ನಾವು ಮಹಾಭಾರತ ಕಥೆಯನ್ನು ಕೇಳಿರುತ್ತೇವೆ, ಓದಿರುತ್ತೇವೆ. ಅದರಲ್ಲಿ ಪಾಂಡವರೂ ಮತ್ತು ಕೌರವರು ಪಗಡೆ ಆಟವಂತೂ ಒಮ್ಮೆ ಮೈ ಜುಮ್ಮ್ ಎನ್ನುವಂತಿದೆ. ಹೇಗೆ ಶಕುನಿಯು ಮೋಸದ ಪಗಡೆ ಆಡಿ ಪಾಂಡವರನ್ನು ಸೋಲಿಸಿ ವನವಾಸಕ್ಕೆ ಕಳುಹಿಸಿದನು ಎಂದು. ಪಾಂಡವರು ವನವಾಸಕ್ಕೆ ಹೋಗುತ್ತಾರೆ. ಅವರು ಇಡೀ ಭಾರತ ದೇಶವನ್ನು ಸುತ್ತಿ ಬರುತ್ತಾರೆ ಎಂದು ಹೇಳುವುದು ಇದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮಕ್ಕೆ ಬಂದಿರುತ್ತಾರೆ ಎಂಬ ನಂಬಿಕೆ ಇದೆ. ಇದಕ್ಕೆ ಪ್ರತೀತಿ, ಕಥೆ, ಗ್ರಾಮದ ಹೆಸರು ಸಾಕ್ಷಿ ವಿನಃ ಯಾವುದೇ ಲಿಖಿತ ದಾಖಲೆಗಳು ಇಲ್ಲ.
ನಾನು ಮೊದಲೇ ಹೇಳಿದಂತೆ ಉಜಿರೆ ಗ್ರಾಮದಿಂದ 3 ಕಿ.ಮೀ ಹೋದಾಗ ಕಿರಿಯಾಡಿ ಎಂಬ ರಸ್ತೆಯಲ್ಲಿ ಒಂದು ಶಿವ ದೇವಾಲಯವಿದೆ. ಅಲ್ಲಿಂದ ಸ್ವಲ್ಪ ದೂರ ಹೋದರೆ ಸಿಗುವುದೇ ಭೀಮ ಗುಡ್ಡೆ.ಪ್ರತೀತಿಗಳ ಪ್ರಕಾರ ಹಿಂದೆ ಪಾಂಡವರು ವನವಾಸಕ್ಕೆ ಬಂದು ಇದೇ ಭೀಮ ಗುಡ್ಡೆಯಲ್ಲಿ ವಾಸಿಸುತ್ತಿದ್ದರು. ಆಗ ಜನವಸತಿ ಕಡಿಮೆ ಇತ್ತೋ ಏನೋ ತಿಳಿಯದು.ಅಲ್ಲಿನ ಜನ ಆ ಸ್ಥಳಕ್ಕೆ ಹೆಸರಿಟ್ಟಿದ್ದರೋ ತಿಳಿಯದು. ಆದರೆ ಭೀಮನ ಬಳಗ ಬಂದು ಅಲ್ಲಿ ನೆಲೆಸಿದ ಕಾರಣ ಅವನ ಹೆಸರು ನಾಮಕರಣ ಮಾಡಿದ್ದರು, ಎಂದು ಜನ ಹೇಳುತ್ತಾರೆ.
ಅಲ್ಲಿನ ಕಥೆಯಂತೆ ಭೀಮನ ಸಂಗಡಿಗರು ಒಂದು ದಿನ ಅಲ್ಲಿಯ ತಂಗಿದ್ದರು ಹಾಗೂ ಅಲ್ಲಿಯೇ ತಮ್ಮ ಆಹಾರ ತಯಾರಿಸಿಕೊಂಡಿದ್ದರು ಎಂಬ ನಂಬಿಕೆಯು ಇದೆ. ಆ ಸಮಯದಲ್ಲಿ ನೀರಿನ ಮೂಲಗಳಾದ ಕೆರೆ, ಬಾವಿಗಳು ಇರಲ್ಲಿಲ. ಹುಡುಕಾಡುತ್ತ ಬಂದ ಭೀಮ ಕಿರಿಯಾಡಿ ಎಂಬಲ್ಲಿ ತನ್ನ ಒಂದು ಕೈಯಿಂದ ಮಣ್ಣನ್ನು ಒಂದೇ ಬಾರಿ ಅಗೆದಾಗ ಅಲ್ಲಿ ನೀರು ಸಿಕ್ಕಿತ್ತು. ಅದನ್ನು ಹೀಗ “ಸರಸ್ವತಿ ಕೆರೆ” ಎಂದು ಕರೆಯುತ್ತಾರೆ. ಅವರು ನಿಮಿ೯ಸಿದ ಆ ಕೆರೆ ಕೈಯಲ್ಲಿ ಗುದ್ದಿದಂತೆ ಕಾಣುತ್ತದೆ. ವಷ೯ಪೂತಿ೯ ನೀರು ತುಂಬಿರುತ್ತದೆ. ಕಾಲಕ್ರಮೇಣ ಅದೇ ಕೆರೆಯಲ್ಲಿ ಸರಸ್ವತಿ ದೇವಿ ಸ್ನಾನಕ್ಕೆ ಬರುತ್ತಾರೆ ಎಂಬ ನಂಬಿಕೆ ಹುಟ್ಟಿಕೊಂಡಿತ್ತು.
ಶಿವಲಿಂಗ ಉದ್ಭವಾಯಿತು ಎಂಬ ನಂಬಿಕೆ ಇದೆ. ಅದೇ ಶಿವಲಿಂಗಕ್ಕೆ ಗುಡಿ ಕಟ್ಟಿ ಪೂಜಿಸಲಾಗುತ್ತಿತ್ತು. ಶಿವಲಿಂಗಕ್ಕೆ ಪ್ರತಿದಿನ ಸರಸ್ವತಿ ಕೆರೆಯಿಂದ ನೀರು ತಂದು ಅಭಿಷೇಕ ಮಾಡುತ್ತಾರೆ. ವಿಶೇಷ ದಿನಗಳಾದ ಆಟಿ ಅಮಾವಾಸ್ಯೆ, ಶಿವರಾತ್ರಿ, ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿ ಶಿವ, ಗಣೇಶ, ಅನ್ನಪೂರ್ಣೆ ಮುಂತಾದ ದೇವರ ಗುಡಿಗಳಿವೆ. ಪ್ರತಿದಿನ ದೇವರಿಗೆ ಪೂಜೆ ನಡೆಯುತ್ತದೆ. ಕಾಲಕ್ರಮೇಣ ಜನರ ಕೈಯಲ್ಲಿ ದೇವರ ಕೆಲಸವಾಗುವಂತೆ ಜೀರ್ಣೋದ್ಧಾರ ಕ್ರಿಯೆಯೂ ನಡೆಯಿತು.
ಪ್ರತಿವರ್ಷವು ರಥೋತ್ಸವ ಮಾಡಿ ಸಂಭ್ರಮ ಪಡುತ್ತಾರೆ. ಪ್ರಕೃತಿ ಸೌಂದರ್ಯ ಹೇಳುವುದೇ ಬೇಡ ಗಿಡಮರಗಳ ನಡುವೆ ದೇವಾಲಯ. ದೇವಾಲಯದ ಎದುರು ಗದ್ದೆಗಳು, ಆಹಾರಕ್ಕಾಗಿ ಬಂದ ಚಿಲಿಪಿಲಿ ಹಕ್ಕಿಗಳು,ಮೇವಿಗಾಗಿ ಬಂದ ದನ ಕರುಗಳು, ಹಸಿ ಹಸಿರಾಗಿಬಿಟ್ಟ ಚಿಗುರುಗಳು, ಪರಿಮಳ ಸುರಿಸೊ ಹೂವುಗಳು, ಇವುಗಳನ್ನು ನೋಡುವಾಗ ಹಿಂದೆ ನಮ್ಮ ಮುತ್ತಜ್ಜಿ ಮುತ್ತಜ್ಜನ ಕಾಲದ ಪ್ರಕೃತಿ ನೋಡುವಂತೆ ಕಾಣುತ್ತದೆ. ಭಕ್ತರು ದೇವಾಲಯದ ಸುತ್ತಮುತ್ತ ಹಾಗೆ ತಮ್ಮ ಪರಿಸರ ಕಾಪಾಡಿ ಮನಸ್ಸಿಗೆ ದೇಹಕ್ಕೆ ಸಂತೋಷ ಕೊಡುವ ಸ್ಥಳವಾಗಿ ಕಂಡು ಬರುವುದೇ ಈ ಕಿರಿಯಾಡಿ ದೇವಾಲಯ.
– ಕಾವ್ಯ, ಉಜಿರೆ