Advertisement
ಸಹ್ಯಾದ್ರಿ ಅತಿಥಿಗೃಹದಲ್ಲಿ ಕ್ರೆಡಾಯಿ -ನರೆಡ್ಕೊ ಸಂಘಟನೆಯೊಂದಿಗೆ ಸಭೆ ಆಯೋಜಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಾತನಾಡಿ, ರಾಜ್ಯದ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕರ ಸಮಸ್ಯೆಗಳನ್ನು ಪರಿಹರಿಸಲು ತ್ವರಿತ ಪ್ರತಿಕ್ರಿಯೆ ವಿಂಡೋವನ್ನು ಸ್ಥಾಪಿಸಲಾಗುವುದು ಮತ್ತು ಅದರ ಅಡಿಯಲ್ಲಿ ಸ್ಟೀರಿಂಗ್ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದರು.
Related Articles
Advertisement
ಈ ವೇಳೆ ನಗರ ಅಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಮಾತನಾಡಿ, ಈ ವಸತಿ ಕ್ಷೇತ್ರದ ಸ್ಥಿತಿಯನ್ನು ಸುಧಾರಿಸಲು ಸರಕಾರ ಪ್ರಯತ್ನಿಸುತ್ತಿದೆ. ಹಾಗೆಯೇ ಅಭಿವರ್ಧಕರ ಬೇಡಿಕೆಗಳ ಬಗ್ಗೆ ಸರಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಿದೆ. ಆದ್ದರಿಂದ ಅಭಿವರ್ಧಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಸರಕಾರ ಅದಕ್ಕೆ ಅಧಿಕ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.
ಈ ವೇಳೆ ವಸತಿ ಸಚಿವ ಜಿತೇಂದ್ರ ಅವಾಡ್ ಮಾತನಾಡಿ, ವಸತಿ ವಲಯದಲ್ಲಿ ಕೊಳೆಗೇರಿಗಳನ್ನು ತೆಗೆದುಹಾಕಲು ಕಳೆದ ತಿಂಗಳು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಹಾಗೆಯೇ ಕೊಳೆಗೇರಿ ಪುನರ್ವಸತಿಗಾಗಿ ಹಲವಾರು ಯೋಜನೆಗಳು ಈಗ ನಡೆಯುತ್ತಿವೆ.
ಬಡವರಿಗೆ ಕೈಗೆಟುಕುವ ವಸತಿ ಒದಗಿಸಲು ಸರಕಾರ ಬದ್ಧವಾಗಿದೆ. ನಾಲ್ಕನೇ ಶ್ರೇಣಿಯ ಸರಕಾರಿ ನೌಕರರಿಗೆ ಮತ್ತು ಪೊಲೀಸರಿಗೆ ಶೇ.10 ರಷ್ಟು ಮನೆಗಳನ್ನು ಕಾಯ್ದಿರಿಸಲು ಸರಕಾರ ನಿರ್ಧರಿಸಿದೆ. ವಸತಿ ಕ್ಷೇತ್ರದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಬ್ಯಾಂಕ್‌ಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಗಿದೆ ಎಂದರು.