Advertisement

ಮೌಲ್ಯಾಧಾರಿತ ಸುದ್ದಿಗೆ “ಉದಯವಾಣಿ’ಎತ್ತಿದ ಕೈ: ಸಿಎಂ

11:45 PM Jan 25, 2022 | Team Udayavani |

ಬೆಂಗಳೂರು: “ಉದಯವಾಣಿ’ ಇಂದಿಗೂ ಮೌಲ್ಯಾ ಧಾರಿತ ಶುದ್ಧ ಸುದ್ದಿ ನೀಡುತ್ತಿರುವ ಪತ್ರಿಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.

Advertisement

ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ ಹೊರತಂದಿರುವ “ಸುವರ್ಣ ಸಂಪದ’ ವಿಶೇಷಾಂಕ ವನ್ನು ವಿಧಾನ ಸೌಧದ ಕಚೇರಿಯಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿ, “ಉದಯವಾಣಿ’ ಓದುಗರ ಹೃದಯದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ ಎಂದು ಹೇಳಿದರು.

ಕರಾವಳಿಯಿಂದ ಬಂದಂತಹ ಪತ್ರಿಕೆ ಬಯಲುಸೀಮೆ ಸೇರಿ ವಿಶಾಲ ಕರ್ನಾಟಕದಲ್ಲಿ ಯಶಸ್ವಿಯಾಗಲು ಜನಪರ ಮತ್ತು ಅಭಿವೃದ್ಧಿ ಪರ ನಿಲುವು ಹಾಗೂ ನಾಡಿನ ಕಾಳಜಿಯೊಂದಿಗೆ ಓದುಗರಲ್ಲಿ ಮೂಡಿಸಿ ರುವ ವಿಶ್ವಾಸವೇ ಕಾರಣ ಎಂದರು.

ಪೈ ಕುಟುಂಬದ ಕೊಡುಗೆ
ಕರಾವಳಿಯಷ್ಟೇ ಅಲ್ಲದೆ ರಾಜ್ಯಕ್ಕೆ ಪೈ ಕುಟುಂಬದವರ ಕೊಡುಗೆ ಇದೆ. ಮಣಿಪಾಲ ಪ್ರಸ್‌, ಆಸ್ಪತ್ರೆ ಸೇರಿದಂತೆ ಪೈ ಸಮೂಹ ಕಟ್ಟಿರುವ ಅನೇಕ ಸಂಸ್ಥೆಗಳು ಸಮಾಜಮುಖಿ ಸಂಸ್ಥೆಗಳಾಗಿದ್ದು ಇತರರಿಗೆ ಮಾದರಿ ಹಾಗೂ ಪ್ರೇರಣೆ. ಅದೇ ಹಾದಿಯಲ್ಲಿ ಪತ್ರಿಕಾ ಮೌಲ್ಯವನ್ನು “ಉದಯವಾಣಿ’ ಉಳಿಸಿಕೊಂಡಿದೆ ಎಂದು ಬಣ್ಣಿಸಿದರು.

ಬದಲಾದ ಕಾಲಘಟ್ಟ ಹಾಗೂ ಜಾಗತೀಕರಣದ ಫ‌ಲವಾಗಿ ಪತ್ರಿಕೆ ಗಳು ಸಹ ಬದಲಾಗುತ್ತಿವೆ. ಇದು ಅನಿವಾರ್ಯ. ಆದರೂ ಕಾಲಕ್ಕೆ ತಕ್ಕಂತೆ ಹೊಸತನ ಮೈಗೂಡಿಸಿಕೊಂಡು ಓದುಗರ ಪ್ರೀತಿಗೆ ಪಾತ್ರವಾಗಿದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಡಿಜಿಎಂ (ವ್ಯಾಪಾರಾಭಿವೃದ್ಧಿ) ಯು. ಸತೀಶ್‌ ಶೆಣೈ, ಬೆಂಗಳೂರು ಆವೃತ್ತಿಯ ಪ್ರಭಾರ ಸಂಪಾದಕ ಬಿ.ಕೆ. ಗಣೇಶ್‌, ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಅ.ಮ. ಸುರೇಶ್‌, ಉಪ ಮುಖ್ಯ ವರದಿಗಾರ ಎಸ್‌. ಲಕ್ಷ್ಮೀನಾರಾಯಣ, ವಿಶೇಷ ವರದಿಗಾರ ಶಂಕರ ಪಾಗೋಜಿ, ಜಾಹೀರಾತು ವಿಭಾಗದ ಮುಖ್ಯಸ್ಥ ಬಿ.ಕೆ. ಕೃಷ್ಣಪ್ಪ, ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ರಾಜಣ್ಣ ಹಾಗೂ ವಿರೂಪಾಕ್ಷ ಗೌಡ ಚಿಕ್ಕನಗೌಡ್ರ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next