Advertisement
ಅಭಿವೃದ್ಧಿಪರ ವರದಿಕರಾವಳಿಯ ದ.ಕ. ಹಾಗೂ ಉಡುಪಿ ಜಿಲ್ಲೆಗೆ ಹೋಲಿಸಿದರೆ ಮೊದಲಿನಿಂದಲೂ ಉತ್ತರ ಕನ್ನಡ ಸ್ವಲ್ಪ ಹಿಂದುಳಿದಿದೆ. ಆ ಭಾಗದಲ್ಲಿ ಆದಷ್ಟು ಅಭಿವೃದ್ಧಿ ಇಲ್ಲಿ ಆಗಿಲ್ಲ. ಆದರೆ ಜೀಯು ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಶೋತ್ತರ ಪರ ವರದಿಗಳನ್ನು ಬರೆಯುತ್ತಾ ಜನರ ಧ್ವನಿಯಾಗಿರುವುದು ಈ ಭಾಗದ ಜನರ ಹೆಮ್ಮೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ್ ಯು. ಪೈ ಅವರು ಜೀಯು ದಂಪತಿಗೆ ಶುಭ ಹಾರೈಸಿದರು.
ಮನುಷ್ಯನ ಜೀವನದಲ್ಲಿ ಸಾರ್ಥಕತೆ ಎನ್ನುವುದು ಅವನು ಬದುಕುವ ಸಮಾಜದಲ್ಲಿ ಯಾವ ಸ್ಥಾನ ಗಳಿಸಿದ್ದಾನೆ ಎನ್ನುವುದರಿಂದ ನಿರ್ಣಯಿಸಲ್ಪ ಡುತ್ತದೆ. ಈ ಕಾರ್ಯಕ್ರಮದಲ್ಲಿ ಸೇರಿದ ಜನತೆಯೇ ಜೀಯು ಅವರು ಬದುಕಿನಲ್ಲಿ ಸಮಾಜದಲ್ಲಿ ಗಳಿಸಿದ ಸ್ಥಾನ ತೋರಿಸುತ್ತದೆ ಎಂದು “ತರಂಗ’ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರು ಹೇಳಿದರು.
Related Articles
ಪೈ ಕುಟುಂಬ ರಾಜಧಾನಿ ಬೆಂಗಳೂರು ಬಿಟ್ಟು ಮಣಿಪಾಲ ಎನ್ನುವ ಚಿಕ್ಕ ಹಳ್ಳಿಯಿಂದ ರಾಜ್ಯ ಮಟ್ಟದ ಪತ್ರಿಕೆ “ಉದಯವಾಣಿ’ ಯನ್ನು ಆರಂಭಿಸಿ ಕರ್ನಾಟಕದ ಹೆಮ್ಮೆಯ ಪತ್ರಿಕೆಯನ್ನಾಗಿ ಬೆಳೆಸಿದೆ. ಉತ್ತಮ ಮುದ್ರಣ ಹಾಗೂ ಮಾಹಿತಿ-ಹೂರಣಗಳಿಂದ “ಉದಯವಾಣಿ’ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ. ಪೈ ಸಹೋದರರ ಶ್ರಮ ಅನನ್ಯವಾದದ್ದು. ಇಂದು ಮುದ್ರಣ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಮಣಿಪಾಲ ಜಗತ್ತಿನಲ್ಲಿಯೇ ಗುರುತಿಸಿಕೊಂಡಿದೆ. ಅಲ್ಲದೇ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಗೂ ಇವರ ಕೊಡುಗೆ ದೊಡ್ಡದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
Advertisement