Advertisement
ಉದಯವಾಣಿಯಲ್ಲಿ ಏ.12ರಂದು “ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ, ಇಲಾಖೆಗಳನಿರ್ಲಕ್ಷ್ಯ ಧೋರಣೆಯನ್ನು ತಿಳಿಸುವುದರೊಂದಿಗೆ ಜನರು ಹಬ್ಬಕ್ಕೆ ನೀರಿಲ್ಲದಿರುವ ಕುರಿತು ಗಮನ ಸೆಳೆಯಲಾಗಿತ್ತು.
Related Articles
Advertisement
ಗುಡ್ಡದ ಮೇಲಿರುವ ಹಳೆಯ ವಿದ್ಯುತ್‌ಕಂಬಗಳನ್ನು ಬದಲಾಯಿಸಿ ಹೈಟೆಕ್ ವ್ಯವಸ್ಥೆಮಾಡಲು ಹೊರಟ ವಿದ್ಯುತ್ ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸುವಾಗ ಜೆಸಿಬಿ ಯಂತ್ರಕ್ಕೆ ಸಿಲುಕಿ ಈ ಟ್ಯಾಂಕ್‌ಗೆ ನೀರುಸರಬರಾಜಾಗುವ ಕೊಳವೆ ಒಡೆದುಹೊಗಿತ್ತು. ಹೀಗಾಗಿ ನೀರು ಗುಡ್ಡದಲ್ಲೇ ಸೋರಿಕೆಯಾಗುತ್ತಿರು ವುದರಿಂದ ಗ್ರಾಮಗಳಿಗೆ ನೀರುಪೂರೈಕೆ ಆಗುತ್ತಿಲ್ಲ.
ಕೊಳವೆಗೆ ಹಾನಿಯಾದ ತಕ್ಷಣವೇ ವಿದ್ಯುತ್ ಇಲಾಖೆಯ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಯಾರಿಗೂ ಹೇಳದೆ ಅಲ್ಲಿಂದ ವಾಪಸ್ಸಾಗಿ ಮೌನ ವಹಿಸಿದರು. ಹೀಗಾಗಿಎರಡು ದಿನ ಗ್ರಾಮಸ್ಥರು ನೀರಿಗಾಗಿ ಪರಿತಪಿಸಿದ್ದರು. ಉದಯವಾಣಿಯಲ್ಲಿ ಪ್ರಕಟಗೊಂಡ ಸಮಗ್ರವರದಿಯನ್ನು ನಂಜನಗೂಡು ಗ್ರಾಮೀಣ ನೀರುಸರಬರಾಜು ಅಧಿಕಾರಿ ಚರಿತಾ ಅವರು ಬೆಳಗ್ಗೇಯೇ ವಿದ್ಯುತ್ ಇಲಾಖೆ ಹಾಗೂ ಸೆಸ್ಕ್ಗಗಮನಕ್ಕೆ ತಂದಿದ್ದರು.
ಈ ವರದಿಯನ್ನುಸಂಬಂಧಿಸಿದ ಅಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದರು. ಜೊತೆಗೆ ತ್ವರಿತವಾಗಿಕೊಳವೆಯನ್ನು ದುರಸ್ತಿಪಡಿಸದಿದ್ದರೆ ಇಲಾಖೆ ವಿರುದ್ಧ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಎಚ್ಚೆತ್ತುಕೊಂಡ ವಿದ್ಯುತ್‌ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಂಜೆಯೇ ಕೊಳವೆ ಒಡೆದಿರುವ ಸ್ಥಳಕ್ಕೆಧಾವಿಸಿ, ದುರಸ್ತಿ ಕಾರ್ಯ ಕೈಗೊಂಡು ಬೃಹತ್ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಸಂಪರ್ಕಿಸುವ ವ್ಯವಸ್ಥೆ ಮಾಡಿದರು. ಬಳಿಕ 16 ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿತ್ತು. ಹಬ್ಬದ ದಿನ ನೀರಿಲ್ಲದೆ ಕಂಗಾಲಾಗಿದ್ದ ಜನರು ನೀರು ಬರುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.