Advertisement
ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಡಿ ಈ ದೇಶವನ್ನು ಕಾಪಾಡಿದ್ದಾರೆ. ಸ್ವಾತಂತ್ರಾ ನಂತರ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವನ್ನು ಬಗೆಹರಿಸಿ ಸಂಪನ್ಮೂಲಗಳನ್ನು ಸೃಷ್ಟಿಸಿ ಸಂಪದ್ಭರಿತ ದೇಶವಾಗಿ ನಿರ್ಮಿಸುವತ್ತ ಎಲ್ಲರೂ ಹೆಜ್ಜೆ ಇಡೋಣ ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.
Related Articles
Advertisement
ಸ್ವಾತಂತ್ರ ದೊರೆತ ಸಂದರ್ಭದಲ್ಲಿ ಅಲ್ಪಪ್ರಮಾಣದ ಅಕ್ಷರಸ್ಥರು, ಕೆಲವೇ ಶಾಲೆ-ಕಾಲೇಜುಗಳು ಇದ್ದವು. ಇಂದು ಪ್ರತಿ ಜಿಲ್ಲೆಗೊಂದು ವಿವಿ-ಮೆಡಿಕಲ್ ಕಾಲೇಜುಗಳನ್ನು ನಾವು ರೂಪಿಸಿದ್ದೇವೆ. ಅದನ್ನು ಮತ್ತಷ್ಟು ಉಜ್ವಲಮಟ್ಟಕ್ಕೆ ಒಯ್ದು ಎಲ್ಲರನ್ನು ಸುಶಿಕ್ಷಿತರನ್ನಾಗಿ, ಉದ್ಯೋಗಸ್ಥರನ್ನಾಗಿ, ಸುಪ್ರಜೆಗಳನ್ನಾಗಿ ರೂಪಿಸಿ ಸದೃಢ ಭಾರತ ನಿರ್ಮಿಸಿಸಬೇಕಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸ್ವಾತಂತ್ರ್ಯ ಪಡೆಯಲು ಹೋರಾಡಿದ ಗಾಂಧೀಜಿ, ನೆಹರೂ, ಅಂಬೇಡ್ಕರ್‌ರಷ್ಟೇ ಪ್ರಮುಖವಾಗಿ ಸ್ಥಳೀಯ ನಾಯಕರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಬ್ಬಕ್ಕ, ಈಸೂರು, ಶಿವಪುರಗಳ ಸ್ವಾತಂತ್ರ ಯೋಧರನ್ನು ನೆನೆದು, ಗೌರವಿಸಬೇಕಿದೆ. ಭಾರತ ಸ್ವಾತಂತ್ರÂದ ಅಮೃತ ಮಹೋತ್ಸವದಡಿ ವರ್ಷವಿಡೀ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಸೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ಉನ್ನತ ಶಿಕ್ಷಣ ಪರಿಷತ್ ಕುವೆಂಪು ವಿವಿಗೆ ಜವಾಬ್ದಾರಿ ವಹಿಸಿದೆ ಎಂದರು.
ಭಾರತ ಸೇನೆಯಲ್ಲಿ 15 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಯೋಧರಾದ ಬಿ ವೀರಸ್ವಾಮಿ ನಾಯ್ಕ , ರಾಜಶೇಖರ್ ನಾಯ್ಕ , ದಯಾನಂದ್ ಎಂ. ನಾಯ್ಕ , ಶಿವಾನಂದ ಮೂರ್ತಿ ನಾಯ್ಕ , ದೇವಸಗಾಯಂ ಅವರುಗಳನ್ನು ಸನ್ಮಾನಿಸಲಾಯಿತು. ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ವಿವಿ ಕುಲಸಚಿವೆ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಪ್ರೊ| ಸಿ.ಎಂ. ತ್ಯಾಗರಾಜ್, ಹಣಕಾಸು ಅಧಿ ಕಾರಿ ಎಚ್. ರಾಮಕೃಷ್ಣ, ಡಾ| ವಿರೂಪಾಕ್ಷ, ಡಾ| ಪರಿಸರ ನಾಗರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಯ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
ಇದನ್ನೂ ಓದಿ : ಅಜ್ಜಿಯ ಹಲ್ಲಿನ ಸೆಟ್ ಹಾಳು ಮಾಡಿದ ಹಸುಳೆಯ ಹತ್ಯೆ: ಆರೋಪಿ ಬಂಧನ