ಶಿರಸಿ : ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರಾಜಭವನದಲ್ಲಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ನಿನ್ನೆ(ಮಂಗಳವಾರ, ಆಗಸ್ಟ್ 24) ಭೇಟಿ ಮಾಡಿದರು.
ಇದನ್ನೂ ಓದಿ : ಮಟ್ಟುವಿನಲ್ಲಿ ಮನೆಗೆ ಬೆಂಕಿ, ಸುಟ್ಟು ಕರಕಲಾದ ಮನೆಯ ಮೇಲ್ಛಾವಣಿ -50 ಸಾವಿರಕ್ಕೂ ಅಧಿಕ ನಷ್ಟ
ಕೆಲವೇ ಕೆಲವು ಸದಸ್ಯರ ಅನುಚಿತವಾದ ವರ್ತನೆ, ಗದ್ದಲದಿಂದಾಗಿ ಸಂಸತ್ತಿನ ಅಥವಾ ವಿಧಾನ ಮಂಡಲದ ಕಾರ್ಯ ಕಲಾಪಕ್ಕೆ ಪದೇ ಪದೇ ಅಡ್ಡಿಯಾಗುತ್ತಿದ್ದು, ಚರ್ಚೆಯಲ್ಲಿ ಪಾಲ್ಗೊಳ್ಳಲು ಬಯಸುವ ಸದಸ್ಯರ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ. ಈ ರೀತಿ ಆಗದಂತೆ ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ, ಭಾರತ ಸಂವಿಧಾನ ಕುರಿತಂತೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದನ್ನು ವಿವರಿಸಿದರು. ಪಕ್ಷಾಂತರ ಪಿಡುಗಿನ ನಿರ್ಮೂಲನೆಗೆ ಸಂವಿಧಾನದ ಹತ್ತನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಅಗತ್ಯತೆಯ ಬಗ್ಗೆಯೂ ಅವರೊಂದಿಗೆ ಚರ್ಚಿಸಿದರು ಎಂದು ಸ್ಪೀಕರ್ ಕಾರ್ಯಾಲಯದ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ: ಸಚಿವ ಹಾಲಪ್ಪ ಆಚಾರ್