Advertisement

ಪೊಲೀಸ್‌ ಜನಪರಕಾರ್ಯಕ್ಕೆ ಉದಯವಾಣಿ ಬೆಂಬಲ: ಸಿಇಒ

06:15 AM Aug 12, 2017 | Team Udayavani |

ಉಡುಪಿ: ಪೊಲೀಸರ ಜನ ಪರಕಾರ್ಯಗಳಿಗೆ “ಉದಯವಾಣಿ’ ಎಂದಿಗೂ ಬೆಂಬಲ ವಾಗಿರುತ್ತದೆ ಎಂದು ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್‌ಕುಮಾರ್‌ ಉಡುಪಿ ಜಿಲ್ಲಾ ಎಸ್‌ಪಿ ಆಗಿ ಅಧಿಕಾರವಹಿಸಿಕೊಂಡ ಡಾ| ಸಂಜಯ ಪಾಟೀಲ್‌ ಅವರಿಗೆ ಭರವಸೆ ನೀಡಿದರು.

Advertisement

ಆ. 11ರಂದು ಎಸ್‌ಪಿ ಕಚೇರಿಗೆ ಭೇಟಿ ನೀಡಿ”ಉದಯವಾಣಿ’ ಬಳಗದ ಪರವಾಗಿ ಪುಷ್ಪಗುತ್ಛವನ್ನು ನೀಡಿ ಶುಭ ಹಾರೈಸಿದ ವಿನೋದ್‌ ಕುಮಾರ್‌ ಅವರು ಪೊಲೀಸ್‌ ಇಲಾಖೆಯ ಸಮಾಜಮುಖೀ ಚಟುವಟಿಕೆಗಳಿಗೆ ಪತ್ರಿಕೆ ಸದಾ ಪ್ರೋತ್ಸಾಹ ನೀಡುತ್ತಾಬಂದಿದೆ. ಮುಂದೆಯೂ ಮುಂದುವರೆಯುತ್ತದೆ ಎಂದು ಹೇಳಿದರು.

ಕರಾವಳಿ ಕರ್ನಾಟಕದಲ್ಲಿ ಉದಯವಾಣಿ ಪತ್ರಿಕೆಯ ವಿಶ್ವಸಾರ್ಹತೆ, ಪ್ರಸರಣ ಮತ್ತು ವಸ್ತು ನಿಷ್ಠವಾದ ವರದಿಗಳ ಬಗ್ಗೆ ತಾವು ಕೇಳಿದ್ದೇವೆ. ಪತ್ರಿಕೆಯಿಂದ ಉತ್ತಮ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಡಾ| ಸಂಜಯ್‌ ಪಾಟೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next