Advertisement

ಸಕಾಲ, ಭೂಮಿ ಅರ್ಜಿ ವಿಲೇವಾರಿ: ರಾಜ್ಯದಲ್ಲಿ ಉಡುಪಿಗೆ ದ್ವಿತೀಯ ಸ್ಥಾನ

12:30 AM Sep 15, 2019 | mahesh |

ಉಡುಪಿ: ಸಕಾಲ ಮತ್ತು ಭೂಮಿ ವಿಭಾಗದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

Advertisement

ಭೂಮಿ ಸೇವೆ
ಉಡುಪಿಯಲ್ಲಿ ಆಗಸ್ಟ್‌ನಲ್ಲಿ ಭೂಮಿ ವಿಭಾಗದಡಿ 4,672 ಅರ್ಜಿಗಳು ಸಲ್ಲಿಕೆಯಾಗಿದ್ದು, ಶೀಘ್ರವಾಗಿ ವಿಲೇವಾರಿ ಮಾಡಿ, ಸಿಗ್ಮಾ ರ್‍ಯಾಂಕಿಂಗ್‌ನಲ್ಲಿ 2.62 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನಿಯಾಗಿದೆ.

ನೋಟಿಸ್‌ ಜಾರಿ
ಉಡುಪಿ ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಕೆಲವು ಗ್ರಾ.ಪಂ. ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದು ಅರ್ಜಿಯೂ ಸಕಾಲದಡಿ ಸ್ವೀಕೃತಿಯಾಗಿಲ್ಲ. ಇದಕ್ಕಾಗಿ ಜಿಲ್ಲಾಡಳಿತ 98 ಗ್ರಾ.ಪಂ.ಗಳು ಮತ್ತು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿದೆ.

ಸಕಾಲಕ್ಕೆ ವಾಟ್ಸ್‌ಆ್ಯಪ್‌ ಗ್ರೂಪ್‌ ಮೊರೆ!
ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ತುರ್ತು ವಿಲೇವಾರಿಗೆ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿದ್ದು, ಅಪರ ಜಿಲ್ಲಾಧಿಕಾರಿಯವರು ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿಗಳಿಂದ ನಿತ್ಯ ಬಾಕಿಯಿರುವ ಅರ್ಜಿಗಳ ಮಾಹಿತಿ ಪಡೆಯುತ್ತಿದ್ದಾರೆ.

ರಾಜ್ಯ ಸರಕಾರ ಬಿಡುಗಡೆ ಮಾಡಿದ ಆಗಸ್ಟ್‌ ತಿಂಗಳ ಜಿಲ್ಲಾವಾರು ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉತ್ತರ ಕನ್ನಡ, ಉಡುಪಿ, ದಾವಣಗೆರೆ, ತುಮಕೂರು, ಬಳ್ಳಾರಿ, ಹಾಸನ, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ 10ರ ಒಳಗಿನ ಸ್ಥಾನವನ್ನು ಪಡೆದುಕೊಂಡರೆ ದ.ಕ. ಜಿಲ್ಲೆ 17ನೇ ಸ್ಥಾನವನ್ನು ಪಡೆದುಕೊಂಡಿದೆ.

Advertisement

ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಮತ್ತು ವಿಲೇವಾರಿಯಾಗದ ಅರ್ಜಿಗಳ ಮಾಹಿತಿ ಪಡೆದು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಎಲ್ಲ ಅರ್ಜಿಗಳು ಸಕಾಲದ ಮೂಲಕ ಸಲ್ಲಿಕೆಯಾಗುವಂತೆ ಎಚ್ಚರ ವಹಿಸಲಾಗುತ್ತಿದೆ.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ

ವೇಗ ಪಡೆದ ಕಡತ ವಿಲೇವಾರಿ
“ಸಕಾಲ’ದಲ್ಲಿ ಸಮಯಕ್ಕೆ ಸರಿಯಾಗಿ ಅರ್ಜಿ ವಿಲೇವಾರಿ ಮಾಡದ ಅಧಿಕಾರಿಯ ವೇತನವನ್ನು ದಿನಕ್ಕೆ 20 ರೂ.ಗಳಂತೆ ಕಡಿತಗೊಳಿಸುವ ಮತ್ತು ನೋಟಿಸ್‌ ನೀಡುವ ಪ್ರಕ್ರಿಯೆ ಜಿಲ್ಲಾಡಳಿತದ ವತಿಯಿಂದ ವೇಗ ಪಡೆದುಕೊಂಡಿದೆ. ನಿಗದಿತ ಸಮಯದೊಳಗೆ ಅರ್ಜಿ ವಿಲೇವಾರಿ ಮಾಡುವ ಸಿಬಂದಿಗೆ ಪ್ರಶಂಸಾ ಪತ್ರ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next