Advertisement

ಉದಯವಾಣಿ-ಟಿಎಸ್‌ಎಸ್‌ ದೀಪಾವಳಿ ಧಮಾಕಾ ಬಹುಮಾನ ವಿತರಣೆ

10:33 AM Feb 09, 2018 | Team Udayavani |

ಉಡುಪಿ : ಉದಯವಾಣಿ – ಟಿಎಸ್‌ಎಸ್‌ ದೀಪಾವಳಿ ಧಮಾಕಾ – 2017 ಬಹುಮಾನ ವಿತರಣೆ ಸಮಾರಂಭ ಗುರುವಾರ ಮಣಿಪಾಲದ ಮಧುವನ್‌ ಸೆರಾಯ್‌ ಹೊಟೇಲ್‌ ಸಭಾಂಗಣದಲ್ಲಿ ಜರಗಿತು. ದೀಪಾವಳಿ ವಿಶೇಷಾಂಕದ ಓದುಗರಿಗಾಗಿ ಏರ್ಪಡಿಸಿದ ಪ್ರಶ್ನೆಗಳಿಗೆ ಸರಿ ಉತ್ತರ ಬರೆದ ಸುಮಾರು 7,800 ಉತ್ತರಗಳಲ್ಲಿ ಇತ್ತೀಚೆಗೆ ಡ್ರಾ ಎತ್ತಿ ವಿಜೇತರನ್ನು ಆಯ್ಕೆ ಮಾಡಲಾಗಿತ್ತು. ಬಹುಮಾನ ವಿತರಣೆಯನ್ನು ಉದಯವಾಣಿ ಮತ್ತು ಬಹುಮಾನ ಪ್ರಾಯೋಜಕ ರಾದ ಶಿರಸಿಯ ತೋಟಗಾರಿಕಾ ಸಹಕಾರಿ ಸಂಸ್ಥೆ ಟಿಎಸ್‌ಎಸ್‌ ಹಾಗೂ ಉಡುಪಿಯ ಉದಯ ಕಿಚನೆಕ್ಸ್ಟ್ ಮುಖ್ಯಸ್ಥರು ನೆರವೇರಿಸಿದರು. 

Advertisement

ಓದಬೇಕೆಂಬ ಹಂಬಲ “ತರಂಗ’ದ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಮಾತನಾಡಿ, ಬಹಳ ಶ್ರಮಪಟ್ಟು ಹೊರತಂದ ದೀಪಾವಳಿ ವಿಶೇಷಾಂಕ ವನ್ನು ಸಮಗ್ರವಾಗಿ ಓದುಗರು ಓದಬೇಕೆಂಬ ಉದ್ದೇಶದಿಂದ ಧಮಾಕ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಬಹುಮಾನಕ್ಕಾಗಿಯಾದರೂ ಓದುಗರು ಪೂರ್ಣವಾಗಿ ಓದುತ್ತಾರೆಂಬ ಹಂಬಲ ನಮ್ಮದು. ಈ ನಮ್ಮ ಉದ್ದೇಶ ಸಫ‌ಲವಾಗುತ್ತಿದೆ ಎಂದರು. 

ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ದೀಪಾವಳಿ ಧಮಾಕಾ ಯೋಜನೆ ಉತ್ತಮವಾದುದು. ಇಂತಹ ಪ್ರಯತ್ನದಿಂದ ಓದುಗರು
ಮತ್ತು ಪತ್ರಿಕೆಯ ನಡುವಿನ ಸಂಬಂಧ ವೃದ್ಧಿಯಾಗುತ್ತದೆ ಎಂಬುದಕ್ಕೆ ಇಂದು ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಓದುಗರೇ ಸಾಕ್ಷಿ. ಇದು ಕೇವಲ ಅಭಿಮಾನದಿಂದ ಮಾತ್ರ ಸಾಧ್ಯ ಎಂದು ಟಿಎಸ್‌ಎಸ್‌ ನಿರ್ದೇಶಕ ರವೀಂದ್ರ ಹೆಗಡೆ ಹೇಳಿದರು. ಮಣಿಪಾಲದ ಮುದ್ರಣ ಸಂಸ್ಥೆಗಳನ್ನು ನೋಡಿದಾಗ ಅಚ್ಚುಕಟ್ಟುತನ ನಮ್ಮನ್ನು ಆಕರ್ಷಿಸಿತು. ಇಷ್ಟು ದೊಡ್ಡ ಸ್ತರದ ಸಿಬಂದಿಗಳನ್ನು ನಿರ್ವಹಿಸುವುದೂ ಮಾದರಿ ಯಾದುದು ಎಂದರು. 

ಮಣಿಪಾಲ-ಟಿಎಸ್‌ಎಸ್‌ ಸಾಮ್ಯ ಮಣಿಪಾಲದ ಸಂಸ್ಥೆಗಳು ಮತ್ತು ಶಿರಸಿಯ ಟಿಎಸ್‌ಎಸ್‌ ಸಂಸ್ಥೆಗಳ ನಡುವೆ ಹಲವು
ಸಾಮ್ಯಗಳಿವೆ. ಎರಡೂ ಸಂಸ್ಥೆಗಳು ವ್ಯವಹಾರವನ್ನು ನಡೆಸುತ್ತಿವೆಯಾದರೂ ಗಾತ್ರದಲ್ಲಿ ಟಿಎಸ್‌ಎಸ್‌ ಚಿಕ್ಕದು. ಸಾಮಾಜಿಕ ಕಳಕಳಿ, ಸಿಬಂದಿ ಸಹಕಾರ ಇತ್ಯಾದಿಗಳಲ್ಲಿ ಸಾಮ್ಯಗಳಿವೆ ಎಂದು ಟಿಎಸ್‌ಎಸ್‌ ನಿರ್ದೇಶಕ ಆರ್‌.ಆರ್‌. ಹೆಗಡೆ ಅಭಿಪ್ರಾಯಪಟ್ಟರು. 

ಉದಯ ಕಿಚನೆಕ್ಸ್ಟ್ ಜಿಎಂ ಉಮೇಶ ಬಾಧ್ಯ ಅವರು ತಮ್ಮ ಸಂಸ್ಥೆ ಮುಂದೆಯೂ ಇಂತಹ ರಚನಾತ್ಮಕ ಕಾರ್ಯ ಕ್ರಮ ಗಳಿಗೆ ಪ್ರಾಯೋಜಕತ್ವ ನೀಡಲಿದೆ ಎಂದರು. ಟಿಎಸ್‌ಎಸ್‌ ಇನ್ನೋರ್ವ ನಿರ್ದೇಶಕ ವಿ.ವಿ. ಜೋಷಿ ಉಪಸ್ಥಿತರಿದ್ದರು. ದೀಪಾವಳಿ ಹಬ್ಬ ಸಂಭ್ರಮದ ಹಬ್ಬ. ಉದಯವಾಣಿ, ತರಂಗದ ದೊಡ್ಡ ಸಂಖ್ಯೆಯ ಓದುಗರಿಗೆ ಕೃತಜ್ಞತೆ ಸಲ್ಲಿಸಲು ಧಮಾಕಾ ಯೋಜನೆಯನ್ನು ಕೈಗೆತ್ತಿಕೊಂಡೆವು. ಇದರಿಂದ ರಾಜ್ಯದ ಮೂಲೆಮೂಲೆಗಳ ಓದುಗರನ್ನು ತಲುಪಲು ಸಾಧ್ಯವಾಯಿತು ಎಂದು ಅಧ್ಯಕ್ಷತೆ
ವಹಿಸಿದ್ದ ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಸಿಇಒ ವಿನೋದಕುಮಾರ್‌ ಹೇಳಿದರು. 

Advertisement

ನ್ಯಾಶನಲ್‌ ಹೆಡ್‌ (ಮೆಗಜಿನ್ಸ್‌ ಆ್ಯಂಡ್‌ ಸ್ಪೆಶಲ್‌ ಇನೀಶಿಯೇಟಿವ್ಸ್‌) ಆನಂದ್‌ ಕೆ. ಸ್ವಾಗತಿಸಿ ಪ್ರಸ್ತಾವನೆಗೈದರು. ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ವಂದಿಸಿದರು. ಉದಯವಾಣಿ ವಿಶೇಷಾಂಕದ ಸಂಪಾದಕ ಪೃಥ್ವೀರಾಜ್‌ ಕವತ್ತಾರು ವಿಜೇತರ ಹೆಸರನ್ನು ವಾಚಿಸಿ ಮಂಗಳೂರು ಬ್ಯೂರೋ ಮುಖ್ಯಸ್ಥ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರ್ವ ಹಿಸಿ ದರು. ಬಹುಮಾನ ವಿಜೇತರ ಪರವಾಗಿ ಸುಬ್ರಹ್ಮಣ್ಯ ಅಡಿಗ ಬಳ್ಕೂರು ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next