Advertisement
ಭದ್ರಾವತಿ : ಗಣಪತಿ ಹಬ್ಬಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ. ಕೋವಿಡ್ ಆರಂಭಗೊಂಡ ನಂತರದಲ್ಲಿ ಸಾರ್ವಜನಿಕ ಗಣಪತಿ ಸ್ಥಾಪನೆ, ಉತ್ಸವಾದಿಗಳಿಗೆ ಸರ್ಕಾರ ಅವಕಾಶ ನಿರಾಕರಿಸಿದ್ದ ಕಾರಣ ಕಳೆದ ವರ್ಷದಂತೆಈಬಾರಿಯೂ ಸಹ ಮಣ್ಣಿನ ಗಣಪತಿ ತಯಾರಿಸುವ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಗಣಪತಿ ತಯಾರಿಸುವ ಗೋಜಿಗೆ ಹೋಗದೆ ಕೆಲವೇ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ.
Related Articles
Advertisement
ಅನುಮತಿನಂತರಹೆಚ್ಚದಬೇಡಿಕೆ:ಸರ್ಕಾರಸಾರ್ವಜನಿಕಗಣಪತಿ ಪ್ರತಿಷ್ಠಾಪನೆಗೆ ಸರ್ಕಾರ ಷರತ್ತುಬದ್ಧವಾದ ಅನುಮತಿ ನೀಡುತ್ತಿದ್ದಂತೆ ಸಂಘ-ಸಂಸ್ಥೆಗಳಿಂದ ಗಣಪತಿ ಮೂರ್ತಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.
ಹಬ್ಬಕ್ಕೆಇನ್ನುಕೆಲವೇದಿನಗಳುಬಾಕಿಉಳಿದಿದ್ದರಿಂದಒಂದೆಡೆಬೇಡಿಕೆಗೆ ತಕ್ಕಷ್ಟು ಗಣಪತಿ ಮೂರ್ತಿ ಪೂರೈಸಲಾಗದೆ ಗಣಪತಿ ತಯಾರಿಸುವ ಕಲಾವಿದರು ಪೇಚಾಡುತ್ತಿದ್ದರೆ ಮತ್ತೂಂದೆಡೆ ಸಂಘ-ಸಂಸ್ಥೆಗಳು ಗಣಪತಿಮೂರ್ತಿ ಪಡೆಯಲು ಪರದಾಡುತ್ತಿದ್ದಾರೆ. ಸರ್ಕಾರ ಮುಂಚಿತವಾಗಿ ಆದೇಶ ಪ್ರಕಟಿಸಬೇಕಿತ್ತು ಗಣಪತಿ ತಯಾರಿಸುವ ಕಲಾವಿದರು ಹೇಳುವಂತೆ ಗಣಪತಿ ತಯಾರಿಕೆಗೆ ಮಣ್ಣನ್ನು ತಂದು ಹದಗೊಳಿಸಿ ಅದನ್ನು ಮಾಡಲು ಕೆಲವು ತಿಂಗಳು ಬೇಕಾಗುತ್ತದೆ. ಇದನ್ನು ಸರ್ಕಾರ ಗಮನಿಸಬೇಕು.
ಗಣಪತಿ ಹಬ್ಬ ಆಚರಿಸಬೇಕೇ ಬೇಡವೇ ಎಂಬ ಬಗ್ಗೆ ಹಬ್ಬ ಹತ್ತಿರಕ್ಕೆ ಬಂದಾಗ ಸರ್ಕಾರ ನಿರ್ಧರಿಸಿದರೆ ಬೇಡಿಕೆಗೆ ತಕ್ಕಷ್ಟು ಗಣಪತಿ ತಯಾರಿಕೆ ಪೂರೈಸಲು ಆಗುವುದಿಲ್ಲ. ಸರ್ಕಾರ ಇದನ್ನು ಗಮನಿಸಿ ಸಾಕಷ್ಟು ಪೂರ್ವಭಾವಿಯಾಗಿ ಚರ್ಚಿಸಿ ನಿರ್ಧಾರ ಪ್ರಕಟಿಸ ಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವಂಶಪಾರಂಪರ್ಯವಾಗಿ ಕುಂಬಾರ ವೃತ್ತಿಯ ಜೊತೆಗೆ ಗೌರಿ ಗಣಪತಿ ಮಣ್ಣಿನ ಮೂರ್ತಿ ತಯಾರಿಸುವ ಕಲಾವಿದ ರುದ್ರಪ್ಪ ಅವರ ಪತ್ನಿ ಹೇಳುವಂತೆ ಹಬ್ಬದ ಆಚರಣೆಯಿಂದ ಸಂಸ್ಕೃತಿ, ಕಲೆ, ಸಂಪ್ರದಾಯ ಎಲ್ಲವೂ ಉಳಿಯುವಂತಾಗುತ್ತದೆ.
ಆದರೆ ಈಗ ಕೊರೊನಾದಿಂದಾಗಿ ನಾಗರಿಕರಾದ ನಾವು ಸರ್ಕಾರದ ನಿಯಮ ಪಾಲನೆ ಮಾಡಬೇಕಾದ್ದರಿಂದ ಸರ್ಕಾರ ನಿಗಪಡಿಸಿದ ಚಿಕ್ಕಗಾತ್ರದ ಕೆಲವೇ ಮೂರ್ತಿಗಳನ್ನು ಮಾತ್ರ ತಯಾರಿಸಿದ್ದೇವೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಕೊರೊನಾ ಕರಿನೆರಳು ಈ ಬಾರಿಯೂ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮೇಲೆ ಬಿದ್ದಿದ್ದು ನಾಗರಿಕರು ಗಣೇಶೊತ್ಸವವನ್ನು ಆಚರಿಸುವಲ್ಲಿ ಸರ್ಕಾರದ ನಿಯಮಗಳನ್ನು ಹೇಗೆ ಪಾಲಿಸುತ್ತಾರೋ ಕಾದು ನೋಡಬೇಕಿದೆ.
ಇದನ್ನೂ ಓದಿ : 2023ರ ಚುನಾವಣೆಯಲ್ಲಿ ನೋಡೋಣ: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ರೇವಣ್ಣ ಚಾಲೆಂಜ್