Advertisement

LEO ಸಿನಿಮಾ ನೋಡಿ ದೊಡ್ಡ‌ ಸುಳಿವು ಬಿಟ್ಟುಕೊಟ್ಟ ಉದಯನಿಧಿ ಸ್ಟಾಲಿನ್

10:50 AM Oct 18, 2023 | Team Udayavani |

ಚೆನ್ನೈ: ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾ ಗುರುವಾರ(ಅ.19 ರಂದು) ರಿಲೀಸ್‌ ಆಗಲಿದೆ. ಈಗಾಗಲೇ ಫ್ಯಾನ್ಸ್‌ ಗಳು ಅಡ್ವಾನ್ಸ್‌ ಟಿಕೆಟ್‌ ಬುಕ್‌ ಮಾಡಿದ್ದು, ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಕಾಯುತ್ತಿದ್ದಾರೆ.

Advertisement

ಹಾಡು, ಟ್ರೇಲರ್‌ ನಿಂದ ಗಮನ ಸೆಳೆದಿರುವ ಲೋಕೇಶ್‌ ಕನಕರಾಜ್‌ – ದಳಪತಿ ʼಲಿಯೋʼ ದೊಡ್ಡಮಟ್ಟದಲ್ಲಿ ಹಿಟ್ ಆಗುವ ನಿರೀಕ್ಷೆಯಿದೆ. ಈ ನಡುವೆ ಕಾಲಿವುಡ್‌ ನಟ ಉದಯನಿಧಿ ಸ್ಟಾಲಿನ್‌ ಅವರು ʼಲಿಯೋʼ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದು, ಸಿನಿಮಾದ ಬಗ್ಗೆ‌ ಸುಳಿವುವೊಂದನ್ನು ಕೊಟ್ಟಿದ್ದಾರೆ.

ಲೋಕೇಶ್‌ ಕನಕರಾಜ್‌ ಅವರ ಈ ಹಿಂದಿನ ಸಿನಿಮಾಗಳಾಗೆ ʼಲಿಯೋʼ ಸಿನಿಮಾ ಕೂಡ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಸಂಬಂಧಿಸಿದೆ. ಈ ಸಿನಿಮಾದಲ್ಲೂ ಒಂದು ವಿಶೇಷ ಪಾತ್ರದ ಕನೆಕ್ಷನ್‌ ಇರಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕ ಲೋಕೇಶ್ ಎಲ್ಲೂ ಕೂಡ ಸೀಕ್ರೆಟ್‌ ಬಿಟ್ಟು ಕೊಟ್ಟಿಲ್ಲ.

ಇದೀಗ ನಟ ಉದಯನಿಧಿ ಸ್ಟಾಲಿನ್‌ ಅವರು ʼಲಿಯೋʼ ಸಿನಿಮಾವನ್ನು ನೋಡಿ‌, ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಬಗ್ಗೆ ಒಂದು ಸುಳಿವು ನೀಡಿದ್ದಾರೆ.

“ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾ ಚೆನ್ನಾಗಿದೆ. ಲೋಕೇಶ್ ಅವರ ನಿರ್ದೇಶನ ಹಾಗೂ ಅನಿರುದ್ಧ್‌ ಅವರ ಮ್ಯೂಸಿಕ್ ಅದ್ಭುತವಾಗಿದೆ. ಎಲ್‌ ಯುಸಿ ಶುಭವಾಗಲಿ” ಎಂದು ಬರೆದುಕೊಂಡಿದ್ದಾರೆ.

Advertisement

ಸ್ಟಾಲಿನ್‌ ಅವರ ವಿಮರ್ಶೆಯಲ್ಲಿ‌ ಎಲ್ಲರ ಗಮನ ಸೆಳೆದಿರುವುದು ಕೊನೆಯದಾಗಿ ಅವರು ಬರೆದಿರುವ ʼಎಲ್‌ ಯುಸಿʼ(ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ಬಗ್ಗೆ. ʼಲಿಯೋʼ ಸಿನಿಮಾ ವಿಕ್ರಮ್‌ ಹಾಗೂ ಕೈತಿ ಸಿನಿಮಾದ ಕಥೆಗೆ ಕನೆಕ್ಟ್‌ ಆಗಿರಬಹುದೆಂದು ಪ್ರೇಕ್ಷಕರು ಸ್ಟಾಲಿನ್‌ ಟ್ವೀಟ್‌ ನೋಡಿ ಊಹಿಸಿದ್ದಾರೆ.

ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಸ್ಯಾಂಡಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next