Advertisement

ಸಮಯವಿಲ್ಲ ಅಂದರೆ ಫ‌ಲವಿಲ್ಲ

09:14 PM Jul 26, 2020 | Karthik A |

ಸಮಯವೆಂದರೆ ಜೀವನವನ್ನು ರೂಪಿಸುವ ಅಮೂಲ್ಯ ಸಾಧನ. ಅದ್ಯಾವತ್ತೂ ನಮ್ಮನ್ನು ಕಾಯುವುದೇ ಇಲ್ಲ.

Advertisement

ಓಡುವ ಸಮಯದ ಜತೆ ನಾವೂ ಹೆಜ್ಜೆ ಹಾಕಿದರಷ್ಟೇ ಬಂತು. ಸಮಯವಿಲ್ಲ ಎಂದು ದೂರುತ್ತಾ ಕುಳಿತರೆ ಫ‌ಲವಿಲ್ಲ. ನೆನಪಿಡಿ! ಸಮಯ ಯಾವತ್ತೂ ನಮ್ಮ ಹಿಂದೆ ಬರುವುದಿಲ್ಲ.

ಅದರಲ್ಲೂ ಸಾಧಿಸುವ ವಯಸ್ಸಿನಲ್ಲಿ ಸಮಯ ಅತ್ಯಮೂಲ್ಯ. ಇದರ ಸದ್ಬಳಕೆ ಮಾಡಿಕೊಂಡರೆ ಬಾಳೆಲ್ಲ ಬಂಗಾರವಾಗಬಹುದು.ಈ ಓಡುವ ಸಮಯದ ಮಹತ್ತ್ವ ನನಗೂ ತಿಳಿದಿರಲಿಲ್ಲ. ಸಮಯ ವ್ಯರ್ಥ ಮಾಡಬೇಡ ಎಂದು ಮನೆಯಲ್ಲಿ ಹಿರಿಯರು ಎಷ್ಟೇ ತಿಳಿಹೇಳಿದರೂ ಅವರೆದುರು ನಾಟಕವಾಡುತ್ತಿದ್ದೆ ಹೊರತು ಪಾಲಿಸುತ್ತಿರಲಿಲ್ಲ.

ವಿದ್ಯಾಭ್ಯಾಸ ಸಮಯದಲ್ಲಿ ಕಂಪ್ಯೂಟರ್‌, ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದೆ. ಊಟೋಪಹಾರ, ಆಟದ ಸಮಯವನ್ನು ಮಾತ್ರ ಸರಿಯಾಗಿ ಪಾಲಿಸುತ್ತಿದ್ದೆ.  ಹೀಗಾಗಿ ಓದಲು ಸಮಯವಿಲ್ಲದೆ ಎಸೆಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದೆ. ಮನಸ್ಸಿಗೆ ಬೇಸರವಾದರೂ ಸಮಯ ಮೀರಿತ್ತು.

ಇನ್ನೆಂದೂ ಸಮಯ ವ್ಯರ್ಥ ಮಾಡಿ ಹೆತ್ತವರಿಗೆ ನಿರಾಸೆ, ನೋವು ತರಬಾರದೆಂದೂ ದೃಢ ನಿಶ್ಚಯಿಸಿದೆ. ಆಗಿಂದಲೇ ಸಮಯ ಪಾಲನೆಗೆ ಮುಂದಾದೆ. ಮನೋರಂಜನೆಗಿಂತ ವ್ಯಾಸಂಗಕ್ಕೆ ಹೆಚ್ಚಿನ ಗಮನಹರಿಸಿದೆ. ಹೀಗಾಗಿ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು. ನನಗಾದ ಅನುಭವ ಹಲವರಿಗೆ ಆಗಿರಬಹುದು. ಆದರೆ ಸಮಯದ ಮಹತ್ವ ಅರಿಯುವವರು ಕೆಲವರಷ್ಟೇ. ನನ್ನ ಸಮಯ ಪಾಲನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬ ಭರವಸೆಯಿದೆ.

Advertisement

ಸಮಯವೆಂಬುದು ಸದಾ ಖಾಲಿಯಾಗುತ್ತಲೇ ಇರುವ ಅಮೂಲ್ಯ ಖಜಾನೆ. ಈ ಖಜಾನೆ ಖಾಲಿಯಾಗುವುದರೊಳಗಾಗಿ ಸರಿಯಾಗಿ ಬಳಸಿಕೊಳ್ಳಬೇಕಷ್ಟೆ. ಸಮಯ ಪಾಲನೆ ರೂಢಿಸಿಕೊಂಡು ಒಳ್ಳೆಯ ಬದುಕು ರೂಪಿಸಿಕೊಳ್ಳೋಣ.


 ಗಿರೀಶ್‌ ಎಂ., ವಿ.ವಿ. ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next