Advertisement
ಪತ್ರಿಕೆಯಲ್ಲಿ ಸುದ್ದಿಯು ಪ್ರಸಾರವಾದ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಇಂದು ಕೆರೆ ಏರಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆ ಏರಿ ಬಿರುಕು ಬಿಟ್ಟಿರುವುದು ಹಾಗೂ ಕೆರೆಯ ಸುತ್ತಲೂ ಬೆಳೆದಿರುವ ಗಿಡ ಮರಗಳನ್ನು ನೋಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯು ಕೆರೆ ಪುನಶ್ಚೇತನಕ್ಕೆ ೨೫ ಲಕ್ಷ ಹಣ ಬಿಡುಗಡೆ ಮಾಡಿರುತ್ತದೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ 25 ಲಕ್ಷ ಟೆಂಡರ್ ಕರೆದಿರುವ ಅಧಿಕಾರಿಗಳು ಶೀಘ್ರದಲ್ಲೇ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇಂಜಿನಿಯರ್‌ಗಳು ಕೆರೆ ಹತ್ತಿರ ಬರುತ್ತಿದ್ದಂತೆ ಸ್ಥಳೀಯರು ಹಾಗೂ ರೈತರು ಆಕ್ರೋಶಭರಿತರಾಗಿದ್ದರು. ನಂತರ ಅಧಿಕಾರಿಗಳು ಅವರ ಮನವೊಲಿಸಿ ಶೀಘ್ರದಲ್ಲೇ ಸರಿಪಡಿಸುತ್ತೇವೆ ಎಂದು ಸಮಾಧಾನಪಡಿಸಿದರು.
Related Articles
Advertisement
ವರದಿ ಮಾಡಿ ಸುಮ್ಮನಿರುವುದಲ್ಲ ಉದಯವಾಣಿ ಪತ್ರಿಕೆಯ ಕೆಲಸ, ವರದಿಗೆ ತಕ್ಕ ಫಲಶ್ರುತಿಯನ್ನು ಕೊಡುವುದೇ ನಮ್ಮ ಮುಖ್ಯ ಉದ್ದೇಶ. ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯ ನಡೆಯುತ್ತಿದ್ದರೂ ನೋಡಿ ಸುಮ್ಮನೆ ಕೂರುವುದಲ್ಲ ನಮ್ಮ ಸುದ್ದಿ ಪತ್ರಿಕೆ.