Advertisement

35 ವರ್ಷಗಳ ಬಳಿಕ ಯುಡಿಎಫ್‌ಗೆ ಮಣೆ

11:14 PM May 24, 2019 | sudhir |

ಕಾಸರಗೋಡು: ಸಿಪಿಎಂ ನೇತೃತ್ವದ ಎಡರಂಗದ ಭದ್ರಕೋಟೆಯಾಗಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 35 ವರ್ಷಗಳ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಗೆಲುವು ದಾಖಲಿಸಿದೆ. ಈ ಗೆಲುವನ್ನು ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಮೂಲಕ ಸಾಧಿಸಿದೆ.

Advertisement

ಕಾಸರಗೋಡು ಲೋಕಸಭೆ ಕೇÒತ್ರದಲ್ಲಿ 1957ರಿಂದ 2014ರ ವರೆಗೆ ನಡೆದಿದ್ದ ಚುನಾವಣೆಗಳಲ್ಲಿ ಒಟ್ಟು 15 ಮಂದಿ ಗೆದ್ದು ಸಂಸದರಾಗಿದ್ದಾರೆ.

1957ರಲ್ಲಿ ಸಿ.ಪಿ.ಐ.ಯ ಎ.ಕೆ. ಗೋಪಾಲನ್‌ ಅವರು 5154 ಬಹುಮತಗಳೊಂದಿಗೆ ಗೆದ್ದಿದ್ದರು. 1962ರಲ್ಲಿ ಅವರು ಮತ್ತೆ ಸಿ.ಪಿ.ಐ.ಯಿಂದ ಸ್ಪ ರ್ಧಿಸಿದ್ದು, 83,363 ಬಹುಮತಗಳೊಂದಿಗೆ ವಿಜಯಿ ಯಾಗಿದ್ದರು.

1967ರಲ್ಲಿ ಮಗದೊಮ್ಮೆ ಸಿ.ಪಿ.ಎಂ.ನ ಅಭ್ಯರ್ಥಿಯಾಗಿ ಸ್ಪರ್ಧಿಸಿ 1,18,510 ಬಹುಮತಗಳೊಂದಿಗೆ ವಿಜೇತರಾಗಿದ್ದರು.

1971ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಡನ್ನಪಳ್ಳಿ ರಾಮಚಂದ್ರನ್‌ 5,042 ಬಹುಮತಗಳೊಂದಿಗೆ ಗೆದ್ದಿದ್ದರು. 1980ರಲ್ಲಿ ಸಿ.ಪಿ.ಎಂ.ನ ಎಂ. ರಾಮಣ್ಣ ರೈ 73,587 ಬಹುಮತಗಳಿಂದ ವಿಜಯಿಯಾಗಿದ್ದರು. 1984ರಲ್ಲಿ ಕಾಂಗ್ರೆಸ್‌ನ ಐ.ರಾಮ ರೈ ಅವರು 11,369 ಬಹುಮತಗಳಿಗೆ ವಿಜೇತರಾಗಿದ್ದರು.

Advertisement

1989ರಲ್ಲಿ ಸಿ.ಪಿ.ಎಂ.ನಿಂದ ಎಂ.ರಾಮಣ್ಣ ರೈ ಅವರು 1,546 ಬಹುಮತಗಳಿಂದ ಗೆಲುವು ಕಂಡಿದ್ದರು. 1991ರಲ್ಲಿ ಮತ್ತೆ ಅವರು 9,423 ಬಹುಮತಗಳಿಗೆ ವಿಜೇತರಾಗಿದ್ದರು. 1996ರಲ್ಲಿ ಸಿ.ಪಿ.ಎಂ.ನ ಟಿ.ಗೋವಿಂದನ್‌ 74,730 ಬಹುಮತಗಳಿಂದ ಗೆದ್ದಿದ್ದರು. 1998ರಲ್ಲಿ ಅವರು ಮತ್ತೆ ಸ್ಪ ರ್ಧಿಸಿದ್ದು 48,240 ಬಹುಮತ ಪಡೆದು ವಿಜಯಿಯಾಗಿದ್ದರು. 1999ರಲ್ಲಿ ಮಗದೊಮ್ಮೆ ಸ್ಪರ್ಧೆಗಿಳಿದು 31,578 ಬಹುಮತಗಳಿಂದ ವಿಜೇತರಾಗಿದ್ದರು.

2004ರಲ್ಲಿ ಸಿ.ಪಿ.ಎಂ.ನ ಅಭ್ಯರ್ಥಿಯಾಗಿ ಪಿ. ಕರುಣಾಕರನ್‌ ಸ್ಪ ರ್ಧಿಸಿ 1,08,256 ಬಹುಮತಗಳಿಂದ ಗೆದ್ದಿದ್ದರು. 2009ರಲ್ಲಿ ಅವರು ಮತ್ತೆ ಸ್ಪರ್ಧೆಗಿಳಿದು 64,427 ಬಹುಮತಗಳಿಸಿ ಗೆಲವು ಸಾ ಧಿಸಿದ್ದರು. 201ರಲ್ಲಿ ಅವರು ಮಗದೊಮ್ಮೆ ಸ್ಪರ್ಧೆಗೆ ಧುಮುಕಿ 6,921 ಬಹುಮತಗಳೊಂದಿಗೆ ವಿಜೇತರಾಗಿದ್ದರು.

ಈ ನಿಟ್ಟಿನಲ್ಲಿ ಅತ್ಯಧಿಕ ಕಾಲಾವಧಿಗೆ ಸಂಸದರಾಗಿದ್ದ ಹೆಗ್ಗಳಿಕೆ ಸಿ.ಪಿ.ಎಂ.ನ ಅಭ್ಯರ್ಥಿ ಪಿ. ಕರುಣಾಕರನ್‌ ಅವರಿಗೆ ಸಲ್ಲುತ್ತದೆ. ಅವರು ಸತತ ಮೂರು ಬಾರಿ ಗೆದ್ದು ಸಂಸದರಾಗಿದ್ದರು. ಒಟ್ಟು 15 ವರ್ಷ ಅವರು ಸಂಸದರ ಪದವಿಯಲ್ಲಿದ್ದರು.

ಅತಿ ಕಡಿಮೆ ಅವಧಿಗೆ ಸಂಸದರಾಗಿದ್ದವರು ಕಾಂಗ್ರೆಸ್‌ನ ಐ. ರಾಮ ರೈ ಅವರು. ಒಂದೇ ಬಾರಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು 5 ವರ್ಷ ಸಂಸದರಾಗಿದ್ದರು.

ಇದೇ ವೇಳೆ ಎ.ಕೆ. ಗೋಪಾಲನ್‌ ಮತ್ತು ಎಂ. ರಾಮಣ್ಣ ರೈ ಅವರೂ, ಟಿ. ಗೋವಿಂದನ್‌ ಅವರೂ ಮೂರು ಬಾರಿ ಗೆದ್ದು ಸಂಸದರಾಗಿದ್ದವರು. ಎ.ಕೆ. ಗೋಪಾಲನ್‌ ಅವರು 14 ವರ್ಷ, ಎಂ.ರಾಮಣ್ಣ ರೈ ಅವರು 11 ವರ್ಷ ಮತ್ತು ಟಿ. ಗೋವಿಂದನ್‌ ಅವರು 8 ವರ್ಷ ಕ್ಷೇತ್ರವನ್ನು ಪ್ರತಿನಿ ಧಿಸಿದ್ದರು. ಉಳಿದಂತೆ 2 ಬಾರಿ ಗೆದ್ದ ಕಡನ್ನಪಳ್ಳಿ ರಾಮಚಂದ್ರನ್‌ 9 ವರ್ಷ ಕ್ಷೇತ್ರದ ಪ್ರತಿನಿಧಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next