Advertisement

ಯಶೋದಾ ಕೃಷ್ಣ ಸ್ಪರ್ಧೆ: ಸಾಂಸ್ಕೃತಿಕ ಬೇರು ಗಟ್ಟಿಯಾಗಲು ಸಹಕಾರಿ: ಎಡಿಸಿ ವೀಣಾ

12:08 AM Sep 21, 2022 | Team Udayavani |

ಉಡುಪಿ: “ಉದಯವಾಣಿ’ ಮತ್ತು ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಸಹಯೋಗದಲ್ಲಿ ನಡೆದ “ಮನೆಮನೆಯಲ್ಲಿ ಯಶೋದಾ – ಕೃಷ್ಣ ಫೋಟೋ ಸ್ಪರ್ಧೆ-2022’ರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ಮಂಗಳವಾರ ಹೊಟೇಲ್‌ ವುಡ್‌ಲ್ಯಾಂಡ್ಸ್‌ ಸಭಾಂಗಣದಲ್ಲಿ ಜರಗಿತು.

Advertisement

ಸಂವಿಧಾನದ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುವ ಪತ್ರಿಕಾರಂಗ ಸಾಂಸ್ಕೃತಿಕವಾಗಿಯೂ ಕೆಲಸ ಮಾಡುತ್ತಿದೆ. ಕೃಷ್ಣ ನಗರಿಯಲ್ಲಿ “ಉದಯವಾಣಿ’ಯು ಅದರದ್ದೇ ಆದ ಪರಿಕಲ್ಪನೆಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿರುವುದು ಸ್ತುತ್ಯರ್ಹ. ಭವಿಷ್ಯದ ಪೀಳಿಗೆಯನ್ನು ರೂಪಿಸಲು ಇದು ಸಹಕಾರಿ ಎಂದು ಮುಖ್ಯ ಅತಿಥಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ಹೇಳಿದರು.

ಕೃಷ್ಣ ಮತ್ತು ಯಶೋದೆಯರ ಸಾಂಸ್ಕೃತಿಕ ಸಂದೇಶಗಳನ್ನು ಮನೆಮನೆಗಳಲ್ಲಿ ಮೂಡುವಂತೆ ಮಾಡಿದ್ದಾರೆ. ಈ ಮೂಲಕ ಕೃಷ್ಣನ ಗೀತೆಯ ಸಾರ, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿದ ಒಳ್ಳೆಯ ಗುಣಗಳು ಮಕ್ಕಳಲ್ಲಿ ಬೆಳೆಯಲು ಸಹಕಾರಿಯಾಗಲಿದೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಸುವ್ಯವಸ್ಥಿತ ಪ್ರಯತ್ನವಿದು. ಮನೆಯೇ ಮೊದಲ ಪಾಠಶಾಲೆ, ಅಮ್ಮನೇ ಮೊದಲ ಗುರು ಪರಿಕಲ್ಪನೆ ಇಲ್ಲಿ ಸಾಕಾರಗೊಂಡಿದೆ ಎಂದು ವೀಣಾ ಅವರು ಮೆಚ್ಚುಗೆ ಸೂಚಿಸಿದರು.

ಮುಂದಿನ ಪೀಳಿಗೆಯನ್ನು ಚಿಕ್ಕ ಪ್ರಾಯದಲ್ಲಿಯೇ ನಿಯಂತ್ರಿಸಬೇಕಾಗಿದೆ. ಕಂಪ್ಯೂಟರ್‌, ಟಿವಿ, ಮೊಬೈಲ್‌ಗಳ ಬಳಕೆ ಕುರಿತು ಮಕ್ಕಳ ನಿಗಾ ವಹಿಸದಿದ್ದರೆ ಮುಂದೆ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.

ಧೈರ್ಯ-ಸ್ಥೈರ್ಯ-ಪ್ರೀತಿ:

Advertisement

ಮುದ್ದುಕೃಷ್ಣರನ್ನು ಸಿದ್ಧಪಡಿಸುವುದರಲ್ಲಿ ಯಶೋದೆಯರ ಪಾತ್ರ ಮಹತ್ವದ್ದಾಗಿದೆ. ಕಾಳಿಯ ಮರ್ದನ ಕೃಷ್ಣನಂತೆ ಕೃಷ್ಣನಲ್ಲಿ ಧೈರ್ಯ, ಸ್ಥೈರ್ಯವೂ ಇದೆ, ಕೃಷ್ಣನಲ್ಲಿ ಪ್ರೀತಿಯ ಸಂಕೇತವೂ ಇದೆ. ಆತನ ಜೀವನೋತ್ಸಾಹ ಎಂದೆಂದಿಗೂ ಇರಲು ಯಶೋದೆಯರ ಶ್ರಮ ಹಿರಿದಾದುದು ಎಂದು ಇನ್ನೋರ್ವ ಮುಖ್ಯ ಅತಿಥಿ ಆಭರಣ ಮೋಟಾರ್ನ ಸಂಧ್ಯಾ ಸುಭಾಷ್‌ ಕಾಮತ್‌ ಅಭಿಪ್ರಾಯಪಟ್ಟರು.

ಸವಾಲು ಎದುರಿಸುವ ಸಂದೇಶ:

ತಾಯಂದಿರು ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮ ಪಟ್ಟಿದ್ದೀರಿ. ಸವಾಲನ್ನು ಮೆಟ್ಟಿ ನಿಂತು ಮುನ್ನಡೆಯುವ ಸಂದೇಶವನ್ನು ಬಿತ್ತರಿಸಲಾಗಿದೆ. ಉದಯವಾಣಿಯು ಕೈಗೊಳ್ಳುವ ಎಲ್ಲ ರೀತಿಯ ಚಟುವಟಿಕೆಗಳಿಗೆ ಜಯಲಕ್ಷ್ಮೀ ಸಿಲ್ಕ್ಸ್ ನ ಪ್ರೋತ್ಸಾಹ ನಿರಂತರವಾಗಿರುತ್ತದೆ ಎಂದು ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ನ ಅಪರ್ಣಾ ರವೀಂದ್ರ ಹೆಗ್ಡೆ ಭರವಸೆ ನೀಡಿದರು.

ಯಶೋದೆ-ಕೃಷ್ಣನಿಗೆ ಹೃದಯದಲ್ಲಿ ವಿಶೇಷ ಸ್ಥಾನ :

ನಮ್ಮ ಜೀವನ ಸಂಸ್ಕೃತಿಯ ಹೃದಯದಲ್ಲಿಯೇ ಯಶೋದೆ- ಕೃಷ್ಣನಿಗೆ ವಿಶೇಷ ಸ್ಥಾನವಿದೆ. ಮಕ್ಕಳ ಭವಿತವ್ಯವನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಹೇಗೆ ಮಹತ್ವಪೂರ್ಣವೋ ಅಂತೆಯೇ ಕೃಷ್ಣ ದೇವನಾಗಿಯೂ ಆತನ ವ್ಯಕ್ತಿತ್ವ ರೂಪಿಸುವಲ್ಲಿ ಯಶೋದೆ ಪಾತ್ರವೂ ಮಹತ್ವಪೂರ್ಣವಾಗಿದೆ. ಇದೇ ಕೃಷ್ಣ ತಾಯಿಗೆ ತನ್ನೊಳಗೆ ಬ್ರಹ್ಮಾಂಡವನ್ನೇ ತೋರಿಸಿದ ಎಂದು ಮಣಿಪಾಲ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ಬೆಟ್ಟುಮಾಡಿದರು.

ಸಂಸ್ಕೃತಿಯ ಬೇರನ್ನು ನೆನಪಿಸಿಕೊಡುವ ಉದಯವಾಣಿ ಪ್ರಯತ್ನಕ್ಕೆ ಪ್ರಾಯೋಜಕರಾದ ಜಯಲಕ್ಷ್ಮೀ ಸಿಲ್ಕ್ಸ್ ಮತ್ತು ಮಕ್ಕಳ ಪೋಷಕರು ಉತ್ತಮ ಸಹಕಾರ ನೀಡಿದ್ದಾರೆ. ಇಂತಹ ಪ್ರೋತ್ಸಾಹ ಮುಂದೆಯೂ ಸಿಗಲಿ ಎಂದು ವಿನೋದ್‌ ಕುಮಾರ್‌ ಹಾರೈಸಿದರು.

ಜಯಲಕ್ಷ್ಮೀ ಸಿ ಸಿಲ್ಕ್ಸ್ ನ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ ಶುಭ ಹಾರೈಸಿದರು. ಉದಯವಾಣಿ ಸಂಪಾದಕ ಅರವಿಂದ ನಾವಡ ಸ್ವಾಗತಿಸಿ ಎಂಎಂಎನ್‌ಎಲ್‌ ಉಪಾಧ್ಯಕ್ಷ ರಾಮಚಂದ್ರ ಮಿಜಾರು (ಮ್ಯಾಗಜಿನ್ಸ್‌ ಆ್ಯಂಡ್‌ ಸ್ಪೆಶಲ್‌ ಪ್ರಾಜೆಕ್ಟ್ಸ್)

ಕಾರ್ಯಕ್ರಮ ನಿರ್ವಹಿಸಿದರು. ಸುದ್ದಿ ಸಂಪಾದಕ ರಾಜೇಶ್‌ ಮೂಲ್ಕಿ ವಂದಿಸಿದರು. ರೀಜನಲ್‌ ಮೆನೇಜರ್‌ (ಮಾರುಕಟ್ಟೆ) ರಾಧಾಕೃಷ್ಣ ಕೊಡವೂರು ಬಹುಮಾನಿತರ ಪಟ್ಟಿ ವಾಚಿಸಿದರು. ವಿಜೇತರ ಪರವಾಗಿ ಯಶೋದೆಯರ ಪಾತ್ರ ನಿರ್ವಹಿಸಿದ ಮಧುಮತಿ, ವಿದ್ಯಾ, ಲೋಲಾಕ್ಷಿ, ಶ್ರುತಿ, ಚೈತ್ರಾ ಬೇಕಲ್‌, ರಕ್ಷತಾ ಭಟ್‌ ಅನಿಸಿಕೆ ವ್ಯಕ್ತಪಡಿಸಿ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಬಹುಮಾನ ವಿಜೇತರ ವಿವರ :

ಪ್ರಥಮ: ಅಭಿರಾಮ್‌ ಎಂ., ಮಧುಮತಿ ಎನ್‌., ಕಾಟುಕುಕ್ಕೆ, ಮಂಜೇಶ್ವರ ತಾ..

ದ್ವಿತೀಯ: 1. ಆರಾಧ್ಯ ಎ. ಶೆಟ್ಟಿ, ದಿವ್ಯಾ ಅನೂಪ್‌ ಶೆಟ್ಟಿ, ಹಿರೇಬೆಟ್ಟು, ಉಡುಪಿ.

  1. ಶಾನ್ವಿಕ್‌ ಮಿಥುನ್‌, ರಾಧಿಕಾ ಆನಂದ್‌, ಉರ್ವ ಸ್ಟೋರ್‌, ಮಂಗಳೂರು,
  2. ರಿಶಿಕಾ ಆರ್‌. ಪೂಜಾರಿ, ವಿದ್ಯಾಶ್ರೀ ಕೆ., ಕುಂಜಿಬೆಟ್ಟು, ಉಡುಪಿ.

ತೃತೀಯ: 1. ಅಧಿನಿ ಶೆಟ್ಟಿ, ಚೈತ್ರಾ ಶೆಟ್ಟಿ, ಕುಕ್ಕುಂದೂರು, ಕಾರ್ಕಳ, 2. ರೆಯಾನ್‌Ï, ಅಕ್ಷತಾ ಸಂದೇಶ್‌, ಹಳೆಯಂಗಡಿ, ಮಂಗಳೂರು, 3. ಅದ್ವಿ ಭಟ್‌ ಕೆ., ದಿವ್ಯಾ ಭಟ್‌, ಬೋಳುವಾರು, ಪುತ್ತೂರು, 4. ವಿವಾನ್‌ ಬಿ. ರಾವ್‌, ಚೈತ್ರಾ ಬೇಕಲ್‌, ಚಿಟಾ³ಡಿ, ಉಡುಪಿ., 5. ಆರವಿ ಆರ್‌., ಅಂಕಿತಾ, ಪರ್ಕಳ, ಉಡುಪಿ. 6. ನಿವ್ಯಾ ಪ್ರಶಾಂತ್‌, ರತ್ನಮಾಲಾ ಪ್ರಶಾಂತ್‌, ಅಲೆವೂರು, ಉಡುಪಿ.

ಸಮಾಧಾನಕರ ಬಹುಮಾನ: 1. ಸಿಯಾ ಅಶ್ವಿ‌ನ್‌ ರಾವ್‌, ಪ್ರಜ್ಞಾ ಬೇಕಲ್‌ ರಾವ್‌, ಸಪ್ತಗಿರಿ ನಗರ, ಮಣಿಪಾಲ, 2. ಕೃತಿ ಎ. ಕಾಂಚನ್‌, ಪ್ರತಿಮಾ ಕೋಟ್ಯಾನ್‌, ಕೋಟ ಪಡುಕರೆ, 3. ಪ್ರಣವಿ ಎಸ್‌. ಕೋಟ್ಯಾನ್‌, ಲೋಲಾಕ್ಷಿ, ಗುರುಪುರ ಕೈಕಂಬ, 4. ರಿತಿಕಾ ಭಟ್‌, ರಕ್ಷತಾ ಭಟ್‌, ಉರ್ವ ಮಾರ್ಕೆಟ್‌, 5. ದುವಾನ್‌ ಶೆಟ್ಟಿ, ಸ್ವಾತಿ ಶೆಟ್ಟಿ, ಹೊಯಿಗೆಬೈಲು, ಉರ್ವ,  6. ಅಥರ್ವ ಸುದೀಪ್‌ ಶೆಟ್ಟಿ, ಶ್ರುತಿ ಎಸ್‌. ಶೆಟ್ಟಿ, ಹಾವಂಜೆ, ಉಡುಪಿ, 7. ಧ್ವನಿ, ವಿದ್ಯಾ ಕಿರಣ್‌, ಕೋಡಿ, ಕುಂದಾಪುರ, 8. ಆಕರ್ಷ, ಡಾ| ಭಾರ್ಗವಿ ಮುರಳಿಕೃಷ್ಣ, ಪರ್ಕಳ, ಉಡುಪಿ, 9. ಸನ್ಮತಿ ಪ್ರಭು, ದಿವ್ಯಾ ನಾಯಕ್‌, ಕುಂದಾಪುರ, 10. ಚಿರಂತ್‌ ರೈ, ಶುಭಾ ರೈ, ಆರ್ಯಾಪು, ಪುತ್ತೂರು. 11. ಸಂವೇದ, ವಿದ್ಯಾ, ಮಂಗಳೂರು, 12. ತಸ್ವಿ ವಿ.ಎಸ್‌., ಸೌಮ್ಯಾ ವಿಶು, ನೆಟ್ಲಮುಟ್ನೂರು,  ಬಂಟ್ವಾಳ.

Advertisement

Udayavani is now on Telegram. Click here to join our channel and stay updated with the latest news.

Next