Advertisement
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುತ್ತದೋ ಇಲ್ಲವೋ ಎಂಬ ಭಯ ಎಲ್ಲರನ್ನೂ ಕಾಡುತ್ತಿತ್ತು. ಹಬ್ಬ ಸಮೀಪಿಸುತ್ತಿದ್ದಂತೆ ಸರ್ಕಾರ ನಿರ್ಬಂಧಗಳನ್ನು ವಿಧಿಸಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿರುವುದರಿಂದ ಈ ವರ್ಷ ಗಣಪತಿ ಮೂರ್ತಿಗೆ ಬೇಡಿಕೆ ಕುಸಿಯಲು ಕಾರಣವಾಗಿದೆ.
Related Articles
Advertisement
100 ರೂ.ನಿಂದ 15ಸಾವಿರ ರೂ. ಬೆಲೆಯ ಗಣೇಶಮೂರ್ತಿಗಳನ್ನು ತಯಾರು ಮಾಡಲಾಗಿದೆ. ಕುಂಬಾರ ಬೀದಿಯಲ್ಲಿ 13 ಕುಟುಂಬಗಳು ಗಣಪತಿ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು, ಏಕಾಂತ ರಾಮು, ಚೇತನ, ದಿನೇಶ್, ಸಣ್ಣಪ್ಪ, ರಾಜಣ್ಣ, ಪರ ಮೇಶ್ವರಪ್ಪ, ಸಿದ್ದೇಶ್, ಬಿ. ಎಸ್. ರೇಣುಕಾ, ಸಾಗರ್, ರಾಕೇಶ್, ದೇವರಾಜ್, ಸುಪ್ರಿತ್ ಅವರ ಕರದಲ್ಲಿ ಪರಿಸರ ಸ್ನೇಹಿ ಗಣಪತಿಗಳು ಸುಂದರವಾಗಿ ಮೂಡಿಬಂದಿವೆ ಎಂದರು.
ಸರ್ಕಾರ ಕೊನೆ ಘಳಿಗೆಯಲ್ಲಿ ಅನುಮತಿ ನೀಡಿದ್ದು ಈ ಬಾರೀ ಬೇಡಿಕೆ ಕುಸಿಯಲು ಕಾರಣವಾಗಿದೆ. ಕಳೆದ ವರ್ಷ 80-85 ಗಣಪತಿ ಮೂರ್ತಿಗಳನ್ನು ನಿರ್ಮಿಸಿದ್ದು ಈ ವರ್ಷ 100 ಗಣಪತಿ ಮೂರ್ತಿಗಳನ್ನು ಆರ್ಡರ್ ಪಡೆದುಕೊಳ್ಳಲಾಗಿದೆ. ಪ್ರತೀವರ್ಷ 100 ಗಣಪತಿ ತಯಾರಿಸಲಾಗುತ್ತಿತ್ತು. ಆದರೆ, ಕೋವಿಡ್ ನಿಂದ ಕಳೆದ ವರ್ಷ 40 ಗಣಪತಿ ಹಾಗೂ ಈ ವರ್ಷ 50 ಗಣಪತಿ ತಯಾರಿಸಲಾಗಿದೆ. ಸರ್ಕಾರ ಪರವಾನಗಿ ನೀಡೋದು ತಡಮಾಡಿದ್ದರಿಂದ ಆರ್ಡರ್ ಕೊಟ್ಟು ಗಣಪತಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಕುಂಬಾರ ಬೀದಿಯಲ್ಲಿ ಪ್ರತೀವರ್ಷ 2 ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡಲಾಗುತ್ತಿತ್ತು ಆದರೆ, ಕೋವಿಡ್ ನಿಂದ ಕಳೆದ ವರ್ಷಗಳಿಂದ ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ. ನಗರದ ಸುತ್ತಮುತ್ತಲ ಗ್ರಾಮೀಣಗಳಿಗೆ ಗಣಪತಿ ರೆಡಿ ಮಾಡಲಾಗಿದೆ. ಕೊನೇ ಘಳಿಗೆಯಲ್ಲಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಬರುತ್ತಿದೆ. ಈಗ ಮೂರ್ತಿ ತಯಾರಿಸಲು ಸಾಧ್ಯವಿಲ್ಲ ಎಂದು ಕಲಾವಿದ ದಿನೇಶ್ ಬೇಸರ ವ್ಯಕ್ತಪಡಿಸಿದರು.
ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಗಣಪತಿ ವಿಸರ್ಜನೆಗೆ ಅವಕಾಶ ಇಲ್ಲದಿರುವುದರಿಂದ ವಿಘ್ನೇಶ್ವರನಿಗೆ ಬೇಡಿಕೆ ಕುಸಿಯಲು ಪ್ರಮುಖ ಕಾರಣವಾಗಿದೆ. ಆದರೂ ಕಲಾವಿದರ ಕೈಯಲ್ಲಿ ಬಣ್ಣ- ಬಣ್ಣದ ವಿವಿಧ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೆ ರೆಡಿಯಾಗಿವೆ.
ಇದನ್ನೂ ಓದಿ : ಲಿಂಗಾಯತ ಮೀಸಲಾತಿ ಸಿಗದಿದ್ದರೆ ಮತ್ತೆ ಸತ್ಯಾಗ್ರಹ : ಬಸವ ಜಯಮೃತ್ಯುಂಜಯ ಸ್ವಾಮೀಜಿ