Advertisement
ಜಿಲ್ಲೆಯಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರವಾಹ ಸಂರಕ್ಷಣಾ ರಚನೆಗಳು, ಸಮುದ್ರ ಕೊರೆತದಿಂದ ಉಂಟಾದ ಹಾನಿಯ ಪುನರ್ ಸ್ಥಾಪನೆ ಮತ್ತು ಇತರ ಮೂಲಸೌಕರ್ಯಗಳ ದುರಸ್ತಿ ಕಾಮಗಾರಿಗಳನ್ನು ಕೋವಿಡ್ ನಿಯಮಾವಳಿಯೊಂದಿಗೆ ಕಾಮಗಾರಿ ನಡೆಸಲು ಅವಕಾಶ ನೀಡಲಾಗಿದೆ. ಶವಸಂಸ್ಕಾರಕ್ಕೆ ಗರಿಷ್ಠ 5 ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ರಫ್ತುಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಎಲ್ಲ ಘಟಕಗಳು, ಸಂಸ್ಥೆಗಳು ಶೇ. 30ರಷ್ಟು ಸಿಬಂದಿಗಳನ್ನೊಳಗೊಂಡು ನಿಯಾವಳಿಯೊಂದಿಗೆ ಕರ್ತವ್ಯ ನಿರ್ವಹಿಸಲು ಅನುಮತಿಸಿದೆ. 1,000ಕ್ಕಿಂತ ಹೆಚ್ಚಿ ಸಿಬಂದಿಗಳಿರುವ ಸಂಸ್ಥೆ ಶೇ.10ರಷ್ಟು ಸಿಬಂದಿಗಳನ್ನು ಬಳಸಿಕೊಂಡು ಕೆಲಸ ಮಾಡ ಬಹುದಾಗಿದೆ ಎಂದು ಹೇಳಿದರು.
Related Articles
Advertisement
ಹೊಟೇಲ್ ಪಾರ್ಸೆಲ್‌ಗೆ ಮತ್ತು ಹೋಮ್ ಡೆಲಿವರಿ ಸೇವೆ ನೀಡಲು ಮಾತ್ರ ಅನುಮತಿಸಿದೆ. ಕಾಲುನಡಿಗೆಯಲ್ಲಿ ತೆರಳಿ ಪಾರ್ಸೆಲ್ ಗಳನ್ನು ಪಡೆಯಲು ಅವಕಾಶ ಇರುತ್ತದೆ. ಹೋಮ್ ಡೆಲಿವರಿ ಮಾಡುವ ಹೋಟೆಲ್‌ಗಳು ವಾಹನ ಉಪಯೋಗಿಸಲು ಅವಕಾಶ ವಿರುತ್ತದೆ. ದೇವಸ್ಥಾನ, ಶಾಂಪಿಂಗ್ ಮಾಲ್, ಸಿನೆಮಾ, ಜಿಮ್, ಕ್ರೀಡಾಂಗಣ, ಉದ್ಯಾನವನ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳ ಭೇಟಿ ನಿಷೇಧಿಸಲಾಗಿದೆ.
ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ಬಂಧಿಖಾನೆ, ನಾಗರೀಕ ರಕ್ಷಣೆ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಂದಾಯ, ಸಾರಿಗೆ , ಕಾರ್ಮಿಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ ಅಗತ್ಯವ ವಸ್ತುಗಳು ಹಾಗೂ ಸೇವೆಯನ್ನು ಪೂರೈಸುವ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯಾಚರಿಸಲಿದೆ. ಕೋವಿಡ್-19ರ ಕೆಲಸಗಳಿಗೆ ನಿಯೋಜಿಸಿರುವ ಎಲ್ಲ ಕಚೇರಿಗಳ ಅಧಿಕಾರಿಗಳು, ಸಿಬಂದಿಗಳು, ಸರಕಾರೇತರ ಸಂಸ್ಥೆಗಳ ಸ್ವಯಂ ಸೇವಕರು, ಅರಣ್ಯ ಇಲಾಖೆಯಿಂದ ಘೋಷಿಸಲ್ಪಟ್ಟ ಅರಣ್ಯ ಸಂಬಂಧಿ ಕೆಲಸ ಮತ್ತು ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೃಷಿ ಮತ್ತು ಸಂಬಂಧಿಸಿದ ಕೆಲಸಗಳು ಬೆಳಗ್ಗೆ 6ರಿಂದ 10ರವರೆಗೆ ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ, ಯಂತ್ರೋಪಕರಣಗಳಿಗೆ ಸಂಬಂಧಿಸಿದ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲ ಕೃಷಿ ಮತ್ತು ತತ್ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಜತೆಗೆ ಮೀನುಗಾರಿಕೆ ಕೋಳಿ ಸಾಕಾಣಿಕೆ, ಮಾಂಸ, ಹೈನುಗಾರಿಕೆಯೂ ಸೇರಿದೆ ಎಂದರು.
ಮೇಲಿನ ಆದೇಶ ಪಾಲಿಸದವರ ವಿರುದ್ಧ ಕ್ರಿಮಿನಲ್ ಪ್ರಕರಣ ವಿಧಿಸಿ, ಕಠಿನ ಕ್ರಮಕೈಗೊಳ್ಳಲಾಗುತ್ತದೆ. ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.