Advertisement

ಮತ್ತೆ ಉದ್ಧವ್‌ ಉದ್ಧಟತನ

11:59 PM Jan 27, 2021 | Team Udayavani |

ಮುಂಬಯಿ/ಬೆಂಗಳೂರು: ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತೆ ನಾಲಿಗೆ ಸಡಿಲಿಸಿದ್ದಾರೆ. ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಪ್ರದೇಶಗಳು ನಮ್ಮವು ಎಂದಿರುವ ಠಾಕ್ರೆ, ಸುಪ್ರೀಂ ಕೋರ್ಟ್‌ನಲ್ಲಿನ ಕೇಸ್‌ ಇತ್ಯರ್ಥವಾಗುವ ವರೆಗೆ ಬೆಳಗಾವಿ ಸೇರಿದಂತೆ ಮರಾಠಿ ಭಾಷಿಕರು ಹೆಚ್ಚಾಗಿರುವ ಪ್ರದೇಶಗಳನ್ನು ಸೇರಿಸಿ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಉದ್ಧವ್‌ ಠಾಕ್ರೆ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಜಕಾರಣಿಗಳು, ಕನ್ನಡ ಹೋರಾಟಗಾರರು ಠಾಕ್ರೆ ವಿರುದ್ಧ ತಿರುಗಿಬಿದ್ದಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿದ್ದು, ಉದ್ಧವ್‌ ಇತಿಹಾಸ ಓದಿದ್ದರೆ ಚೆನ್ನಾಗಿತ್ತು, ಇಡೀ ಮಹಾರಾಷ್ಟ್ರವನ್ನು ಕನ್ನಡದ ಅರಸರೇ ಆಳಿದ್ದರು ಎಂದು ಹೇಳಿದ್ದಾರೆ. ಡಿಸಿಎಂ ಅಶ್ವತ್ಥನಾರಾಯಣ ಅವರು, ಕರ್ನಾಟಕದಲ್ಲಿರುವ ಪ್ರತಿಯೊಬ್ಬನೂ ಕನ್ನಡಿಗನೇ. ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮಂಡಳಿ ರೂಪಿಸಿದ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ. ಅನಾವಶ್ಯಕವಾಗಿ ಬೆಳಗಾವಿ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದಿದ್ದಾರೆ.

ಕನ್ನಡ ಹೋರಾಟಗಾರರ ಕಿಡಿ :

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಒಂದಿಂಚೂ ಜಾಗವನ್ನೂ ಕಬಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ತಿಳಿಸಿದ್ದಾರೆ.

Advertisement

ಬೆಳಗಾವಿ ಹೆಸರು ಬದಲಿಸಿದ್ದೇ ತಪ್ಪು

ಉದ್ಧವ್‌ ಉದ್ಧಟತನ ಅಲ್ಲಿಗೇ ನಿಲ್ಲುವುದಿಲ್ಲ. ಕರ್ನಾಟಕ ಸರಕಾರವು ಬೆಳಗಾಂ ಎಂಬ ಹೆಸರನ್ನು ಬೆಳಗಾವಿ ಎಂದು ಮರು ನಾಮಕರಣ ಮಾಡಿದ್ದೇ ತಪ್ಪು ಎಂದಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿದ್ದು ಸರಿಯಲ್ಲ ಎಂದಿರುವ ಅವರು, ಇದೊಂದು ನ್ಯಾಯಾಂಗ ನಿಂದನೆ ಎಂದೂ ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನಾವೇ ಗೆಲ್ಲುತ್ತೇವೆ ಎಂದೂ ಹೇಳಿದ್ದಾರೆ.

ರಾಜಕೀಯ ಉದ್ದೇಶಕ್ಕಾಗಿ  ನೀಡುವ ಈ ರೀತಿಯ ಹೇಳಿಕೆ ಗಳನ್ನು ಸಾಧ್ಯವಾದಷ್ಟು ನಿರ್ಲಕ್ಷಿಸಿ, ಅದರಿಂದ ಆಚೆಗೆ ಬರುವುದು ಉತ್ತಮ. ಅಷ್ಟಕ್ಕೂ ಹಾಗೆ ಮಾಡಲು ಸಾಧ್ಯವೂ ಇಲ್ಲ; ಸುಲಭವೂ ಇಲ್ಲ. ಪ್ರತಿಷ್ಠೆಗೆ ನೀಡುವ ಹೇಳಿಕೆಗಳಿಗೆ ಮಹತ್ವ ಕೊಡು ವುದು ಬೇಡ. -ಟಿ.ಎಸ್‌. ನಾಗಾಭರಣ,  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಬಿಟ್ಟುಕೊಡಬೇಕಾದವರು ನಾವಲ್ಲ; ಮಹಾರಾಷ್ಟ್ರ ದವರು ಸೊಲ್ಲಾಪುರವನ್ನು ನಮಗೆನೀಡಬೇಕು. ಇದನ್ನು ಅವರ ಒತ್ತಾಯದ ಮೇರೆಗೆ ರಚನೆಯಾದ ಮಹಾಜನ್‌ ವರದಿಯೇ ಹೇಳುತ್ತದೆ. ಉದ್ದೇಶಪೂರ್ವಕ ಜಗಳಕ್ಕೆ ಕರೆಯುತ್ತಿದ್ದಾರೆ.– ವಾಟಾಳ್‌ ನಾಗರಾಜ್‌, ಕನ್ನಡ ಚಳವಳಿ ವಾಟಾಳ್‌ ಪಕ್ಷ

Advertisement

Udayavani is now on Telegram. Click here to join our channel and stay updated with the latest news.

Next