 AM Mar 28, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 25 ಮಂದಿ ಕೋವಿಡ್-19 ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೆ ಪ್ರಯೋಗಾಲ ಯಕ್ಕೆ ಕಳುಹಿಸಿದ 76 ವರದಿಯಲ್ಲಿ 51 ಮಂದಿ ಶಂಕಿತರ ಗಂಟಲು ದ್ರವ ಮಾದರಿ ವರದಿ ನೆಗೆಟಿವ್‌ ಬಂದಿದೆ.

Advertisement

ವಿದೇಶದಿಂದ ಆಗಮಿಸಿದ 10 ಮಂದಿ, ಕೋವಿಡ್-19 ಪಾಸಿಟಿವ್‌ ವ್ಯಕ್ತಿ ಗಳೊಂದಿಗೆ ಸಂಪರ್ಕ ಹೊಂದಿದ ಶಂಕಿತ ಇಬ್ಬರು, ತೀವ್ರ ರೀತಿಯ ಶ್ವಾಸಕೋಶ ಸೋಂಕು ಹಿನ್ನೆಲೆಯಲ್ಲಿ 13 ಮಂದಿ ಸೇರಿ ಒಟ್ಟು 25 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾ ಗಿದ್ದಾರೆ. ಇವರೆಲ್ಲರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕುಂದಾಪುರ ತಾಲೂಕಿನ 6 ಮಂದಿ, ಕಾರ್ಕಳದ 4 ಮಂದಿ, ಉಡುಪಿಯ 12 ಮಂದಿ, ಹೊರಜಿಲ್ಲೆಯ 3 ಮಂದಿ ಸೇರಿದ್ದಾರೆ.

ಇಂದಿನ 25 ಪ್ರಕರಣಗಳ ಸಹಿತ ಒಟ್ಟು 48 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಂಗಳವಾರ ಡಿಸಾcರ್ಜ್‌ ಆಗಿದ್ದಾರೆ. ಜಿಲ್ಲೆ ಯಲ್ಲಿ ಒಟ್ಟು 904 ಮಂದಿ ಶಂಕಿತರನ್ನು ಗುರುತಿಸಿದ್ದು, 285 ಮಂದಿ ಸ್ವಯಂ ದಿಗ್ಬಂಧನ ಅವಧಿ ಮುಗಿಸಿದ್ದಾರೆ. ಶಿರೂರಿನಲ್ಲಿ 620 ಮಂದಿ, ಹೆಜ ಮಾಡಿ ಚೆಕ್‌ಪೋಸ್ಟ್‌ನಲ್ಲಿ 1,586 ಮಂದಿ, ಮಲ್ಪೆ ಬಂದರಿನಲ್ಲಿ 312 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಕಾರ್ಕಳ: ನಾಲ್ವರು ಆಸ್ಪತ್ರೆಗೆ
ಕಾರ್ಕಳ ಸರಕಾರಿ ಆಸ್ಪತ್ರೆಗೆ ವಿದೇಶದಿಂದ ಬಂದಿರುವ ಇಬ್ಬರು ಮತ್ತು ಕೆಮ್ಮು ಜ್ವರದಿಂದ ಬಳಲುತ್ತಿರುವ ಮತ್ತಿಬ್ಬರು ದಾಖಲಾಗಿದ್ದಾರೆ. ಅವರ ಗಂಟಲ ದ್ರವದ ಸ್ಯಾಂಪಲನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಾ. 19ರಂದು ದುಬಾೖಯಿಂದ ಮಂಗಳೂರಿಗೆ ಆಗಮಿಸಿದ ಭಟ್ಕಳ ಮೂಲದ ವ್ಯಕ್ತಿಯೊಂದಿಗೆ ಕಾರ್ಕಳದ ಮೂವರು ಪ್ರಯಾಣಿಸಿದ್ದು, ಕುಕ್ಕುಂದೂರು ಗ್ರಾಮದ ಜೋಡುರಸ್ತೆಯ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಕ್ಕುಂದೂರಿನ ವ್ಯಕ್ತಿ ಊರಿನ ಮಕ್ಕಳಿಗೆ ಚಾಕಲೇಟ್‌ ನೀಡಿದ್ದಾರಲ್ಲದೆ ತಾಯಿ, ಪತ್ನಿಯೊಂದಿಗೆ ಕಾರ್ಕಳದ ಜವುಳಿ ಮಳಿಗೆಯೊಂದರಲ್ಲಿ ಶಾಪಿಂಗ್‌ ಮಾಡಿದ್ದಾರೆ ಎನ್ನಲಾಗಿದೆ. ವಿದೇಶದಿಂದ ಬಂದವರು ಮನೆಯಲ್ಲೇ ಇರಬೇಕೆಂದು ತಿಳಿಸಿದ್ದರೂ ಎಲ್ಲೆಂದರಲ್ಲಿ ಓಡಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next