Advertisement

ವರಮಹಾಲಕ್ಷ್ಮೀ ಹಬ್ಬ : ಖರೀದಿ ಜೋರು

06:46 PM Aug 20, 2021 | Shreeraj Acharya |

ಶಿವಮೊಗ್ಗ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಕೊರೊನಾ ಭೀತಿಯ ನಡುವೆಯೂ ಮಹಿಳೆಯರು ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದು ಕಂಡು ಬಂತು.

Advertisement

ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಬೆಲೆ ಏರಿತ್ತು. ಕಡಿಮೆ ಬೆಲೆಗೆ ಸಿಗುತ್ತಿದ್ದ ಹೂವು ಮತ್ತು ಹಣ್ಣುಗಳ ಬೆಲೆ ಗುರುವಾರ ದುಪ್ಪಟ್ಟಾಗಿತ್ತು. ಕೇ.ಜಿ. ಗೆ 100 ರಿಂದ 150 ರೂ.ಗೆ ಸಿಗುತ್ತಿದ್ದ ಕಾಕಡಾ ಹೂವು 250 ರೂ. ದಾಟಿತ್ತು. ಸೇವಂತಿಗೆ ಮಾರೊಂದಕ್ಕೆ 150 ರೂ. ಆಗಿತ್ತಲದೇ ಎಲ್ಲ ಬಿಡಿ ಹೂವುಗಳ ಬೆಲೆ ಕೇ.ಜಿ ಗೆ 200 ರೂ. ದಾಟಿತ್ತು.

ಬಾಳೆ ಕಂದು, ಬಾಳೆ ಎಲೆಯ ದರದಲ್ಲೂ ಬಹಳ ವ್ಯತ್ಯಾಸವಾಗಿತ್ತು. ಹಣ್ಣುಗಳ ದರವೂ ಏರಿತ್ತು. ಸೇಬು, ಬಾಳೆ ಹಣ್ಣು, ದಾಳಿಂಬೆ, ಪೇರಲೆ ಸೇರಿದಂತೆ ಎಲ್ಲ ಹಣ್ಣುಗಳ ಬೆಲೆಯೂ ಏರಿತ್ತು. ಆದರೂ, ಗ್ರಾಹಕರು ಹಣ್ಣು, ಹೂವು ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು.

ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಪ್ರಮುಖ ವಹಿವಾಟು ಕೇಂದ್ರಗಳಾದ ಗಾಂಧಿ  ಬಜಾರ್‌, ಶಿವಪ್ಪ ನಾಯಕ ಮಾರುಕಟ್ಟೆ, ಗೋಪಿ ವೃತ್ತ, ಎಪಿಎಂಸಿ ಮಾರುಕಟ್ಟೆ, ವಿನೋಬನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next