Advertisement

ಇದು ಸರ್ಜಿಕಲ್‌ ದಾಳಿ: ಉದ್ಧವ್‌

09:52 AM Nov 25, 2019 | Team Udayavani |

ಬಿಜೆಪಿ ನಡೆಸಿರುವುದು ಮಹಾರಾಷ್ಟ್ರದ ಮೇಲೆ ನಡೆಸಿದ ರಾಜಕೀಯ ಸರ್ಜಿಕಲ್‌ ದಾಳಿ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ದೂರಿದ್ದಾರೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ಜತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ತಂತ್ರ ರೂಪಿಸಲಾಗುತ್ತಿತ್ತು. ಇದೊಂದು ಹೊಸ ತಂತ್ರವಾಗಿದೆ. ಹೀಗಾದಲ್ಲಿ ಚುನಾವಣೆ ನಡೆಸುವ ಅಗತ್ಯವೇ ಬರುವುದಿಲ್ಲ ಎಂದರು. ಬಿಜೆಪಿಯವರು ಶಿವಸೇನೆ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದರೆ ಸುಮ್ಮನಿರುವುದಿಲ್ಲ ಎಂದರು.

Advertisement

ಸಾಮ್ನಾದಲ್ಲಿ: ಬಿಜೆಪಿ ನಾಯಕರು ಅಜಿತ್‌ ಪವಾರ್‌ ಅವರನ್ನು ಬ್ಲಾಕ್‌ಮೇಲ್‌ ಮಾಡಿ, ಬುಟ್ಟಿಗೆ ಹಾಕಿಕೊಂಡಿದ್ದಾರೆ ಶಿವಸೇನೆಯ ನಾಯಕ ಸಂಜಯ್‌ ರಾವತ್‌ ಆರೋಪಿಸಿದ್ದಾರೆ. ಬಿಜೆಪಿಯ ಯಾವ್ಯಾವ ನಾಯಕರು ಇಂಥ ಕೆಲಸ ಮಾಡಿದ್ದಾರೋ ಅವರೆಲ್ಲರ ಹೆಸರನ್ನು ಹಾಗೂ ಅವರ ಮಾಡಿರುವ ಕೆಲಸವನ್ನು ಶಿವಸೇನೆಯ ಮುಖವಾಣಿಯಾದ ಸಾಮ್ನಾದಲ್ಲಿ ಎಳೆಎಳೆಯಾಗಿ ಬಿಡಿಸಿಡುವುದಾಗಿ ತಿಳಿಸಿದ್ದಾರೆ.

‘ಇಡೀ ಬೆಳವಣಿಗೆಯ ಹಿಂದೆ ಶರದ್‌ ಪವಾರ್‌ರವರ ಪಾತ್ರವೇನೂ ಇಲ್ಲ. ಆದರೆ, ನೂತನ ಸರಕಾರ ರಚನೆಯ ಬಗ್ಗೆ ನಡೆಸಲಾದ ಮಾತುಕತೆಯ ಎಲ್ಲ ಹಂತದಲ್ಲೂ ಅಜಿತ್‌ ನಮ್ಮ ಜತೆಗೆ ಇದ್ದವರು. ಸೋಮವಾರ ರಾತ್ರಿಯೂ ಸರಕಾರ ರಚನೆಯ ಮಾತುಕತೆ ಫೈನಲ್‌ ಆದ ವೇಳೆ ನಮ್ಮೆಲ್ಲರ ಜತೆಗೆ ಕುಳಿತಿದ್ದರು. ಆದರೆ, ಇದ್ದಕ್ಕಿದ್ದಂತೆ ಮಾಯವಾದ ಅವರು, ಬಿಜೆಪಿ ಜತೆಗೆ ಕೈ ಜೋಡಿಸಿ ಸರಕಾರ ರಚಿಸುವ ಮೂಲಕ ಅವರು ಹಾಗೂ ಅವರ ಜತೆಗೆ ಹೋಗಿರುವ ಎನ್‌ಸಿಪಿ ಶಾಸಕರು, ಶಿವಾಜಿ ಮಹಾರಾಜ್‌ ಹಾಗೂ ಮಹಾರಾಷ್ಟ್ರದ ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ” ಎಂದು ಅವರು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next